ಶಾಕಿಂಗ್ ನಿರ್ಧಾರ ತೆಗೆದುಕೊಳ್ಳುವತ್ತ ಧೋನಿ ! ಜಗ್ಗದ ಐಸಿಸಿ.. ಬಿಸಿಸಿಐ ಹೊಸ ಪ್ಲಾನ್

ಶಾಕಿಂಗ್ ನಿರ್ಧಾರ ತೆಗೆದುಕೊಳ್ಳುವತ್ತ ಧೋನಿ ! ಜಗ್ಗದ ಐಸಿಸಿ.. ಬಿಸಿಸಿಐ ಹೊಸ ಪ್ಲಾನ್

ಇದೀಗ ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಇಡೀ ವಿಶ್ವದ ಗಮನ ಸೆಳೆದಿದೆ.  ಸೌತ್ ಆಫ್ರಿಕಾದ ವಿರುದ್ಧದ ಪಂದ್ಯದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಮಹೇಂದ್ರ ಸಿಂಗ್ ಧೋನಿ ರವರು ಭಾರತೀಯ ಸೇನೆಯ ಬಲಿದಾನದ ಲಾಂಛನವನ್ನು ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್ ಗಳಲ್ಲಿ ಮುದ್ರಿಸಿಕೊಂಡು ಆಡುವ ಮೂಲಕ ವಿಶ್ವದ ಗಮನ ಸೆಳೆದಿದ್ದರು. ಇಡೀ ವಿಶ್ವದ ಜನರು ಮಹೇಂದ್ರ ಸಿಂಗ್ ಧೋನಿ ರವರಿಗೆ ಭಾರತೀಯ ಸೇನೆಯ ಮೇಲೆ ಇರುವ ಗೌರವವನ್ನು ಕೊಂಡಾಡುತ್ತಿದ್ದಾರೆ, ಆದರೆ ಯುದ್ಧಭೂಮಿಯಲ್ಲಿ ಕೈಲಾಗದ ನೆರೆಯ ಶತ್ರು ರಾಷ್ಟ್ರವಾದ ಪಾಕಿಸ್ತಾನವು ಮಾತ್ರ ಇದನ್ನು ಸಹಿಸಿ ಕೊಳ್ಳುತ್ತಿಲ್ಲ. ತಾವು ಮೈದಾನದಲ್ಲಿ ನಮಾಜ್ ಮಾಡುವ ಮೂಲಕ ಧರ್ಮಿಯ ಅಂಶಗಳನ್ನು ಮೈದಾನಕ್ಕೆ ಎಳೆದಿದ್ದೇವೆ ಎಂಬುದನ್ನು ಮರೆತು ಭಾರತೀಯ ಸೇನೆಯ ಲಾಂಛನವನ್ನು ಮುದ್ರಿಸಿಕೊಂಡಿದ್ದಕ್ಕಾಗಿ ಮನಬಂದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪಾಕಿಸ್ತಾನದ ಕೆಲವು ಉನ್ನತ ಮಿನಿಸ್ಟರ್ ಗಳು ಹೊರತಲ್ಲ.

ಆದರೆ ಇತ್ತ ಭಾರತೀಯರು ಮಾತ್ರ ಧೋನಿ ರವರ ನಡೆಗೆ ಶಹಭಾಷ್ ಎನ್ನುತ್ತಿದ್ದಾರೆ. ಬಿಸಿಸಿಐ ಸಂಸ್ಥೆಯು ಸಹ ಮಹೇಂದ್ರ ಸಿಂಗ್ ಧೋನಿರವರ ಬೆಂಬಲಕ್ಕೆ ನಿಂತು ಐಸಿಸಿ ಸಂಸ್ಥೆಗೆ ಧೋನಿರವರು ಎಂದಿನಂತೆ ಭಾರತೀಯ ಸೇನೆಯ ಲಾಂಛನವನ್ನು ಧರಿಸಿ ಆಡಲು ಅವಕಾಶ ನೀಡುವಂತೆ ಮನವಿ ಮಾಡಿತ್ತು. ಆದರೆ ಅದ್ಯಾಕೋ ಐಸಿಸಿ ಸಂಸ್ಥೆಯು ಬಿಸಿಸಿಐ ಮನವಿಯನ್ನು ಒಪ್ಪಿಕೊಂಡಿಲ್ಲ, ಮಹೇಂದ್ರ ಸಿಂಗ್ ಧೋನಿ ರವರು ಮುಂದಿನ ಪಂದ್ಯದಲ್ಲಿ ಕಣಕ್ಕೆ ಇಳಿಯಬೇಕಾದರೆ ಲಾಂಛನ ಇಲ್ಲದಿರುವ ವಿಕೆಟ್ ಕೀಪಿಂಗ್ ಗ್ಲೌಸ್ ಗಳನ್ನು ಧರಿಸಬೇಕು ಎಂಬ ಆದೇಶ ನೀಡಿದೆ .

ಆದರೆ ಇದಕ್ಕೆ ಯಾವೊಬ್ಬ  ಭಾರತೀಯನು ಒಪ್ಪಲು ತಯಾರಿಲ್ಲ, ಖುದ್ದು ಕೂಲ್ ಕ್ಯಾಪ್ಟನ್ ಎಂದು ಹೆಸರು ಪಡೆದುಕೊಂಡಿರುವ  ಮಹೇಂದ್ರ ಸಿಂಗ್ ಧೋನಿರವರು ಸಹ ಈ ವಿಷಯದಲ್ಲಿ ಗರಂ ಆಗಿದ್ದಾರೆ. ಹೌದು ಮಹೇಂದ್ರ ಸಿಂಗ್ ಧೋನಿ ರವರು ಇದೀಗ ನಾನು ಕಣಕ್ಕೆ ಇಳಿಯಬೇಕು ಎಂದರೆ ನನ್ನ ಕೈಯಲ್ಲಿ ಬಲಿದಾನವನ್ನು ಸೂಚಿಸುವ ವಿಕೆಟ್ ಕೀಪಿಂಗ್ ಗ್ಲೌಸ್ ಗಳನ್ನು ಬಳಸಲೇಬೇಕು ಎಂದು ಉತ್ತರ ನೀಡಿದ್ದಾರೆ ,ಇಲ್ಲವಾದಲ್ಲಿ ರಾಜೀನಾಮೆ ನೀಡಲು ಸಹ ಸಿದ್ಧವಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಸಿಸಿಐ ಸಂಸ್ಥೆಯು ಐಸಿಸಿ ಹಾಗೂ ಧೋನಿ ರವರ ನಡುವೆ ಸಿಲುಕಿಕೊಂಡು ಬೇರೆ ದಾರಿಯಿಲ್ಲದೆ ಐಸಿಸಿ ಸಂಸ್ಥೆಯನ್ನು ಮನವೊಲಿಸಲು ಹೊಸ ಯೋಜನೆ ರೂಪಿಸಿದೆ. ಬಿಸಿಸಿಐ ಸಿಇಒ ರಾಹುಲ್ ರವರು ಲಂಡನ್  ಗೆ ತೆರಳಿದ್ದಾರೆ. ಇಂದು ಅಧಿಕಾರಿಗಳ ಜೊತೆ ವಿಶೇಷ ಚರ್ಚೆಯನ್ನು ನಡೆಸಿ ಮಹೇಂದ್ರ ಸಿಂಗ್ ಧೋನಿರವರು ಭಾರತೀಯ ಸೇನೆಯ ಬಲಿದಾನದ ಗ್ಲೌಸ್ ಗಳನ್ನು ಧರಿಸಲು ಅನುಮತಿ ನೀಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಭಾನುವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಖಚಿತವಾಗಿಯೂ ಮಹೇಂದ್ರ ಸಿಂಗ್ ಧೋನಿ ರವರು ಯೋಧರ ಬಲಿದಾನದ ಲಾಂಛನವನ್ನು ಹೊಂದಿರುವ ಗ್ಲೌಸ್ ಗಳನ್ನು ಧರಿಸಿ ಮೈದಾನಕ್ಕೆ ಇಳಿಯಲಿದ್ದಾರೆ ಎಂದು ರಾಹುಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.