ರಾಜ್ಯಪಾಲರು ಎಂದು ನೋಡದ ದೀದಿ! ಮಾಡಿದ್ದೇನು ಗೊತ್ತಾ? ಮಿತಿಮೀರುತ್ತಿದೆ ದೀದಿ ಹಟ್ಟಹಾಸ ! ಎತ್ತ ಸಾಗುತ್ತಿದೆ ದೇಶ??

ರಾಜ್ಯಪಾಲರು ಎಂದು ನೋಡದ ದೀದಿ! ಮಾಡಿದ್ದೇನು ಗೊತ್ತಾ? ಮಿತಿಮೀರುತ್ತಿದೆ ದೀದಿ ಹಟ್ಟಹಾಸ ! ಎತ್ತ ಸಾಗುತ್ತಿದೆ ದೇಶ??

ನೀವು ಯಾವುದೇ ಪಕ್ಷದ ಬೆಂಬಲಿಗರಾಗಿರಬಹುದು ಆದರೆ, ಪ್ರತಿಯೊಂದು ರಾಜ್ಯದಲ್ಲಿಯೂ ರಾಜ್ಯಪಾಲರಿಗೆ ವಿಶೇಷ ಗೌರವವಿರುತ್ತದೆ ಎಂಬುದನ್ನು ನೀವು ಒಪ್ಪಿಕೊಳ್ಳಬೇಕು. ಪ್ರತಿಯೊಬ್ಬ ಪ್ರಜೆ ಅಷ್ಟೇ ಅಲ್ಲದೆ ರಾಜಕಾರಣಿಗಳು ಸಹ ರಾಜ್ಯಪಾಲರನ್ನು ಗೌರವದಿಂದ ಕಾಣಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ ಇಡೀ ದೇಶದಲ್ಲಿ ಹಿಂಸಾಚಾರದ ಮೂಲಕ ಸದ್ದು ಮಾಡುತ್ತಿರುವ ಮಮತಾ ಬ್ಯಾನರ್ಜಿ ರವರು ಮಾತ್ರ ಯಾರಿಗೂ ಗೌರವ ನೀಡುತ್ತಿಲ್ಲ. ಇಷ್ಟು ದಿವಸ ಬಿಜೆಪಿ ಪಕ್ಷದ ಹಿರಿಯ ನಾಯಕರನ್ನು, ನರೇಂದ್ರ ಮೋದಿ ಅವರನ್ನು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರನ್ನು ಮನಬಂದಂತೆ ಮಾತನಾಡುತ್ತಿದ್ದ ಮಮತಾ ಬ್ಯಾನರ್ಜಿ ಅವರು ಇದೀಗ ರಾಜ್ಯಪಾಲರ ವಿರುದ್ಧ ಸಹ ಗುಡುಗಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪಕ್ಷಿಮ ಬಂಗಾಳದಲ್ಲಿ ಹಿಂಸಾಚಾರಗಳು ಭುಗಿಲೇಳುತ್ತಿವೆ. ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ರವರ ಪಕ್ಷವು ಹಿಂಸಾಚಾರವನ್ನು ತಡೆಗಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ, ದಿನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಜನರ ಕೊಲೆಯಾಗುತ್ತಿದೆ. ಪ್ರತಿಭಟನೆಗಳು ಸಾಲುಸಾಲಾಗಿ ನಡೆಯುತ್ತಿವೆ, ಆದ ಕಾರಣದಿಂದ ಬೇರೆ ವಿಧಿಯಿಲ್ಲದೆ ದೇಶದಲ್ಲಿ ಶಾಂತಿ ನೆಲೆಸುವ ಕೆಲಸಮಾಡಬೇಕಾದ ಕೇಂದ್ರ ಗೃಹ ಇಲಾಖೆಯು ಈ ವಿಚಾರದಲ್ಲಿ ಮೂಗು ತೂರಿಸಿತ್ತು. ಅದು ಭಾರತೀಯ ಸಂವಿಧಾನದ ಪ್ರಕಾರ ಕೇಂದ್ರ ಸರ್ಕಾರದ ಹಕ್ಕು.

ಆದರೆ ಏಕಾಏಕಿ ಭಾರತದ ಗೃಹ ಸಚಿವರಾಗಿರುವ ಅಮಿತ್ ಶಾ ರವರು ಈ ವಿಷಯದಲ್ಲಿ ಮೂಗು ತೂರಿಸಲಿಲ್ಲ, ಬದಲಾಗಿ ಸಂವಿಧಾನ ಹಾಗೂ ಕಾನೂನಿನ ಗಣನೆಯನ್ನು ತೆಗೆದುಕೊಂಡು ರಾಜ್ಯಪಾಲರಿಗೆ ಈ ಕುರಿತು ಸಂಪೂರ್ಣ ವರದಿ ನೀಡುವಂತೆ ಆದೇಶ ನೀಡಿದ್ದರು. ಇತ್ತ ಪಕ್ಷಿಮ ಬಂಗಾಳದ ಹಿರಿಯ ಐಎಎಸ್ ಹಾಗೂ ಐಪಿಎಸ್ ಅಧಿಕಾರಿ ಗಳನ್ನು ಬಳಸಿಕೊಂಡು ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದ ರಾಜ್ಯ ಪಾಲರು ಕೇಂದ್ರ ಗೃಹ ಇಲಾಖೆಗೆ ತಮ್ಮ ವರದಿಯನ್ನು ಸಲ್ಲಿಕೆ ಮಾಡಿದ್ದರು. ಇದೇ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಹೌದು ಪಕ್ಷಿಮ ಬಂಗಾಳದಲ್ಲಿ ಹಿಂಸಾಚಾರ ದಿನೇದಿನೇ ಹೆಚ್ಚಾಗುತ್ತಿದೆ. ಅದೇ ರೀತಿಯ ವರದಿಯನ್ನು ನಾನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಒಂದುವೇಳೆ ರಾಷ್ಟ್ರಪತಿ ಆಡಳಿತ ಜಾರಿಯಾದರೂ ಅಚ್ಚರಿಯಿಲ್ಲ, ಅಷ್ಟರಮಟ್ಟಿಗೆ ಪಕ್ಷಿಯ ಬಂಗಾಳದಲ್ಲಿ ಶಾಂತಿ ಹದಗೆಟ್ಟಿದೆ ಎಂದು ಹೇಳಿಕೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ ರವರು ನೇರವಾಗಿ ರಾಜ್ಯಪಾಲರಿಗೆ ಎಚ್ಚರಿಕೆ ನೀಡಿದ್ದಾರೆ. ಯಾರನ್ನು ಕೇಳಿ ರಾಜ್ಯಪಾಲರು ಗೃಹ ಇಲಾಖೆಗೆ ವರದಿ ಸಲ್ಲಿಸಿದರು, ರಾಜ್ಯಪಾಲರು ಈ ರೀತಿಯ ಕೆಲಸಗಳನ್ನು ಮಾಡಬಾರದು, ರಾಜ್ಯಪಾಲರಿಗೆ ಸಾಂವಿಧಾನಿಕ ಮಿತಿಗಳಿವೆ ಅದನ್ನು ಮಿತಿಮೀರಿದರೆ ನಾನು ಸುಮ್ಮನೆ ಕೂರಲಾರೆ. ನೀವು ಪಕ್ಷಿಮ ಬಂಗಾಳದ ವರದಿಯನ್ನು ನೀಡುವ ಮೂಲಕ ಪಶ್ಚಿಮ ಬಂಗಾಳಕ್ಕೆ ಅವಮಾನ ಮಾಡಲು ಪ್ರಯತ್ನ ಪಡುತ್ತೀರಿ ಎನ್ನುವ ರೀತಿಯಲ್ಲಿ, ಪಕ್ಷಿಮ ಬಂಗಾಳಕ್ಕೆ ಯಾರೇ ಅವಮಾನ ಮಾಡಿದರೂ ನಾವು ಸುಮ್ಮನೆ ಕ್ಷಮಿಸುವುದಿಲ್ಲ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಏಕಾಏಕಿ ರಾಜ್ಯಪಾಲರ ವಿರುದ್ಧ ಗುಡುಗಿದ್ದಾರೆ. ಒಂದು ರಾಜ್ಯದ ರಾಜ್ಯಪಾಲರನ್ನು ಈ ರೀತಿ ನಡೆಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂಬುದು ನಮ್ಮ ಅನಿಸಿಕೆ, ಯಾವುದೇ ರಾಜ್ಯದ ರಾಜ್ಯಪಾಲರಿಗೆ ರಾಜ್ಯದ ಬಗ್ಗೆ ಸಂಪೂರ್ಣ ವರದಿ ತಯಾರಿಸಿ ಕೇಂದ್ರಕ್ಕೆ ನೀಡುವ ಅಧಿಕಾರವಿರುತ್ತದೆ. ಕೇವಲ ಬಿಜೆಪಿ ಪಕ್ಷವನ್ನು ದೂಷಿಸುವ ಉದ್ದೇಶದಿಂದ ಈ ರೀತಿಯ ಕೆಲಸಗಳು ಮಾಡುವುದು ಎಷ್ಟು ಸರಿ??