ಅಮಿತ್ ಶಾ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ !! ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡ ಬಿಜೆಪಿ ಹೈಕಮಾಂಡ್

ಅಮಿತ್ ಶಾ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ !! ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡ ಬಿಜೆಪಿ ಹೈಕಮಾಂಡ್

ದೇಶದಲ್ಲಿಯೇ ಪ್ರಭಾವಿ ರಾಜಕೀಯ ಚಾಣಕ್ಯ ಎಂದೇ ಖ್ಯಾತಿ ಪಡೆದುಕೊಂಡಿರುವ ಅಮಿತ್ ಶಾ ರವರ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ, ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಮಿತ್ ಶಾ ರವರು, ಇಡೀ ದೇಶದಲ್ಲಿ ಬಿಜೆಪಿ ಪಕ್ಷವು ಯಾವ ರೀತಿಯ ತಂತ್ರಗಳನ್ನು ಹೆಣೆಯಬೇಕು ಎಂದು ಪ್ಲಾನ್ ಮಾಡಿ ಅದರಂತೆಯೇ ಇಡೀ ದೇಶದಲ್ಲಿ ಇಂದು ಕೇಸರಿ ಬಾವುಟವನ್ನು ಹಾರಿಸಿದ್ದಾರೆ. ಹಲವಾರು ಹಿರಿಯ ನಾಯಕರನ್ನು ಬಹಳ ಸುಲಭವಾಗಿ ಮಣಿಸಿರುವ ಅಮಿತ್ ಶಾ ರವರ ಚಾಕಚಕ್ಯತೆ ಇಂದು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವಲ್ಲಿ ಮಹತ್ವದ ಪಾತ್ರ ಬೀರಿದೆ.

ಹೀಗಿರುವಾಗ ಅಮಿತ್ ಶಾ ರವರ ಬಿಜೆಪಿ ರಾಷ್ಟ್ರಾಧ್ಯಕ್ಷ ಪಟ್ಟದ ಒಪ್ಪಂದ ಲೋಕಸಭಾ ಚುನಾವಣೆಗೂ ಮುನ್ನವೇ ಮುಗಿದಿತ್ತು, ಚುನಾವಣೆಗೆ ಇನ್ನು ಕೆಲವೇ ಕೆಲವು ದಿನಗಳ ಅವಧಿ ಇರುವ ಕಾರಣ ಅಮಿತ್ ಶಾ ರವರನ್ನು ರಾಷ್ಟ್ರಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಿತ್ತು, ಈ ನಿರ್ಣಯಕ್ಕೆ ನರೇಂದ್ರ ಮೋದಿ ರವರು ಸಹ ಒಪ್ಪಿಗೆ ನೀಡಿದ್ದರು. ಆದರೆ ಅಮಿತ್ ಶಾ ರವರು ಭಾರತದ ಗೃಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಯಾರಾಗುತ್ತಾರೆ ಎಂದು ಇಡೀ ದೇಶದ ಬಿಜೆಪಿ ಕಾರ್ಯಕರ್ತರು ಕಾದು ಕುಳಿತಿದ್ದರು. ಇನ್ನು ಕೆಲವರು ಅಮಿತ್ ಶಾ ರವರಿಗೆ ಎರಡು ಹುದ್ದೆಗಳನ್ನು ನಿರ್ವಹಿಸುವ ತಾಕತ್ತು ಇದೆ ಹಾಗೂ ಈ ಚಾಣಕ್ಯನ ನಾಯಕತ್ವದಲ್ಲಿ ನಾವು ಚುನಾವಣೆಯನ್ನು ಎದುರಿಸಿದರೆ ಬಹಳ ಸುಲಭವಾಗಿ ಗೆದ್ದು ಬೀಗುತ್ತೇವೆ ಎಂದು ಅಭಿಪ್ರಾಯಪಟ್ಟಿದ್ದರು.

ಇದೀಗ ಅಮಿತ್ ಶಾ ರವರ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು ಅಮಿತ್ ಶಾ ರವರು ಇನ್ನು ಕೆಲವು ವರ್ಷಗಳ ಕಾಲ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಮುಂದುವರೆಯುವುದು ಖಚಿತವಾಗಿದೆ.‌ ಹೌದು ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ಎಂಬ ಖ್ಯಾತಿಗೆ ಒಳಗಾಗಿರುವ ಬಿಜೆಪಿ ಪಕ್ಷವು ಪಕ್ಷದ ಕುರಿತು ಯಾವುದೇ ನಿರ್ಣಯವನ್ನು ತನ್ನ ಸ್ವಂತವಾಗಿ ತೆಗೆದುಕೊಳ್ಳುವುದಿಲ್ಲ. ಬದಲಾಗಿ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿ, ಮುಂದಿನ ನಿರ್ಣಯ ಕೈಗೊಳ್ಳಲಾಗುತ್ತದೆ. ಅದೇ ಕಾರಣಕ್ಕಾಗಿ ಈದೀಗ ಅಮಿತ್ ಶಾ ರವರು ಇನ್ನೂ ಕೆಲವು ವರ್ಷಗಳ ಕಾಲ ರಾಷ್ಟ್ರಾಧ್ಯಕ್ಷರಾಗಿ ಮುಂದುವರೆಯುವುದು ಖಚಿತವಾಗಿದೆ.

ಶೀಘ್ರದಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಲಿರುವ ರಾಜ್ಯಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ನಡೆಸಿ, ತದನಂತರ ಬೂತ್ ಮಟ್ಟದಿಂದ ಸಂಘಟನೆಯನ್ನು ಪುನಾರಚನೆ ಮಾಡಿ ಎಲ್ಲಾ ರಾಜ್ಯ ಮಂಡಳಿಗಳ ನೂತನ ಸದಸ್ಯರನ್ನು ಆಯ್ಕೆ ಮಾಡಿ, ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ, ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರದ್ಯಕ್ಷರು ಸೇರಿದಂತೆ ಹಿರಿಯ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವ ಮುನ್ನ ಶೇಕಡ 50 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಂತರಿಕ ಚುನಾವಣೆ ಪೂರ್ಣಗೊಳ್ಳಬೇಕು ಎಂಬುದು ಬಿಜೆಪಿ ಪಕ್ಷದ ತತ್ವ. ಈ ಎಲ್ಲಾ ಪ್ರಕ್ರಿಯೆ ಮುಗಿಯುವವರೆಗೂ ಅಮಿತ್ ಶಾ ರವರು ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.