ವಿಶ್ವನಾಥ್ರವರಿಗೆ ಖುಲಾಯಿಸಲಿದೆಯೇ ಅದೃಷ್ಟ ! ರಾಜೀನಾಮೆ ನೀಡಿ ಬಂಪರ್ ಹೊಡೆಯಲು ಸಿದ್ದರಾದ ವಿಶ್ವನಾಥ್

ವಿಶ್ವನಾಥ್ರವರಿಗೆ ಖುಲಾಯಿಸಲಿದೆಯೇ ಅದೃಷ್ಟ ! ರಾಜೀನಾಮೆ ನೀಡಿ ಬಂಪರ್ ಹೊಡೆಯಲು ಸಿದ್ದರಾದ ವಿಶ್ವನಾಥ್

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜೆಡಿಎಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದೆ. ಇಡೀ ಕರ್ನಾಟಕದ 28ಲೋಕಸಭಾ ಕ್ಷೇತ್ರಗಳಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿರುವ ಜೆಡಿಎಸ್ ಪಕ್ಷವು ಕಾಂಗ್ರೆಸ್ ಪಕ್ಷದ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡರೂ ಸಹ ಉಳಿದ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಹೀಗಿರುವಾಗ ಪದ್ಧತಿಯಂತೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರು ಲೋಕಸಭಾ ಚುನಾವಣೆಯ ಸೋಲನ್ನು ತಮ್ಮ ಮೇಲೆ ಹೊರಿಸಿಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಪಕ್ಷದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಆಯ್ಕೆ ಮಾಡಿದ ಅಭ್ಯರ್ಥಿಯ ಬದಲಾಗಿ ಉಳಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿರುವುದು ಸೋಲಿಗೆ ಕಾರಣ ಎಂದು ತಮ್ಮ ಪಕ್ಷದ ನಾಯಕರ ವಿರುದ್ಧ ಕೊಂಚ ಗುಡುಗಿದ್ದಾರೆ.

ಹೀಗಿರುವಾಗ ಒಂದು ವೇಳೆ ವಿಶ್ವನಾಥ್ ರವರನ್ನು ಕಳೆದುಕೊಂಡರೇ ಇದೀಗ ಮೈಸೂರು ಭಾಗದಲ್ಲಿರುವ ಕುರುಬ ಸಮುದಾಯದ ಮತಗಳಿಗೆ ಪೆಟ್ಟು ಬೀಳಲಿದೆ, ಅಷ್ಟೇ ಅಲ್ಲದೆ ಕುರುಬ ಸಮುದಾಯಕ್ಕೆ ಕೆಟ್ಟ ಸಂದೇಶವನ್ನು ರವಾನಿಸಿದಂತೆ ಆಗುತ್ತದೆ ಎಂಬುದನ್ನು ಅರಿತ ಜೆಡಿಎಸ್ ಪಕ್ಷವು ಇದೀಗ ಅನುಭವದ ಆಧಾರದ ಮೇಲೆ ಹೆಚ್ ವಿಶ್ವನಾಥ್ ಅವರಿಗೆ ಬಿಎಸ್ಪಿ ಪಕ್ಷದಿಂದ ಆಯ್ಕೆಯಾಗಿ ಶಿಕ್ಷಣ ಮಂತ್ರಿಯಾಗಿದ್ದ ಎನ್ ಮಹೇಶ್ ರವರ ರಾಜೀನಾಮೆಯಿಂದ ತೆರವಾಗಿರುವ ಕರ್ನಾಟಕದ ಶಿಕ್ಷಣ ಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ವಿಶ್ವನಾಥ್ ರವರ ರಾಜೀನಾಮೆಯನ್ನು ತಿರಸ್ಕರಿಸಿ, ನಂತರ ಮಂತ್ರಿ ಸ್ಥಾನ ನೀಡಿ, ವಿಶ್ವನಾಥ್ ರವರನ್ನು ಮನವೊಲಿಸುವುದು ಜೆಡಿಎಸ್ ಪಕ್ಷದ ಪ್ರಮುಖ ಗುರಿ ಎನ್ನಲಾಗಿದೆ. ಒಟ್ಟಿನಲ್ಲಿ ರಾಜೀನಾಮೆ ನೀಡಿದ ವಿಶ್ವನಾಥ್ ರವರು ಒಂದು ವೇಳೆ ಈ ಆಫರ್ ಅನ್ನು ಒಪ್ಪಿಕೊಂಡಲ್ಲಿ ರಾಜೀನಾಮೆ ನೀಡಿ ಬಂಪರ್ ಹೊಡೆಯಲಿದ್ದಾರೆ.