ವ್ಹಾ ಅಭಿವೃದ್ಧಿಗೆ ಹೊಸ ತಂತ್ರಗಾರಿಕೆ ರೂಪಿಸಿದ ಸುಮಲತಾ- ಮಂಡ್ಯ ಜನರ ಬಾಳು ಬೆಳಗಲು ನಿರ್ಧಾರ

ವ್ಹಾ ಅಭಿವೃದ್ಧಿಗೆ ಹೊಸ ತಂತ್ರಗಾರಿಕೆ ರೂಪಿಸಿದ ಸುಮಲತಾ- ಮಂಡ್ಯ ಜನರ ಬಾಳು ಬೆಳಗಲು ನಿರ್ಧಾರ

ಕೆಲವೇ ಕೆಲವು ದಿನಗಳ ಹಿಂದೆ ಇಡೀ ದೇಶದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇಂದಿನ ಮುಖ್ಯಮಂತ್ರಿಗಳಾಗಿರುವ ಕುಮಾರಸ್ವಾಮಿರವರ ಪುತ್ರ ನಿಖಿಲ್ ಕುಮಾರಸ್ವಾಮಿ ರವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ, ಇದೇ ಮೊಟ್ಟಮೊದಲ ಬಾರಿಗೆ ಇತಿಹಾಸದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಸಂಸತ್ ಪ್ರವೇಶ ಮಾಡಿರುವ ಸುಮಲತಾ ಅಂಬರೀಶ್ ರವರು ಇದೀಗ ತನ್ನನ್ನು ಗೆಲ್ಲಿಸಿದ ಮಂಡ್ಯ ಜನರಿಗಾಗಿ ಹೊಸ ತಂತ್ರಗಾರಿಕೆಯ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಲು ನಿರ್ಧಾರ ಮಾಡಿದ್ದಾರೆ. ಬಹುಶಹ ಇದೇ ಮೊಟ್ಟಮೊದಲ ಬಾರಿಗೆ ಸಂಸದರು ಅಭಿವೃದ್ಧಿಗಾಗಿ ಈ ರೀತಿಯ ವಿಶೇಷ ತಂತ್ರಗಾರಿಕೆ ಮಾಡುತ್ತಿದ್ದಾರೆ.

ಹೌದು, ಮಂಡ್ಯದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲು ನಿರ್ಧಾರ ಮಾಡಿರುವ ಸುಮಲತಾ ಅಂಬರೀಶ್ ರವರು ಮಂಡ್ಯ ಜಿಲ್ಲೆಯಲ್ಲಿ ಹಾಗೂ ನೀರಿನ ಸಮಸ್ಯೆ ಹೆಚ್ಚಿದೆ, ಪ್ರಮುಖವಾಗಿ ಅದರ ಬಗ್ಗೆ ನಾನು ಗಮನ ಹರಿಸುತ್ತೇನೆ, ಇದೀಗ ರಾಜಕಾರಣ ಮಾಡುವ ಸಮಯವಲ್ಲ, ಟೀಕೆಗಳಿಗೆ ಯಾವುದೇ ಉತ್ತರ ನೀಡುವುದಿಲ್ಲ. ಇನ್ನುಮುಂದೆ ನಾನು ವಾರದಲ್ಲಿ ಮೂರು ದಿನಗಳ ಕಾಲ ಮಂಡ್ಯ ಜಿಲ್ಲೆಯ ಪ್ರತಿ ಹಳ್ಳಿಗೂ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುತ್ತೇನೆ. ಉಳಿದ ನಾಲ್ಕು ದಿನಗಳಲ್ಲಿ ಸಮಸ್ಯೆಗಳ ಆದ್ಯತೆಯ ಮೇಲೆ ಕೆಲಸ ನಿರ್ವಹಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲರ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತೇನೆ ಎನ್ನುವ ಮೂಲಕ ವಿಶೇಷ ತಂತ್ರಗಾರಿಕೆಯನ್ನು ಹೊರಹಾಕಿದ್ದಾರೆ. ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಮನೆ ಸಿದ್ಧವಾಗಿದೆ, ಅಲ್ಲಿಯೇ ವಾಸ್ತವ್ಯ ಮಾಡುತ್ತೇನೆ, ಎಲ್ಲಾ ಕ್ಷೇತ್ರಗಳಿಗೂ ಸಂಚಾರ ಮಾಡಿ ಜನರ ಸಮಸ್ಯೆಯನ್ನು ಆಲಿಸಿ ಪರಿಹಾರ ನೀಡುತ್ತೇನೆ ಎಂದು ಮಂಡ್ಯ ಜನರಿಗೆ ಭರವಸೆ ನೀಡಿದ್ದಾರೆ.