ಬಿಎಸ್ವೈ ತಾಕತ್ತು ತಿಳಿದು ಮತ್ತೊಂದು ಆಫರ್ ನೀಡಿ, ಹೊಸ ಜವಾಬ್ದಾರಿ ನೀಡಿದ ಅಮಿತ್ ಶಾ !

ಬಿಎಸ್ವೈ ತಾಕತ್ತು ತಿಳಿದು ಮತ್ತೊಂದು ಆಫರ್ ನೀಡಿ, ಹೊಸ ಜವಾಬ್ದಾರಿ ನೀಡಿದ ಅಮಿತ್ ಶಾ !

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷವು ಇಂದು ಭದ್ರವಾಗಿ ನೆಲೆಯೂರಲು ನೇರವಾಗಿ ಬಿಎಸ್ ಯಡಿಯೂರಪ್ಪನವರು ಕಾರಣ ಎಂದರೆ ತಪ್ಪಾಗಲಾರದು. ರಾಜ್ಯದ ಮೂಲೆ ಮೂಲೆಗಳಿಗೂ ಹೋಗಿ ಬಿಜೆಪಿ ಪಕ್ಷವನ್ನು ಹಲವಾರು ವರ್ಷಗಳಿಂದಲೂ ಕಟ್ಟಿ ಯಡಿಯೂರಪ್ಪನವರು ಬೆಳೆಸಿದ್ದಾರೆ. ಬಿಜೆಪಿ ಪಕ್ಷದ ಅಸ್ತಿತ್ವವೇ ಇಲ್ಲದಂತಹ ರಾಜ್ಯದಲ್ಲಿ ತಾವೇ ಖುದ್ದು ಸೈಕಲ್ ಗಳಲ್ಲಿ ಹಳ್ಳಿ ಹಳ್ಳಿಗೂ ತಿರುಗಿ ಬಿಜೆಪಿ ಪಕ್ಷವನ್ನು ಇಂದು ಕರ್ನಾಟಕದಲ್ಲಿಯೇ ಅತಿದೊಡ್ಡ ಪಕ್ಷವನ್ನಾಗಿ ಮಾಡಿದ್ದಾರೆ. ಇವರ ಜೊತೆಗೆ ಹಂತಹಂತವಾಗಿ ನಾಯಕರು ಮತ್ತಷ್ಟು ಸೇರಿಕೊಂಡು ಇಡೀ ಕರ್ನಾಟಕದಲ್ಲಿ ಎಂದು ಬಿಜೆಪಿ ಪಕ್ಷವು ಅತಿದೊಡ್ಡ ಪಕ್ಷವಾಗಿ ಬೆಳೆದು ನಿಂತಿದೆ.

ಒಂದು ಮಾತಿನಲ್ಲಿ ಹೇಳಬೇಕೆಂದರೆ ರಾಜ್ಯದಲ್ಲಿ ಬಿಜೆಪಿಯ ಪ್ರತಿಯೊಂದು ಬೆಳವಣಿಗೆಗೂ ಯಡಿಯೂರಪ್ಪನವರು ಬೆನ್ನೆಲುಬಾಗಿ ನಿಂತಿದ್ದಾರೆ. ಇದನ್ನು ಹೈಕಮಾಂಡ್ ಸಹ ಒಪ್ಪಿಕೊಂಡಿದೆ, ಹಲವಾರು ಬಾರಿ ಯಡಿಯೂರಪ್ಪನವರ ಮೇಲೆ ಆರೋಪಗಳು ಕೇಳಿ ಬಂದರೂ ಸಹ ಕ್ಯಾರೆ ಎನ್ನದೆ ಅವರ ಮೇಲೆ ನಂಬಿಕೆ ಇಟ್ಟು ಕಳೆದ ಚುನಾವಣೆಯನ್ನು ಸಹ ಅವರ ನೇತೃತ್ವದಲ್ಲಿ ಎದುರಿಸಲು ಬಿಜೆಪಿ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಿತ್ತು. ಹೀಗಿರುವಾಗ ಇದೀಗ ಮತ್ತೊಮ್ಮೆ ಬಿಎಸ್ವೈ ರವರ ತಾಕತ್ತನ್ನು ಅರ್ಥಮಾಡಿಕೊಂಡಿರುವ ಅಮಿತ್ ಶಾ ಹಾಗೂ ತಂಡವು ಯಡಿಯೂರಪ್ಪನವರಿಗೆ ಮತ್ತೊಂದು ಆಫರ್ ನೀಡಿ, ಹೊಸ ಜವಾಬ್ದಾರಿ ನೀಡಿದ ನೀಡಲಾಗಿದೆ. ಸಂಪೂರ್ಣ ವಿವರ ಹಾಗೂ ಕಾರಣಕ್ಕಾಗಿ ಕೆಳಗಡೆ ಓದಿ.

ಇತ್ತೀಚೆಗೆ ರಾಜ್ಯದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಕುರ್ಚಿಯ ಆಕಾಂಕ್ಷಿಯಾಗಿದ್ದಾರೆ ಹಾಗೂ ಯಾವ ಕ್ಷಣದಲ್ಲಿ ಬೇಕಾದರೂ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬಹುದು, ಆದ ಕಾರಣದಿಂದ ಯಡಿಯೂರಪ್ಪನವರ ಬಳಿ ಇರುವ ರಾಜ್ಯಾಧ್ಯಕ್ಷ ಹುದ್ದೆಯನ್ನು ಬೇರೊಬ್ಬರಿಗೆ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಇದಕ್ಕೆ ಹಲವಾರು ಬಿಜೆಪಿ ನಾಯಕರು ಸಹ ಹೈಕಮಾಂಡ್ನ ಬಳಿ ಒತ್ತಡ ಹೇರುತ್ತಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿದ್ದವು. ಆದರೆ ಇದೀಗ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷವು ಮತ್ತೊಮ್ಮೆ ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯವನ್ನು ಹಮ್ಮಿಕೊಳ್ಳುತ್ತಿದೆ.

ಕನಿಷ್ಠ 50 ಲಕ್ಷ ಹೊಸ ಸದಸ್ಯರನ್ನು ನೊಂದಣಿ ಮಾಡುವ ಮಹತ್ವಾಕಾಂಕ್ಷೆಯ ಯೋಜನೆಯ ಮಹತ್ವವನ್ನು ಅರಿತಿರುವ ಬಿಜೆಪಿ ಪಕ್ಷದ ಹೈಕಮಾಂಡ್ ಮತ್ತೊಮ್ಮೆ ಇದರ ನೇತೃತ್ವವನ್ನು ಬಿಎಸ್ ಯಡಿಯೂರಪ್ಪ ನವರಿಗೆ ನೀಡಿದೆ ಅಷ್ಟೇ ಅಲ್ಲದೆ ಸದ್ಯಕ್ಕೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂಬುದನ್ನು ಸಹ ಖಚಿತಪಡಿಸಿದೆ. ಕನಿಷ್ಠ ಇನ್ನೂ ಐದು ತಿಂಗಳುಗಳ ಕಾಲ ಯಡಿಯೂರಪ್ಪನವರು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದು ಈ ಮೂಲಕ ಖಚಿತವಾಗಿದ್ದು, ಅಮಿತ್ ಶಾ ರವರು ರಾಷ್ಟ್ರಾಧ್ಯಕ್ಷರಾಗಿ ಇರುವ ಅಷ್ಟುಕಾಲ ಯಡಿಯೂರಪ್ಪನವರು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂಬ ವಿಷಯ ಉನ್ನತ ಮೂಲಗಳಿಂದ ತಿಳಿದು ಬಂದಿದ್ದು, ಯಡಿಯೂರಪ್ಪನವರ ವಿರುದ್ಧ ಕತ್ತಿ ಮಸೆಯುತ್ತಿದ್ದ ಬಿಜೆಪಿ ಪಕ್ಷದ ಕೆಲವು ನಾಯಕರಿಗೆ ಮತ್ತೊಮ್ಮೆ ಶಾಕ್ ಆಗಿದೆ.