ಮೋದಿಗೆ ಮತ್ತೊಂದು ಪರಮೋಚ್ಚ ಪ್ರಶಸ್ತಿ! ಸಲಾಂ ಮೋದಿಜಿ

ಮೋದಿಗೆ ಮತ್ತೊಂದು ಪರಮೋಚ್ಚ ಪ್ರಶಸ್ತಿ! ಸಲಾಂ ಮೋದಿಜಿ

ನರೇಂದ್ರ ಮೋದಿ ರವರು ಕಳೆದ ಬಾರಿ ತಮ್ಮ ಅಧಿಕಾರದ ಅವಧಿಯಲ್ಲಿ ವಿಶ್ವ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಬಹಳಷ್ಟು ಹೆಚ್ಚಿಸಿದ್ದಾರೆ. ವಿದೇಶಗಳಲ್ಲಿ ಭಾರತದ ಕೀರ್ತಿಪತಾಕೆ ಹಾರುವಂತೆ ಮಾಡಿರುವ ನರೇಂದ್ರ ಮೋದಿ ರವರು, ಭಾರತವನ್ನು ವಿಶ್ವಗುರು ಮಾಡುವತ್ತ ದಿಟ್ಟ ದಿಟ್ಟ ಹೆಜ್ಜೆಗಳನ್ನು ಇಡುತ್ತ ಮುಂದೆ ಸಾಗುತ್ತಿದ್ದಾರೆ. ಈಗಾಗಲೇವಿಶ್ವದ ಹಲವಾರು ಬಲಾಢ್ಯ ರಾಷ್ಟ್ರಗಳು ಭಾರತದ ಜೊತೆ ಸ್ನೇಹ ಸಂಬಂಧವನ್ನು ಬೆಳೆಸಲು ತುದಿಗಾಲಲ್ಲಿ ಕಾದು ಕುಳಿತಿದ್ದಾರೆ. ಇದಕ್ಕೆಲ್ಲ ಕಾರಣ ನರೇಂದ್ರಮೋದಿ ರವರ ಅಧಿಕಾರ ಎಂದರೆ ತಪ್ಪಾಗಲಾರದು.

ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ವಿದೇಶಗಳನ್ನು ಸುತ್ತಿ ನರೇಂದ್ರ ಮೋದಿ ರವರು ಭಾರತಕ್ಕೆ ವಿದೇಶಿ ಬಂಡವಾಳವನ್ನು ತರುವಲ್ಲಿ ಬಹಳ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ ಇತರ ದೇಶಗಳ ಜೊತೆ ಸ್ನೇಹ ಸಂಬಂಧದ ವೃದ್ಧಿಗೆ ಒತ್ತು ನೀಡಿದ್ದಾರೆ. ಇದೇ ನಿಟ್ಟಿನಲ್ಲಿ ವಿಶ್ವದ ಹಲವಾರು ಬಲಾಢ್ಯ ರಾಷ್ಟ್ರಗಳು ನರೇಂದ್ರ ಮೋದಿಯವರಿಗೆ ವಿದೇಶಿ ಗಣ್ಯರಿಗೆ ನೀಡುವ ಹಲವಾರು ಪ್ರತಿಷ್ಟಿತ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದ್ದಾರೆ. ಇದೇ ಸಾಲಿಗೆ ಇದೀಗ ಭಾರತದ ಮಿತ್ರರಾಷ್ಟ್ರ ಸೇರಿಕೊಂಡಿದ್ದು ನರೇಂದ್ರಮೋದಿ ರವರ ಮುಡಿಗೆ ಮತ್ತೊಂದು ಪ್ರಶಸ್ತಿಯ ಗರಿ ಸೇರಿಕೊಳ್ಳಲಿದೆ.

ಎರಡನೇ ಅಧಿಕಾರದ ಅವಧಿಯಲ್ಲಿ ಇಂದಿನಿಂದ ವಿದೇಶಿ ಪ್ರವಾಸವನ್ನು ಆರಂಭಿಸಲಿರುವ ನರೇಂದ್ರ ಮೋದಿ ಅವರು ಮಾಡಿದ ಎರಡನೇ ಬಾರಿ ಮಾಲ್ಡಿವ್ಸ್ ಮಾಲ್ಡಿವ್ಸ್ ಭೇಟಿ ನೀಡುತ್ತಿದ್ದಾರೆ. ಕಳೆದ ಬಾರಿಯ ಅಧಿಕಾರವಧಿಯಲ್ಲಿ ಭೇಟಿ ನೀಡಿ, ರಕ್ಷಣೆಯ ವಿಚಾರದಲ್ಲಿ ಹಲವಾರು ಒಪ್ಪಂದಗಳನ್ನು ಮಾಡಿಕೊಂಡು, ಮತ್ತಷ್ಟು ಸ್ನೇಹ ಸಂಬಂಧವನ್ನು ಬೆಳೆಸಿಕೊಂಡಿದ್ದ ನರೇಂದ್ರ ಮೋದಿ ರವರಿಗೆ ಇದೀಗ ಮಾಲ್ಡಿವ್ಸ್ ಸರ್ಕಾರವು ವಿದೇಶಿ ಗಣ್ಯರಿಗೆ ನೀಡುವ ಪರಮೋಚ್ಛ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಈ ಘೋಷಣೆಯನ್ನು ಖುದ್ದು ಮಾಲ್ಡಿವ್ಸ್ ದೇಶದ ಪ್ರಧಾನಿ ಹಾಗೂ ನರೇಂದ್ರ ಮೋದಿರವರ ಆಪ್ತಮಿತ್ರ ಇಬ್ರಾಹಿಂ ಸೋಲಿ ಖಚಿತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಇಬ್ರಾಹಿಂರವರು ಮಾಲ್ಡಿವ್ಸ್ ಸರ್ಕಾರದ ವತಿಯಿಂದ ವಿದೇಶಿ ಗಣ್ಯರಿಗೆ ನೀಡುವ ಅತ್ಯುನ್ನತ ಪ್ರಶಸ್ತಿ ನಿಶಾನ್ ಇಜ್ಝುದ್ದೀನ್ ಪ್ರಶಸ್ತಿಯನ್ನು ನರೇಂದ್ರ ಮೋದಿ ಅವರು ಈ ಬಾರಿ ಭೇಟಿಯಾಗುವ ಸಂದರ್ಭದಲ್ಲಿ ನೀಡಲಾಗುತ್ತದೆ. ಎರಡನೇ ಬಾರಿಗೆ ಮಾಲ್ಡಿವ್ಸ್ ಗೆ ಆಗಮಿಸುತ್ತಿರುವ ನರೇಂದ್ರ ಮೋದಿಯವರಿಗೆ ಸುಸ್ವಾಗತ ಎಂದಿದ್ದಾರೆ. ಒಟ್ಟಿನಲ್ಲಿ ಹಲವಾರು ದೇಶಗಳ ಪರಮೋಚ್ಛ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ನರೇಂದ್ರ ಮೋದಿ ಅವರು ಇದೀಗ ಮತ್ತೊಂದು ದೇಶದ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದೇ ರೀತಿ ಎಲ್ಲಾ ದೇಶಗಳ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡು ಭಾರತವು ವಿಶ್ವದ ಮಟ್ಟದಲ್ಲಿ ಮತ್ತಷ್ಟು ಬಲಾಡ್ಯ ದೇಶವಾಗಲಿ ಎಂಬುದು ನಮ್ಮ ಆಶಯ.