ಬಿಗ್ ನ್ಯೂಸ್: ಮೊದಲ ಯೋಜನೆ ಜಾರಿಗೊಳಿಸಿದ ಮೋದಿ, ಶುರುವಾಯಿತು ಮೋದಿ 2.0 ಮೇನಿಯಾ

ಬಿಗ್ ನ್ಯೂಸ್: ಮೊದಲ ಯೋಜನೆ ಜಾರಿಗೊಳಿಸಿದ ಮೋದಿ, ಶುರುವಾಯಿತು ಮೋದಿ 2.0 ಮೇನಿಯಾ

ನರೇಂದ್ರ ಮೋದಿ ರವರು ಕಳೆದ ಐದು ವರ್ಷಗಳಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ವೈದ್ಯಕೀಯ, ಶಿಕ್ಷಣ, ವ್ಯವಸಾಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿರುವ ನರೇಂದ್ರ ಮೋದಿ ರವರು ತಮ್ಮ ಕಾರ್ಯವೈಖರಿಯಿಂದ ಇಂದು ಮತ್ತೊಮ್ಮೆ ಪ್ರಧಾನಿಯಾಗಿದ್ದಾರೆ. ಕಳೆದ ಐದು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ನರೇಂದ್ರಮೋದಿ ರವರು ಮತ ಕೇಳಿದ ಪರಿಣಾಮ ಬಿಜೆಪಿ ಪಕ್ಷವು ಯಾವುದೇ ಮೈತ್ರಿಕೂಟದ ಬೆಂಬಲವಿಲ್ಲದೇ ಇಂದು ಮುನ್ನೂರಕ್ಕೂ ಹೆಚ್ಚು ಸೀಟುಗಳನ್ನು ಪಡೆದುಕೊಂಡು ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಚುನಾವಣೆಯಲ್ಲಿ ಗೆದ್ದು ಕೇವಲ ನಿನ್ನೆಯಷ್ಟೇ ಪ್ರಮಾಣವಚನ ಸ್ವೀಕಾರ ಮಾಡಿದ ನರೇಂದ್ರ ಮೋದಿ ರವರು ಇಂದು ಮೊದಲ ಸಚಿವ ಸಂಪುಟ ಸಭೆಯಲ್ಲಿ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಈ ರೀತಿಯ ಯೋಜನೆಗಳನ್ನು ಯಾವುದೇ ಮಾಧ್ಯಮಗಳಲ್ಲಿ ತೋರಿಸುತ್ತಿಲ್ಲ ಯಾಕೆ ಎಂಬುದು ನಮಗೂ ತಿಳಿದಿಲ್ಲ !! ಯೋಜನೆಯ ವಿವರಗಳಿಗಾಗಿ ಕೆಳಗಡೆ ಓದಿ.

ಇದೀಗ ಎರಡನೇ ಅವಧಿಗೆ ಪ್ರಧಾನಿ ಪಟ್ಟ ಅಲಂಕರಿಸಿರುವ ನರೇಂದ್ರಮೋದಿ ರವರು ಪ್ರಧಾನಮಂತ್ರಿ ವಿದ್ಯಾರ್ಥಿವೇತನದ ಯೋಜನೆಯನ್ನು ಮತ್ತೊಮ್ಮೆ ಪರಿಷ್ಕರಿಸಿ ಸೇನೆ, ಅರೆಸೇನಾಪಡೆ ಮತ್ತು ರೈಲ್ವೆ ರಕ್ಷಣಾ ದಳದ ಹುತಾತ್ಮ ಯೋಧರ ಅಥವಾ ನಿವೃತ್ತಿ ಯೋಧರ ಮಕ್ಕಳು ಮತ್ತು ವಿಧವೆಯರ ವಿದ್ಯಾಭ್ಯಾಸಕ್ಕಾಗಿ ರಾಷ್ಟ್ರೀಯ ರಕ್ಷಣಾ ನಿಧಿಯಿಂದ ಪ್ರಧಾನಮಂತ್ರಿಯವರ ವಿದ್ಯಾರ್ಥಿವೇತನದ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ವೇತನ ನೀಡಲಾಗುತ್ತಿದ್ದ ಹಣವನ್ನು ಹೆಚ್ಚಳ ಮಾಡಿದ್ದಾರೆ. ಬಾಲಕರಿಗೆ ಪ್ರತಿತಿಂಗಳು ನೀಡುತ್ತಿದ್ದ 2000 ರೂ ಬದಲಾಗಿ 2500ರೂ ಹಾಗೂ ಬಾಲಕಿಯರಿಗೆ 2250 ರಿಂದ 3,000 ರೂ ಗೆ ಹೆಚ್ಚಿಸಲು ತೀರ್ಮಾನ ಮಾಡಿದ್ದಾರೆ. ಇಷ್ಟೇ ಅಲ್ಲದೆ ಇದೇ ಸಂದರ್ಭದಲ್ಲಿ ಇದೇ ಯೋಜನೆಯನ್ನು ಎಲ್ಲ ರಾಜ್ಯಗಳ ಪೊಲೀಸ್ ಸೇವೆಯಲ್ಲಿ ಸೇವೆ ಸಲ್ಲಿಸುತ್ತಿದ್ದ, ಉಗ್ರ ಅಥವಾ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಮಕ್ಕಳಿಗೆ ಹಾಗೂ ಕುಟುಂಬಕ್ಕೆ 500 ರೂ ವಿದ್ಯಾರ್ಥಿವೇತನ ನೀಡಲು ತೀರ್ಮಾನ ಮಾಡಲಾಗಿದೆ. ಒಟ್ಟಿನಲ್ಲಿ ಅಧಿಕಾರಕ್ಕೆ ಏರಿದ ತಕ್ಷಣ ನರೇಂದ್ರ ಮೋದಿ ಅವರು ಇದೀಗ ಕಾರ್ಯ ಆರಂಭಿಸಿದ್ದು, ಮೊದಲ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ.