ಬಲಿದಾನದ ಲಾಂಛನವನ್ನು ಬಳಸಲು ಹೊಸ ಪ್ಲಾನ್ ನೀಡಿದ ಡ್ಯಾಶಿಂಗ್ ಓಪನರ್ !

ಬಲಿದಾನದ ಲಾಂಛನವನ್ನು ಬಳಸಲು ಹೊಸ ಪ್ಲಾನ್ ನೀಡಿದ ಡ್ಯಾಶಿಂಗ್ ಓಪನರ್ !

ಅದ್ಯಾಕೋ ಐಸಿಸಿ ಸಂಸ್ಥೆಯು ತನ್ನ ಅಡಿಯಲ್ಲಿ ನಡೆಯುತ್ತಿರುವ ವಿಶ್ವಕಪ್ ನಲ್ಲಿ ಸುಖಾಸುಮ್ಮನೆ ಇನ್ನಿಲ್ಲದ ವಿಷಯಗಳಿಗೆ ತಲೆಕೆಡಿಸಿಕೊಳ್ಳುತ್ತಿದೆ. ಈಗಾಗಲೇ ಹಲವಾರು ವಿವಾದಗಳು ಟೂರ್ನಿಯಲ್ಲಿ ಸೃಷ್ಟಿಯಾಗಿವೆ ಅದರಲ್ಲಿಯೂ ಅಂಪೈರುಗಳು ಬಾರಿ ವಿವಾದಾತ್ಮಕ ತೀರ್ಪುಗಳನ್ನು ನೀಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ರೀತಿಯ ವಿಷಯಗಳ ಬಗ್ಗೆ ಗಮನ ಹರಿಸದೆ, ಮಹೇಂದ್ರ ಸಿಂಗ್ ಧೋನಿ ರವರು ಕೀಪಿಂಗ್ ಗ್ಲೌಸ್ ಗಳಲ್ಲಿ ಭಾರತೀಯ ಸೇನೆಯ ಬಲಿದಾನವನ್ನು ಸೂಚಿಸುವ ಲೋಗೋ ಧರಿಸಿದರ ಬಗ್ಗೆ ಬಾರಿ ತಲೆಕೆಡಿಸಿಕೊಂಡಿದೆ ಹಾಗೂ ಈ ವಿಷಯದಲ್ಲಿ ಬಿಸಿಸಿಐ ಹಾಗೂ ಐಸಿಸಿ ಸಂಸ್ಥೆಗಳ ನಡುವಿನ ತಿಕ್ಕಾಟ ಮುಂದುವರೆದಿದೆ. ಅಧಿಕೃತ ತೀರ್ಪು ಹೊರಬಂದ ನಂತರವೂ ಬಿಸಿಸಿಐ ಸಂಸ್ಥೆಯೂ ಐಸಿಸಿಯನ್ನು ಮನವೊಲಿಸಲು ಮುಂದಾಗಿದೆ.

ಹೀಗಿರುವಾಗ ಇಂದು ನಡೆಯುವ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ರವರು ಯಾವ ರೀತಿಯ ಕೀಪಿಂಗ್ ಗ್ಲೌಸ್ ಧರಿಸುತ್ತಾರೆ ಎಂಬುದು ಎಲ್ಲರಿಗೂ ಪ್ರಶ್ನೆಯಾಗಿ ಉಳಿದಿದೆ. ಇದೇ ವಿಷಯವಾಗಿ ಇಂದು ಭಾರತದ ಡ್ಯಾಶಿಂಗ್ ಓಪನರ್ ಎಂದೇ ಖ್ಯಾತಿ ಪಡೆದುಕೊಂಡಿರುವ ವೀರೇಂದ್ರ ಸೆಹ್ವಾಗ್ ರವರು ಧ್ವನಿ ಎತ್ತಿದ್ದು ಧೋನಿ ರವರ ಪರ ಬ್ಯಾಟ್ ಬೀಸಿದ್ದಾರೆ. ನೀವು ಮಾಡುತ್ತಿರುವುದು ಒಳ್ಳೆಯ ಕೆಲಸ, ಒಂದು ವೇಳೆ ಐಸಿಸಿ ಸಂಸ್ಥೆಯು ನಿಮಗೆ ಅನುಮತಿ ನೀಡದೇ ಇದ್ದಲ್ಲಿ ಕೀಪಿಂಗ್ ಗ್ಲೌಸ್ ಗಳ ಬದಲು ಬ್ಯಾಟ್ ಮೇಲೆ ಭಾರತೀಯ ಸೇನೆಯ ಬ್ಯಾಡ್ಜ್ ಬಳಸಿ, ಐಸಿಸಿ ಸಂಸ್ಥೆಯ ನಿಯಮದ ಪ್ರಕಾರ ಒಂದು ಬ್ಯಾಟಿನ ಮೇಲೆ 2 ಲೋಗೋ ಗಳನ್ನು ಬಳಸಬಹುದು. ಒಂದು ಭಾರತೀಯ ಸೇನೆಯ ಬಲಿದಾನವನ್ನು ಸೂಚಿಸುವ ಲಾಂಛನ ಮತ್ತೊಂದು ನೀವು ಒಪ್ಪಂದ ಮಾಡಿಕೊಂಡಿರುವಂತೆ ಕಂಪನಿಯ ಲೋಗೋ ಬಳಸಿ ಇದಕ್ಕೆ ಯಾವ ಐಸಿಸಿ ಸಂಸ್ಥೆಯು ತಡೆಯೊಡ್ಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.