ಜೆಡಿಎಸ್ ಪಕ್ಷಕ್ಕೆ ಮರ್ಮಾಘಾತ, ವಿಶ್ವನಾಥ್ ನಂತರ `ಜೆಡಿಎಸ್’ ವಿರುದ್ಧ ಸಿಡಿದೆದ್ದ ಹಿರಿಯ ನಾಯಕ

ಜೆಡಿಎಸ್ ಪಕ್ಷಕ್ಕೆ ಮರ್ಮಾಘಾತ, ವಿಶ್ವನಾಥ್ ನಂತರ `ಜೆಡಿಎಸ್’ ವಿರುದ್ಧ ಸಿಡಿದೆದ್ದ ಹಿರಿಯ ನಾಯಕ

ಯಾಕೋ ಜೆಡಿಎಸ್ ಪಕ್ಷದ ಅದೃಷ್ಟ ಚೆನ್ನಾಗಿ ಇದ್ದಂತೆ ಕಾಣುತಿಲ್ಲ, ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಏರಿದ ಮೇಲೆ ಒಂದಲ್ಲ ಒಂದು ತೊಂದರೆಗಳನ್ನು ಎದುರಿಸುತ್ತಿರುವ ಜೆಡಿಎಸ್ ಪಕ್ಷಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಅಧಿಕಾರದ ಚುಕ್ಕಾಣಿ ಇಡಿದ ನಂತರ ಸರ್ಕಾರ ಉಳಿಸಿಕೊಳ್ಳಲು ಹರಸಾಹಸಗಳ ನಡುವೆ ಟೀಕೆಗಳ ಸುರಿಮಳೆ, ಇದೆಲ್ಲ ಆದ ನಂತರ ಆಂತರಿಕ ಕಚ್ಚಾಟ, ಮೈತ್ರಿಯಲ್ಲಿ ಕ್ಷಣಕ್ಕೊಂದು ಬಿರುಕು, ಲೋಖಾಸಭಾ ಚುನಾವಣೆಯಲ್ಲೂ ಹೀನಾಯ ಸೋಲು ಹೀಗೆ ಒಂದಲ್ಲ ಒಂದು ತೊಂದರೆಗಳನ್ನೂ ಎದುರಿಸುತ್ತಿರುವ ಜೆಡಿಎಸ್ ಪಕ್ಷದಲ್ಲಿ ಇದೀಗ ಆಂತರಿಕ ಕಚ್ಚಾಟ ಶುರುವಾಗಿದ್ದು, ಜೆಡಿಎಸ್ ಪಕ್ಷದ ಕುಟುಂಬ ರಾಜಕಾರಣದ ವಿರುದ್ಧ ಜೆಡಿಎಸ್ ಪಕ್ಷದ ಹಿರಿಯ ನಾಯಕ ಸಿಡಿದೆದ್ದಿದ್ದಾರೆ.

ಇತ್ತೀಚೆಗಷ್ಟೇ ಜೆಡಿಎಸ್ ಪಕ್ಷದ ಹಿರಿಯ ನಾಯಕ ವಿಶ್ವನಾಥ್ ರವರು ಮೈತ್ರಿ ಪಕ್ಷವಾದ ಕಾಂಗ್ರೆಸ್ ಪಕ್ಷದ ಮೇಲೆ ಟೀಕೆಗಳ ಸುರಿಮಳೆಯನ್ನು ಸುರಿಸಿ, ಚುನಾವಣೆಯ ಸೋಲಿಗೆ ಜವಾಬ್ದಾರಿ ತೆಗೆದುಕೊಂಡು ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದರು, ಆದರೆ ಅಸಲಿ ಕಾರಣ ಎಲ್ಲರಿಗೂ ತಿಳಿದಿತ್ತು. ಇದೀಗ ಜೆಡಿಎಸ್ ಪಕ್ಷದ ಮತ್ತೊಬ್ಬ ಹಿರಿಯ ನಾಯಕ ವೈಎಸ್ ವಿ ದತ್ತಾ ಅವರು ಜೆಡಿಎಸ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಹೌದು, ಆದರೆ ವೈಎಸ್ ವಿ ದತ್ತಾ ಅವರು ಚುನಾವಣೆಯ ಸೋಲಿಗಾಗಿ ಅಸಮಾಧಾನಗೊಂಡಿಲ್ಲ, ಬದಲಾಗಿ ಜೆಡಿಎಸ್ ಪಕ್ಷಕ್ಕೆ ಮೊದಲಿಂದಲೂ ಹಣೆಪಟ್ಟಿಯಂತೆ ಅಂಟುಕೊಂಡಿರುವ ಕುಟುಂಬ ರಾಜಕಾರಣ ವಿರುದ್ಧ.

ಹೌದು, ಇತ್ತೀಚಗಷ್ಟೇ ರಾಜಕೀಯ ಪ್ರವೇಶಿಸಿರುವ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ರವರ ಅಧ್ಯಕ್ಷರ ಸ್ಥಾನದ ಕುರಿತು ವೈಎಸ್ ವಿ ದತ್ತಾ ಅವರು ಧ್ವನಿ ಎತ್ತಿದ್ದಾರೆ, ಮೊದಲಿಂದಲೂ ಪಕ್ಷ ಕಟ್ಟಿ ಬೆಳೆಸಿದ ಕಾರ್ಯಕರ್ತರನ್ನು ಜೆಡಿಎಸ್ ಪಕ್ಷದಲ್ಲಿ ಕಡೆಗಣಿಸಿ ಕುಟುಂಬ ರಾಜಾಕಾರಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದವು, ಇದೀಗ ಇದೇ ವಿಷಯವಾಗಿ ಧ್ವನಿ ಎತ್ತಿರುವ ವೈಎಸ್ ವಿ ದತ್ತಾ ಅವರು ಜೆಡಿಎಸ್ ಪಕ್ಷದ ಯುವ ಮೋರ್ಚ ಅಧ್ಯಕ್ಷ ಸ್ಥಾನ ಸೇರಿದಂತೆ ಪ್ರಮುಖ ಸ್ಥಾನದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಇದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವೈಎಸ್ ವಿ ದತ್ತಾ, ನಿಖಿಲ್ ಹಾಗೂ ಪ್ರಜ್ವಲ್ ರೇವಣ್ಣ ಅವರಿಗೆ ಈಗಾಗಲೇ ಸಾಕಷ್ಟು ಪ್ರಚಾರ ದೊರೆತಿದೆ. ಇನ್ನೂ ಯುವ ಮೋರ್ಚಾದ ಪ್ರಮುಖ ಹುದ್ದೆಗಳಲ್ಲಿ ಅವರು ಮುಂದುವರೆಯುವುದು ಸೂಕ್ತವಲ್ಲ. ಹೀಗಾಗಿ ಅವಕಾಶ ವಂಚಿತ ಯುವಕರಿಗೆ ಯುವ ಮೋರ್ಚ ಅಧ್ಯಕ್ಷ ಹುದ್ದೆ ನೀಡಿವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ದಿನಕ್ಕೊಂದು ಸವಾಲುಗಳನ್ನು ಎದುರಿಸುತ್ತಿರುವ ಜೆಡಿಎಸ್ ಪಕ್ಷವು ಒಂದೆಡೆ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಸೂಚನೆ ನೀಡಿತ್ತು, ಆದರೆ ಒಂದು ಸಮಸ್ಯೆ ನಿವಾರಣಾ ಆಗಿದೆ ಎನ್ನುವಷ್ಟರಲ್ಲಿ ಮತ್ತೆರಡು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಇದು ಹೀಗೆ ಮುಂದುವರೆದಲ್ಲಿ ಜೆಡಿಎಸ್ ಪಕ್ಷವು ಚುನಾವಣಾ ಸಮಯದಲ್ಲಿ ಎದುರಾಗುವ ಸವಾಲುಗಳನ್ನು ಮಟ್ಟಹಾಕುವುದಕ್ಕೆ ಸಾಧ್ಯವಾಗುವುದಿಲ್ಲ ಎಂಬುದು ರಾಜಕೀಯ ಪಂಡಿತರ ವಾದವಾಗಿದೆ. ಅಧಿಕಾರ, ಮೈತ್ರಿ ಕಿತ್ತಾಟ, ಸಚಿವ ಸ್ಥಾನಕ್ಕಾಗಿ ಲಾಭಿ, ಆಂತರಿಕ ಜಗಳ ಇಷ್ಟೆಲ್ಲದರ ನಡುವೆ ಜೆಡಿಎಸ್ ಪಕ್ಷವು ಅಭಿವೃದ್ಧಿ ಕಡೆ ಗಮನ ಕೊಡಲು ಸಾಧ್ಯವೇ ಎಂಬುದನ್ನು ಕಾಡು ನೋಡಬೇಕಿದೆ.