ಯುವರಾಜ್ ಸಿಂಗ್ ರವರ ಬಗ್ಗೆ ಸುದೀಪ್ ಮಾಡಿದ ಟ್ವೀಟ್ ಏನು ಗೊತ್ತಾ??

ಹುಟ್ಟು ಹೋರಾಟಗಾರರಾದ ಯುವರಾಜ ಸಿಂಗ್ ರವರು ಎಲ್ಲ ಮಾದರಿಯ ಕ್ರಿಕೆಟ್ ಗಳಿಗೆ ಇದೀಗ ಗುಡ್ ಬೈ ಹೇಳಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಭಾರತೀಯ ಕ್ರಿಕೆಟ್ ಪ್ರೇಮಿಗಳು ಯುವರಾಜ್ ರವರನ್ನು ಎಂದಿಗೂ ದ್ವೇಷಿಸಲು ಸಾಧ್ಯವಿಲ್ಲ, ಕ್ರಿಕೆಟ್ ಲೋಕದಲ್ಲಿ ಅಜಾತಶತ್ರು ವಂತೆ ಮೆರೆದಿದ್ದ ಯುವರಾಜ್ ಸಿಂಗ್ ರವರು ಭಾರತಕ್ಕೆ ಎಲ್ಲಾ ಐಸಿಸಿ ಟ್ರೋಫಿಗಳನ್ನು ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅದರಲ್ಲಿಯೂ ತಮಗೆ ಕ್ಯಾನ್ಸರ್ ಇದೆ ಎಂದು ತಿಳಿದರೂ, ಮೈದಾನದಲ್ಲಿ ಕ್ಯಾನ್ಸರ್ ರೋಗ ಉಲ್ಬಣಗೊಂಡರೂ ದೇಶಕ್ಕಾಗಿ ನಾನು ವಿಶ್ವಕಪ್ ಎತ್ತಿ ಇಡಿಯುತ್ತೇನೆ ಎಂದು ಹೋರಾಡಿ ಗೆಲ್ಲಿಸಿದ ಕ್ಷಣಗಳು ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ಇದೀಗ ಯುವರಾಜ್ ಸಿಂಗ್ ಅವರ ನಿವೃತ್ತಿಯ ನಂತರ ಸಾಮಾನ್ಯ ಅಭಿಮಾನಿಗಳಿಂದ ಇಡಿದೂ, ಚಿತ್ರರಂಗ, ಕ್ರೀಡಾಲೋಕ ಹಾಗೂ ರಾಜಕೀಯ ದಿಗ್ಗಜರು ಯುವರಾಜ್ ಸಿಂಗ್ ಅವರಿಗೆ ಹಾರೈಕೆಗಳ ಸುರಿಮಳೆಯನ್ನು ಸುರಿಸಿದ್ದಾರೆ.

ಇದೀಗ ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರಾಗಿರುವ ಸುದೀಪ್ ರವರು ಇಂದು ನಿಮ್ಮ ಬಗ್ಗೆ ಟ್ವೀಟ್ ಮಾಡುತ್ತಿರುವ ನಮ್ಮ ಬಗ್ಗೆ ನಿಮಗೆ ತಿಳಿಯದೆ ಇರಬಹುದು. ಆದರೆ ನಾವು ನಿಮ್ಮನ್ನು ಎಷ್ಟು ಪ್ರೀತಿಸುತ್ತೇವೆ ಮತ್ತು ನೀವು ಅನೇಕರಿಗೆ ಅದಮ್ಯ ಸ್ಫೂರ್ತಿದಾಯಕರಾಗಿದ್ದೀರಿ ಎಂಬುದನ್ನ ಹೇಳುವ ಸಲುವಾಗಿ ನಾವು ಟ್ವೀಟ್ ಮಾಡುತ್ತೇವೆ. ನಿಮ್ಮನ್ನು ಮತ್ತೆ ಬ್ಲೂ ಜೆರ್ಸಿಯಲ್ಲಿ ನೋಡಲು ಬಯಸುತ್ತೇನೆ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ” ಎಂದು ಸುದೀಪ್ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಯುವರಾಜ್ ಸಿಂಗ್ ರವರಿಗೆ, ಬಿಸಿಸಿಐ ಕಡೆಯಿಂದ ಒಳ್ಳೆಯ ನಿವೃತ್ತಿ ಗೌರವ ಸಿಗದೇ ಹೋದರು, ಇಡೀ ದೇಶವೇ ಯುವರಾಜ್ ಸಿಂಗ್ ರವರಿಗೆ ಹಾರೈಕೆಗಳ ಸುರಿಮಳೆಯನ್ನು ಹರಿಸಿದೆ.

Facebook Comments

Post Author: Ravi Yadav