ರೊಚ್ಚಿಗೆದ್ದ ರಾಹುಲ್ ಗಾಂಧಿ, ಬಿಜೆಪಿ ಪಕ್ಷವನ್ನು ಮಟ್ಟಹಾಕಲು ಎಷ್ಟು ನಿಮಿಷ ಬೇಕಂತೆ ಗೊತ್ತಾ??

ರೊಚ್ಚಿಗೆದ್ದ ರಾಹುಲ್ ಗಾಂಧಿ, ಬಿಜೆಪಿ ಪಕ್ಷವನ್ನು ಮಟ್ಟಹಾಕಲು ಎಷ್ಟು ನಿಮಿಷ ಬೇಕಂತೆ ಗೊತ್ತಾ??

ಈ ಬಾರಿ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಕಳೆದ ಬಾರಿಯ ಚುನಾವಣೆಯಂತೆ ಈ ಬಾರಿಯೂ ಮಕಾಡೆ ಮಲಗಿದೆ. ಕೇವಲ 52 ಲೋಕಸಭಾ ಸೀಟುಗಳನ್ನು ಗೆದ್ದುಕೊಂಡಿರುವ ಕಾಂಗ್ರೆಸ್ ಪಕ್ಷವು ಬಿಜೆಪಿ ಪಕ್ಷಕ್ಕೆ ಬರೋಬ್ಬರಿ 303 ಸೀಟುಗಳನ್ನು ಬಿಟ್ಟುಕೊಟ್ಟಿದೆ. ಇನ್ನು ಮೈತ್ರಿಕೂಟಗಳ ಸಂಖ್ಯೆ ತೆಗೆದುಕೊಂಡರೆ ಬಿಜೆಪಿ ಪಕ್ಷವು 350 ರ ಆಸುಪಾಸಿನಲ್ಲಿ ಸೀಟುಗಳನ್ನು ಭದ್ರಪಡಿಸಿಕೊಂಡು ಐದು ವರ್ಷ ಸಂಪೂರ್ಣವಾಗಿ ಅಧಿಕಾರ ನಡೆಸುವ ಎಲ್ಲಾ ಸೂಚನೆಗಳನ್ನು ಈಗಾಗಲೇ ನೀಡಿದೆ. ಫಲಿತಾಂಶದ ನಂತರ ರಾಜೀನಾಮೆ ನೀಡುವ ಮಾತುಗಳನ್ನು ಆಡಿದ ರಾಹುಲ್ ಗಾಂಧಿ ಅವರು ಇದೀಗ ಮತ್ತೊಮ್ಮೆ ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ರವರು ಬಹಳ ಗಂಭೀರವಾಗಿ ಆಡಿದ ಮಾತುಗಳು ಕಾಂಗ್ರೆಸ್ ಪಕ್ಷದ ಸಂಸದರಲ್ಲಿ ಹುಮ್ಮಸ್ಸನ್ನು ತುಂಬಿದರೆ, ನಮೋ ಭಕ್ತರಿಗೆ ಮಾತ್ರ ಹೊಸ ರೀತಿಯ ಮನರಂಜನೆಯಾಗಿ ಮಾರ್ಪಟ್ಟಿದೆ. ಹೌದು ಸಂಸದರಿಗೆ ಆತ್ಮಸ್ಥೈರ್ಯ ತುಂಬಲು ರಾಹುಲ್ ಗಾಂಧಿ ಅವರು ಆಡಿದ ಮಾತುಗಳನ್ನು ನಮೋ ಭಕ್ತರು ಮನರಂಜನೆಯಾಗಿ ಪರಿವರ್ತನೆ ಮಾಡಿಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಅವರು ಏನು ಹೇಳಿದ್ದಾರೆ ಗೊತ್ತಾ?? ತಿಳಿಯಲು ಕೆಳಗಡೆ ಓದಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಂಗ್ರೆಸ್ ಪಕ್ಷವು ಈ ಬಾರಿ ಕೇವಲ 52 ಸೀಟುಗಳಲ್ಲಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ, ಇದೇ ವಿಷಯವನ್ನು ಮುಂದಿಟ್ಟುಕೊಂಡು ಇಂದು ಮಾತನಾಡಿದ ರಾಹುಲ್ ಗಾಂಧಿ ರವರು ಸಂಸದರಿಗೆ ಉತ್ಸಾಹ ತುಂಬುವ ಯತ್ನ ಮಾಡುತ್ತಾ ಸಾಮಾನ್ಯವಾಗಿ ಸಂಸತ್ತಿನಲ್ಲಿ ಬಿಜೆಪಿ ಪಕ್ಷವನ್ನು ಎದುರಿಸಲು ಕೇವಲ 40 ಕಾಂಗ್ರೆಸ್ ಪಕ್ಷದ ಸಂಸದರು ಸಾಕು. ಆದರೆ ಈ ಬಾರಿ ನಾವು 52 ಮಂದಿ ಇದ್ದೇವೆ, ಪ್ರತಿಯೊಬ್ಬ ಕಾಂಗ್ರೆಸ್ ಪಕ್ಷದ ಸಂಸದನು ಪ್ರತಿಯೊಬ್ಬ ಭಾರತೀಯನ ಹಕ್ಕಿಗಾಗಿ ಹೋರಾಟ ಮಾಡಬೇಕಿದೆ. ಹೀಗಾಗಿ ಪ್ರತಿದಿನವೂ ನಾವು ಬಿಜೆಪಿ ಪಕ್ಷದೊಂದಿಗೆ ಸಂಸತ್ತಿನಲ್ಲಿ  ಹೋರಾಟ ಮಾಡಬಹುದು, ಕೇವಲ ಎರಡು ನಿಮಿಷಗಳು ಸಾಕು ಬಿಜೆಪಿ ಪಕ್ಷವನ್ನು ಕೆಳಗೆ ಹಾಕಲು ಎಂದು ಹೇಳಿಕೆ ನೀಡಿದ್ದಾರೆ. ಇದೇ ಹೇಳಿಕೆಯನ್ನು ಟ್ರೋಲ್ ಮಾಡುತ್ತಿರುವ ಬಿಜೆಪಿ ಪಕ್ಷದ ಬೆಂಬಲಿಗರು, ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದಾರೆ.