ಸಚಿವ ಸಾ.ರಾ ಮಹೇಶ್ ರವರಿಗೆ ತಕ್ಕ ತಿರುಗೇಟು ನೀಡಿದ ಹರ್ಷಿಕಾ ಪೂಣಚ್ಚ

ಇತ್ತೀಚೆಗೆ ಸಚಿವರಾಗಿರುವ ಸಾ.ರಾ ಮಹೇಶ ರವರು ಭಾರಿ ಸದ್ದು ಮಾಡುತ್ತಿದ್ದಾರೆ. ಹಲವಾರು ವಿವಾದಾತ್ಮಕ ನಡೆಗಳಿಂದ ಸದ್ದು ಮಾಡುತ್ತಿರುವ ಮಹೇಶ್ ರವರು ಇತ್ತೀಚೆಗೆ ಕೊಡಗು ಸಂತ್ರಸ್ತರಿಗೆ ಸರ್ಕಾರ ಕಟ್ಟಿಕೊಟ್ಟಿರುವ ಮನೆಗಳು ಸರಿಯಾಗಿ ಇಲ್ಲ ಎಂದು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದ ಹರ್ಷಿಕಾ ಪೂರ್ಣಚ್ಚ ರವರ ಮೇಲೆ ಕಿಡಿಕಾರುವ ಮೂಲಕ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.col ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಸಾರಾ ಮಹೇಶ್ ರವರು ಚಿತ್ರರಂಗದವರನ್ನು ಎಳೆದುತಂದು ಮಾತನಾಡಿದ್ದರು. ಇದೀಗ ಇದಕ್ಕೆ ಪ್ರತಿಕ್ರಿಯಿಸಿರುವ ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ರವರು ಕಡಕ್ ಮಾತುಗಳ ಮೂಲಕ ಸಚಿವರಿಗೆ ಟಾಂಗ್ ನೀಡಿದ್ದಾರೆ.

ಕೆಲವು ಮಾಡೆಲ್ ಮನೆಗಳ ಫೋಟೋ ನೋಡದೆ. ಅದು ನನಗೆ ಇಷ್ಟವಾಗಿಲ್ಲ. ಯಾಕೆಂದರೆ ಆ ಮನೆಗಳಲ್ಲಿ ಗಾಳಿ, ಬೆಳಕು ವ್ಯವಸ್ಥೆ ಸರಿಯಿರಲಿಲ್ಲ. ಶೀಟ್ ಮನೆ ಎಂಬಂತಿತ್ತು.  ಭಾರತೀಯಳಾಗಿ ನನಗೆ ಪ್ರಶ್ನೆ ಕೇಳುವ ಹಕ್ಕಿದೆ.ಚಿತ್ರರಂಗದವರೆಂದರೆ ಕೇವಲ ಸಿನಿಮಾಗಳಲ್ಲಿ ನಟಿಸುವುದಷ್ಟೇ ಅಲ್ಲ. ಬೇರೇನೂ ಮಾತನಾಡುವುದು ತಪ್ಪೆ ?? ಅದಕ್ಕೆ ರಾಜ್ಯ ಸರ್ಕಾರ ಕೊಡಗು ಸಂತ್ರಸ್ಥರಿಗೆ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಮನೆಗಳನ್ನು ಕಟ್ಟಿಕೊಡಲಿ ಎಂದು ನಾನು ಈ ಮಾತು ಹೇಳಿದ್ದೆ. ನಾನು ಯಾರನ್ನೂ ದೂರಿಲ್ಲ.ನಾನು ಇಂಜಿನಿಯರ್ B.E ಪದವಿ ಪಡೆದಿದ್ದೇನೆ.  ಸಿನಿಮಾದವರ ಬಗೆಗೆ ಹಗುರಾಗಿ ಮಾತನಾಡಬೇಡಿ, ಸಿನಿಮಾದವರು ಏನನ್ನು ಮಾಡಬಹುದು ಎಂಬುದನ್ನು ನಾನು ಇತ್ತೀಚೆಗೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಕಂಡಿದ್ದೇನೆ ಎಂದು ಕಡಕ್ ಮಾತುಗಳ ಮೂಲಕ ಸಚಿವರಿಗೆ ಟಾಂಗ್ ನೀಡಿದ್ದಾರೆ.

Facebook Comments

Post Author: Ravi Yadav