ಬಿ ಸ್ ವೈ ಪರ ವಿಜಯೇಂದ್ರ ಅಖಾಡಕ್ಕೆ, ಸಿಎಂಗೆ ತಕ್ಕ ತಿರುಗೇಟು ನೀಡಿದ ಬಿ ಸ್ ವೈ ಪುತ್ರ.

ಬಿ ಸ್ ವೈ ಪರ ವಿಜಯೇಂದ್ರ ಅಖಾಡಕ್ಕೆ, ಸಿಎಂಗೆ ತಕ್ಕ ತಿರುಗೇಟು ನೀಡಿದ ಬಿ ಸ್ ವೈ ಪುತ್ರ.

ಕುಮಾರಸ್ವಾಮಿ ರವರು ಇದೀಗ ಜಿಂದಾಲ್ ಕಂಪನಿಗೆ ಭೂಮಿ ಕೊಡುವ ವಿಷಯ ಬಹಳ ದೊಡ್ಡದಾಗಿದೆ. ಇತ್ತೀಚೆಗಷ್ಟೆ ಕುಮಾರಸ್ವಾಮಿ ಅವರು ಮತ್ತೊಮ್ಮೆ ತೀರ್ಪನ್ನು ಪರಿಶೀಲನೆ ಮಾಡಿ ಕಂಪನಿಗೆ ಭೂಮಿ ನೀಡುವುದೋ ಅಥವಾ ಬೇಡವೋ ಎಂಬ ನಿರ್ಣಯಕ್ಕೆ ಬರುವುದಾಗಿ ಘೋಷಣೆ ಮಾಡಿದ್ದರು. ಆದರೆ ಇದಕ್ಕೆ ಪ್ರತಿಪಕ್ಷವಾದ ಬಿಜೆಪಿ ಪಕ್ಷವು ಒಪ್ಪಲು ತಯಾರಿಲ್ಲ. ಮರುಪರಿಶೀಲನೆ ಎಲ್ಲಾ ಬೇಡ ನೇರವಾಗಿ ಕಂಪನಿಗೆ ಜಮೀನು ನೀಡುವುದಿಲ್ಲ ಎಂದು ಆದೇಶ ಹೊರಡಿಸಬೇಕು ಎಂದು ಪಟ್ಟು ಹಿಡಿದು ಕುಳಿತಿದೆ. ಇದೇ ವಿಚಾರದಲ್ಲಿ ರಾಜ್ಯದ ವಿವಿಧೆಡೆ ಬಿಜೆಪಿ ಪಕ್ಷವು ಪ್ರತಿಭಟನೆಗೆ ಇಳಿದಿದೆ, ವಿಧಾನಸೌಧದ ಮುಂದೆ ಬಿಜೆಪಿ ಪಕ್ಷದ ದಿಗ್ಗಜರು ಅಹೋರಾತ್ರಿ ಧರಣಿ ನಡೆಸಿದ್ದು ಇದೇ ಕಾರಣಕ್ಕಾಗಿ.

ಇದೀಗ ಇದೇ ವಿಚಾರವಾಗಿ ಬಿಎಸ್ ಯಡಿಯೂರಪ್ಪನವರನ್ನು ತಣ್ಣಗಾಗಿಸಲು ಕುಮಾರಸ್ವಾಮಿ ರವರು ಮುಂದಾಗಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಜಿಂದಾಲ್ ಕಂಪನಿಯಿಂದ ಅಕ್ರಮ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಬಿಎಸ್ ಯಡಿಯೂರಪ್ಪನವರು ಇದೇ ವಿಚಾರವಾಗಿ ಜೈಲಿಗೆ ಸೇರಿದ್ದರು, ಆದರೆ ನ್ಯಾಯಾಲಯವು ಬಿಎಸ್ ಯಡಿಯೂರಪ್ಪನವರದ್ದು ಏನೂ ತಪ್ಪಿಲ್ಲ ಅವರು ನಿರಪರಾಧಿ ಎಂದು ಘೋಷಣೆ ಮಾಡಿ ಯಡಿಯೂರಪ್ಪನವರಿಗೆ ಬಿಗ್ ರಿಲೀಫ್ ನೀಡಿತ್ತು.

ಇದೇ ವಿಚಾರವನ್ನು ಇದೀಗ ಪ್ರಸ್ತಾಪಿಸಿರುವ ಕುಮಾರಸ್ವಾಮಿ ರವರು, ಬಿಎಸ್ ಯಡಿಯೂರಪ್ಪನವರು ಕೆಲವು ವರ್ಷಗಳ ಹಿಂದೆ ಜಿಂದಾಲ್ ಕಂಪನಿಯಿಂದ 20 ಕೋಟಿ ರೂ ಕಿಕ್ಬ್ಯಾಕ್ ಪಡೆದಿದ್ದರು. ಅದೇ ವರದಿಯನ್ನು ನಾನು ಬಹಿರಂಗಪಡಿಸಿದೆ. ಇದನ್ನು ಮರೆತಿರುವ ಯಡಿಯೂರಪ್ಪನವರು ನನ್ನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಲು ಪ್ರಯತ್ನ ಪಟ್ಟಿದ್ದರು. ಆದರೆ ಇದೇ ಪ್ರಕರಣದ ವಿಚಾರವಾಗಿ ನ್ಯಾಯಾಲಯವು ಯಡಿಯೂರಪ್ಪನವರನ್ನು ನಿರಪರಾಧಿ ಎಂದು ಹಲವಾರು ವರ್ಷಗಳ ಹಿಂದೆಯೇ ಘೋಷಣೆ ಮಾಡಿದೆ.

ಹೀಗಿರುವಾಗ ಇದೇ ವಿಷಯವನ್ನು ಪ್ರಸ್ತಾಪಿಸಿರುವ ಬಿಎಸ್ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ರವರು ಕುಮಾರಸ್ವಾಮಿ ಅವರಿಗೆ ತಕ್ಕ ತಿರುಗೇಟು ನೀಡಿದ್ದಾರೆ. ಶ್ರೀ ಕುಮಾರಸ್ವಾಮಿ  ಯವರೇ ಸುಳ್ಳು ಭರವಸೆಗಳನ್ನು ಕೊಟ್ಟು ಜನರ ದಾರಿ ತಪ್ಪಿಸಿದ್ದಾಯಿತು, ಈಗ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು  ರವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿರುವುದು CM ಸ್ಥಾನದ ಘನತೆ ಹಾಗು ಗೌರವಕ್ಕೆ ತಕ್ಕದ್ದಲ್ಲ. ಮಾನ್ಯ ನ್ಯಾಯಾಲಯವು ಜಿಂದಾಲ್ ಪ್ರಕರಣದಿಂದ ಯಡಿಯುರಪ್ಪನವರನ್ನು ಆರೋಪಮುಕ್ತಗೊಳಿಸಿದೆ, ಅದಾಗ್ಯು ಈ ನಿಮ್ಮ ಬೇಜವಾಬ್ದಾರಿ ಹೇಳಿಕೆ ನ್ಯಾಯಾಲದ ತೀರ್ಪನ್ನು ಟೀಕಿಸುವುದಲ್ಲದೆ, ಜನರಿಗೆ ತಪ್ಪು ಮಾಹಿತಿ ನೀಡಿ ಒಬ್ಬ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕನ ಬಗ್ಗೆ ಅನ್ಯತಾ ಸುಳ್ಳು ಆರೋಪ ಮಾಡುತ್ತಿದ್ದೀರಿ.ನಿಮ್ಮ “ಹಿಟ್ & ರನ್” ಸಂಸ್ಕೃತಿಯಿಂದ ಹೊರ ಬಂದು CM ಸ್ಥಾನದ ಘನತೆ ಕಾಪಾಡಿ.