ಡಿ ಕೆ ಶಿ ಬುಡಕ್ಕೆ ಬಾಂಬ್ ಇಟ್ಟ ಸಿದ್ದರಾಮಯ್ಯ – ಶುರುವಾಯಿತು ಸಿದ್ದು ಡಿಕೆಶಿ ಕಾಳಗ

ಡಿ ಕೆ ಶಿ ಬುಡಕ್ಕೆ ಬಾಂಬ್ ಇಟ್ಟ ಸಿದ್ದರಾಮಯ್ಯ – ಶುರುವಾಯಿತು ಸಿದ್ದು ಡಿಕೆಶಿ ಕಾಳಗ

ಕಾಂಗ್ರೆಸ್ ಪಕ್ಷದಲ್ಲಿ ಮೇಲ್ನೋಟಕ್ಕೆ ಎಲ್ಲವೂ ಸರಿ ಇದ್ದಂತೆ ಕಾಣಿಸಿದರೂ, ಮೊದಲಿನಿಂದಲೂ ಮಾಜಿ ಮುಖ್ಯಮಂತ್ರಿಗಳಾಗಿರುವ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದುಕೊಂಡಿರುವ ಡಿಕೆ ಶಿವಕುಮಾರ್ ಅವರ ನಡುವೆ ಆಂತರಿಕ ಕಾಳಗ ನಡೆಯುತ್ತಿವೆ ಎಂಬ ಮಾಹಿತಿಗಳು ಆಗಾಗ ಕೇಳಿ ಬರುತ್ತಿರುತ್ತವೆ. ಈ ಮಾತುಗಳಿಗೆ ಮತ್ತಷ್ಟು ಪೂರಕ ಎಂಬಂತೆ ಈಗಾಗಲೇ ಹಲವಾರು ವಿಚಾರಗಳಲ್ಲಿ ಇವರಿಬ್ಬರ ನಡುವಿನ ಕಾಳಗ ಬಹಿರಂಗವಾಗಿ ಸಾಬೀತಾಗಿದೆ. ಇದೇ ಕಾರಣಕ್ಕಾಗಿ ಡಿಕೆ ಶಿವಕುಮಾರ್ ಅವರು ಸಹ ಇತ್ತೀಚೆಗೆ ನಾನು ಕೇವಲ ಉಪಚುನಾವಣೆಯನ್ನು ಗೆಲ್ಲಿಸಲು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಬೇಕು, ದೆಹಲಿಯಲ್ಲಿ ನನ್ನ ಯಾವುದೇ ಮಾತುಗಳು ನಡೆಯುವುದಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.

ಇದೀಗ ಹಲವಾರು ಬಾರಿ ತಮಗೆ ವಹಿಸಿರುವ ಜವಾಬ್ದಾರಿಯನ್ನು ಚಾಚೂತಪ್ಪದೆ ಮುಗಿಸಿರುವ ಡಿಕೆಶಿವಕುಮಾರ್ ರವರಿಗೆ, ಕರ್ನಾಟಕ ರಾಜ್ಯದ ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ತನಗೆ ಜವಾಬ್ದಾರಿ ವಯಿಸಿದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ, ಮೈತ್ರಿ ಸರ್ಕಾರವನ್ನು ಉಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ನೀಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಇದಕ್ಕೆ ಮಾಜಿ ಮುಖ್ಯಮಂತ್ರಿ ಗಳಾಗಿರುವ ಸಿದ್ದರಾಮಯ್ಯರವರು ಒಂದು ವೇಳೆ ಡಿಕೆ ಶಿವಕುಮಾರ್ ಅವರು ಅಧ್ಯಕ್ಷರಾದರೆ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಪ್ರತಿಸ್ಪರ್ಧಿಗಳ ಗುಂಪು ಬಲಗೊಳ್ಳುತ್ತದೆ, ಎಂಬ ಆತಂಕದಿಂದ ವಿರೋಧ ವ್ಯಕ್ತಪಡಿಸಿ. ಸದ್ಯಕ್ಕೆ ಯಾವುದೇ ಬದಲಾವಣೆ ಮಾಡುವುದು ಬೇಡ, ಸರ್ಕಾರ ಮತ್ತು ಪಕ್ಷ ಎರಡು ಹಂತದಲ್ಲಿ ಡಿಸೆಂಬರ್ ತಿಂಗಳವರೆಗೆ ಯಥಾಸ್ಥಿತಿ ಮುಂದುವರೆಯಲಿ . ತದನಂತರ ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ಅವರಿಗೆ ದಕ್ಕಬೇಕಾದ ಹುದ್ದೆಯನ್ನು ತಪ್ಪಿಸಲು ಮುಂದಾಗಿದ್ದಾರೆ.