ಬಿಗ್ ನ್ಯೂಸ್- ಮಿತಿಮೀರಿದ ಮಮತಾ ಅಟ್ಟಹಾಸ! ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಿದ ಬಿಜೆಪಿ

ಮಮತಾ ಬ್ಯಾನರ್ಜಿ ರವರ ಕೋಟೆಗೆ ಬಿಜೆಪಿ ಪಕ್ಷವು ಭರ್ಜರಿಯಾಗಿ ಹೆಜ್ಜೆ ಇಟ್ಟಿರುವ ಕಾರಣ ಅಕ್ಷರಸಹ ಮಮತಾ ಬ್ಯಾನರ್ಜಿಯವರು ನಡುಗಿ ಹೋಗಿದ್ದಾರೆ. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದು ಒಂದೆಡೆಯಾದರೆ ಮತ್ತೊಂದೆಡೆ ಸಾಲು ಸಾಲು ಪಕ್ಷಾಂತರ ಗಳು ಮಮತಾ ಬ್ಯಾನರ್ಜಿ ರವರ ನಿದ್ದೆಗೆಡಿಸಿವೆ. ಪರಿಸ್ಥಿತಿ ಹೀಗಿರುವಾಗ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಮೇಲುಗೈ ಸಾಧಿಸುತ್ತಾ ಈಗಾಗಲೇ ಎರಡು ನಗರ ಸಭೆಗಳಲ್ಲಿ ಅಧಿಕಾರದ ಗದ್ದುಗೆಯೇರಿ, ಮೊದಲಬಾರಿಗೆ ಪಶ್ಚಿಮ ಬಂಗಾಳವು ಕೇಸರಿ ಮಯವಾಗುತ್ತಿದೆ. ಇದರಿಂದ ಸಾಮಾನ್ಯವಾಗಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿಯವರಿಗೆ ಹೊಸ ತಲೆನೋವುಗಳು ಶುರುವಾಗುತ್ತಿವೆ. ಆದರೆ ಈ ಎಲ್ಲಾ ವಿದ್ಯಮಾನಗಳು ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ, ಬದಲಾಗಿ ಪರಸ್ಪರ ವೈಯಕ್ತಿಕ ದ್ವೇಷ ಗಳಾಗಿ ಬದಲಾಗಿವೆ.

ಹೌದು, ಇದರಿಂದ ಪಕ್ಷಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದೆ, ಮೊದಲಿನಿಂದಲೂ ಯಾವೊಬ್ಬ ರಾಜಕೀಯ ನಾಯಕನನ್ನು ಪಶ್ಚಿಮ  ಬಂಗಾಳದ ಒಳಗೆ ಬಿಟ್ಟುಕೊಳ್ಳದೆ ಅಟ್ಟಹಾಸ ಮೆರೆದಿದ್ದ ಮಮತಾ ಬ್ಯಾನರ್ಜಿ ಅವರು ಸಿಬಿಐ ಸಂಸ್ಥೆಯನ್ನು ಸಹ ನಿಷೇಧ ಮಾಡಿದ್ದರು. ಇದೇ ರೀತಿಯ ಹಲವಾರು ಸರ್ವಾಧಿಕಾರಿ ಧೋರಣೆಯನ್ನು ನಡೆಸುತ್ತಿದ್ದ ಮಮತಾ ಬ್ಯಾನರ್ಜಿ ರವರಿಗೆ ಇದೀಗ ಬಿಜೆಪಿ ಪಕ್ಷದ ಅಲೆ ನೋಡಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ರೀತಿಯ ವಿದ್ಯಮಾನಗಳಿಂದ ಪಶ್ಚಿಮ  ಬಂಗಾಳವು ಅಕ್ಷರಸಹ ರಣರಂಗವಾಗಿದೆ, ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಇತ್ತೀಚೆಗೆ ಚುನಾವಣೆಯ ಫಲಿತಾಂಶ ಹೊರಬಿದ್ದ ಕೆಲವೇ ಕೆಲವು ದಿನಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ.

ಚುನಾವಣಾ ಸೋಲಿನಿಂದ ಕಂಗೆಟ್ಟಿರುವ ಮಮತಾ ಬ್ಯಾನರ್ಜಿ ರವರ ಪಕ್ಷದ ಕಾರ್ಯಕರ್ತರು ಇತ್ತೀಚೆಗೆ ಸೇಡು ತೀರಿಸಿಕೊಳ್ಳುವ ಇರಾದೆಯನ್ನು ಹೊಂದಿದ್ದಾರೆ, ಖುದ್ದು ಮಮತಾ ಬ್ಯಾನರ್ಜಿ ರವರು ಕಾರ್ಯಕರ್ತರನ್ನು ಪ್ರಚೋದನೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.  ಚುನಾವಣೆಯ ಗೆಲುವನ್ನು ಸಂಭವಿಸುತ್ತಿರುವ ಬಿಜೆಪಿ ಕಾರ್ಯಕರ್ತರನ್ನು ಹುಡುಕಿ ಹುಡುಕಿ ಹತ್ಯೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇನ್ನು ಕೇಂದ್ರ ಸರ್ಕಾರದ ಪರ ಧ್ವನಿ ಎತ್ತಿದ್ದ ಹಲವಾರು ಬಿಜೆಪಿ ನಾಯಕರ ಮೇಲೆ ಹಲ್ಲೆ ನಡೆದಾಗ ಖುದ್ದು ಭಾರತದ ಗೃಹ ಸಚಿವರಾಗಿರುವ ಅಮಿತ್ ಶಾ ರವರು ಅಕಾಡಕ್ಕೆ ಇಳಿದಿದ್ದರು. ಕೂಡಲೇ ಪಶ್ಚಿಮ  ಬಂಗಾಳದ ರಾಜ್ಯಪಾಲ ಕೆಸರಿನಾಥ್ ತ್ರಿಪಾಠಿ ರವರಿಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಆದೇಶ ನೀಡಿದ್ದರು. ಕೂಡಲೇ ವರದಿ ತಯಾರು ಮಾಡಿದ ರಾಜ್ಯಪಾಲರು ಇದೀಗ ಕೇಂದ್ರ ಸರ್ಕಾರದ ಕದ ತಟ್ಟಿದ್ದಾರೆ. ಮೊದಲಿನಿಂದಲೂ ಪಶ್ಚಿಮ ಬಂಗಾಳದಲ್ಲಿ ಬಂದೂಕು, ರಿವಾಲ್ವರ್ ಮತ್ತು ಬಾನ್ ಗಳಿಂದ ಸರ್ಕಾರ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದೀಗ ರಾಜ್ಯಪಾಲರ ವರದಿ ಹೊರಬೀಳುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಅಮಿತ್ ಶಾ ರವರನ್ನು ಪಕ್ಷಿಮ ಬಂಗಾಳ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಬಿಜೆಪಿ ಪಕ್ಷವು ಒತ್ತಾಯ ಮಾಡುತ್ತಿದೆ. ಪಕ್ಷಿಮ ಬಂಗಾಳದಲ್ಲಿ ಇದೀಗ ಹಿಂಸಾಚಾರಗಳು ಭುಗಿಲೆದ್ದಿದ್ದು ಒಂದು ವೇಳೆ ಇದೆ ಪರಿಸ್ಥಿತಿ ಮುಂದುವರೆದಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರಪತಿ ಆಡಳಿತ ಇರದೆ ಬೇರೆ ದಾರಿ ಇರುವುದಿಲ್ಲ, ಅಲ್ಲಿನ ರಾಜ್ಯ ಸರ್ಕಾರವು ಹಿಂಸಾಚಾರವನ್ನು ತಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಹೀಗಿರುವಾಗ ಇದೀಗ ಬಿಜೆಪಿ ಪಕ್ಷವೇ, ಅಮಿತ್ ಶಾ ರವರ ಮೇಲೆ ಒತ್ತಡ ಹೇರಲು ನಿರ್ಧಾರ ಮಾಡಿದ್ದು ಒಂದು ವೇಳೆ ಅಮಿತ್ ಶಾ ರವರು ಗ್ರೀನ್ ಸಿಗ್ನಲ್ ಕೊಟ್ಟಲ್ಲಿ ಪಕ್ಷಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ ಹಾಗೂ ಇತರ ಮಾಧ್ಯಮಗಳು ತಲುಪಿಸಿದ ಸುದ್ದಿಗಳನ್ನು ನಾವು ನಿಮಗೆ ತಲುಪಿಸುತ್ತೇವೆ, ಮತ್ತಷ್ಟು ಈ ರೀತಿಯ ಸುದ್ದಿಗಳಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡುವ ಮೂಲಕ ಫಾಲೋ ಮಾಡಿ.

Facebook Comments

Post Author: Ravi Yadav