ಕುಮಾರಸ್ವಾಮಿ ರವರಿಗೆ ಹೊಸ ಬೇಡಿಕೆ ಇಟ್ಟು ಮನವಿ ಮಾಡಿದ ಕೊಡಗಿನ ಬೆಡಗಿಯರು

ಇದೀಗ ಕನ್ನಡ ಚಿತ್ರರಂಗದ ಮತ್ತೊಂದು ಅಭಿಯಾನವನ್ನು ಆರಂಭಿಸಿದೆ. ಇತ್ತೀಚೆಗೆ ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಕೇಳಿಬಂದಿದ್ದ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣದ ವಿಷಯ ಇದೀಗ ಇಡೀ ರಾಜ್ಯದಲ್ಲಿ ಹರಡುವ ಸೂಚನೆಗಳು ಕಾಣಸಿಗುತ್ತವೆ. ಹೌದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಟ್ಟಿಸಿಕೊಡಲು ಉತ್ತರ ಕನ್ನಡದ ಜನತೆ ಬೇಡಿಕೆ ಇಟ್ಟಿದ್ದರು, ಇದಕ್ಕೆ ಕೇಂದ್ರ ಸಚಿವರಾಗಿರುವ ಸದಾನಂದ ಗೌಡರವರು ಸ್ಪಂದಿಸಿ ಈ ಕೂಡಲೇ ಆಶ್ವಾಸನೆಯನ್ನು ಈಡೇರಿಸಲು ಹಾಗೂ ಅಗತ್ಯವಿರುವ ಅನುದಾನವನ್ನು ಕೇಂದ್ರದಿಂದ ಜಾರಿಗೊಳಿಸಲು ರಾಜ್ಯ ಸರ್ಕಾರದ ಪರವಾಗಿ ಕೇಂದ್ರದಲ್ಲಿ ದ್ವನಿ ಎತ್ತುತ್ತೇನೆ ಎಂದು ಹೇಳಿಕೆ ನೀಡಿದ್ದರು.

ಇದಾದ ಬೆನ್ನಲ್ಲೇ ಇದೀಗ ಕೊಡಗು ಜಿಲ್ಲೆಯಲ್ಲಿ ಇದೆ ಕೂಗು ಎದ್ದಿದ್ದು ಕೊಡಗಿನ ಜನರು ಆಸ್ಪತ್ರೆ ನಿರ್ಮಿಸಲು ಟ್ವಿಟ್ಟರ್ ನಲ್ಲಿ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ಕರ್ನಾಟಕದ ಖ್ಯಾತ ನಟ ಶಿವರಾಜ್ ಕುಮಾರ್ ರವರು ಸಹ ಬೆಂಬಲ ನೀಡಿದ್ದಾರೆ, ಇದೇ ವಿಷಯವಾಗಿ ಇಂದು ಕೊಡಗಿನ ಕುವರಿಯರಾಗಿರುವ ರಶ್ಮಿಕ ಮಂದಣ್ಣ ಹಾಗೂ ಹರ್ಷಿಕಾ ಪೂಣಚ್ಚ ಅವರು ಟ್ವೀಟ್ ಮಾಡಿ ಕುಮಾರಸ್ವಾಮಿ ರವರಿಗೆ ಕೊಡಗು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಶ್ಮಿಕಾ ರವರು ಮೂಲಭೂತ ಸೌಕರ್ಯ ಗಳಲ್ಲಿ ಆಸ್ಪತ್ರೆಯೂ ಒಂದು, ಆದರೆ ಕೊಡಗಿನಲ್ಲಿ ಒಳ್ಳೆಯ ಆಸ್ಪತ್ರೆ ಇಲ್ಲ. ದಯವಿಟ್ಟು ಈ ಬೇಡಿಕೆಗೆ ಈ ಕೂಡಲೇ ಸ್ಪಂದಿಸಿ ಎಂದು ಬೇಡಿಕೆ ಇಟ್ಟಿದ್ದಾರೆ. ಇನ್ನೂ ಹರ್ಷಿಕಾ ರವರು ಸಹ ನನ್ನ ತಂದೆಗೆ ಹುಷಾರಿಲ್ಲದ ಸಮಯದಲ್ಲಿ ನಾವು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆ ತರಬೇಕಾಗಿತ್ತು. ಈ ರೀತಿಯ ತೊಂದರೆಗಳು ಬೇರೆಯವರಿಗೆ ಆಗಬಾರದು ದಯವಿಟ್ಟು ಈ ಕೂಡಲೇ ಆಸ್ಪತ್ರೆ ನಿರ್ಮಾಣಕ್ಕೆ ಕುಮಾರಸ್ವಾಮಿಯವರು ಆದೇಶ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Facebook Comments

Post Author: Ravi Yadav