ಸೌತ್ ಆಫ್ರಿಕಾ ಪಂದ್ಯಕ್ಕೆ ಇಲ್ಲಿದೆ ಭಾರತ ತಂಡದ ಸಂಭವನೀಯ ಪಟ್ಟಿ

ಬಿಸಿಸಿಐ ಕಾನೂನಿನ ಪ್ರಕಾರ ಎರಡು ಟೂರ್ನಿಗಳಿಗೆ ಕನಿಷ್ಠ 15 ದಿನಗಳ ಕಾಲಾವಕಾಶ ಇರಬೇಕು ಎಂಬುದನ್ನು ಆಧಾರವಾಗಿಟ್ಟುಕೊಂಡು ವಿಶ್ವಕಪ್ ಆರಂಭವಾದ ಹಲವಾರು ದಿನಗಳ ಬಳಿಕ ಪಂದ್ಯವನ್ನು ನಿಗದಿ ಮಾಡಿಕೊಂಡಿರುವ ಭಾರತ ತಂಡವು ಇದೀಗ ವಿಶ್ವದ ಬಲಾಢ್ಯ ತಂಡಗಳಲ್ಲಿ ಒಂದಾಗಿರುವ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲು ಸಿದ್ಧವಾಗಿದೆ. ಈಗಾಗಲೇ ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಈದೀಗ ಮಾರಕ ವೇಗಿ ಡೆಲ್ ಸ್ಟೈನ್ ಅವರ ಅಲಭ್ಯತೆ ಕಾಡಲಿದೆ. ಇನ್ನೊಂದು ಕಡೆ ಅಭ್ಯಾಸದ ವೇಳೆಯಲ್ಲಿ ಕೈಗೆ ಗಾಯ ಮಾಡಿಕೊಂಡ ವಿರಾಟ್ ಕೊಹ್ಲಿ ರವರು ಇದೀಗ ಭಾರತ ತಂಡದಲ್ಲಿ ಆಗುವುದು ಖಚಿತವಾಗಿದ್ದು, ಭಾರತ ತಂಡವು ಯಾವುದೇ ಆತಂಕವಿಲ್ಲದೆ ದಕ್ಷಿಣ ಆಫ್ರಿಕಾದ ವಿರುದ್ಧ ಪಂದ್ಯವಾಡಲು ಸಿದ್ಧವಾಗಿದೆ.

ಹೀಗಿರುವಾಗ ಸೌತಾಂಪ್ಟನ್ ವಾತಾವರಣಕ್ಕೆ ಅನುಗುಣವಾಗಿ ತಂಡವನ್ನು ಆಯ್ಕೆ ಮಾಡಲಿರುವ ನಾಯಕ ವಿರಾಟ್ ಕೊಹ್ಲಿ ಅವರು ಅಳೆದು-ತೂಗಿ ತಂಡವನ್ನು ಆಯ್ಕೆ ಮಾಡಲಿದ್ದಾರೆ. ಒಂದು ವೇಳೆ ಮೋಡ ಕವಿದ ವಾತಾವರಣ ಮುಂದುವರೆದರೇ ಮೂರನೇ ವೇಗಿಯಾಗಿ ಭುವನೇಶ್ವರ್ ಕುಮಾರ್ ರವರು ಸ್ಥಾನ ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಕೇದಾರ್ ಜಾಧವ್ ರವರು ಇನ್ನೂ ಸಂಪೂರ್ಣವಾಗಿ ಗುಣಮುಖರಾಗದೇ ಇರುವುದರಿಂದ ರವೀಂದ್ರ ಜಡೇಜಾ ರವರು ಸ್ಥಾನ ಪಡೆಯುವುದು ಖಚಿತವಾಗಿದೆ. ಸೌತ್ ಆಫ್ರಿಕಾದ ವಿರುದ್ಧದ ಪಂದ್ಯಕ್ಕೆ ಸಂಭವನೀಯ ಭಾರತ ತಂಡ ಈ ಕೆಳಗಿನಂತಿದೆ. ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ(ನಾಯಕ), ಕೆಎಲ್ ರಾಹುಲ್, ಎಂ.ಎಸ್.ಧೋನಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ. ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ

Facebook Comments

Post Author: Ravi Yadav