ಹಳೆ ಮೈಸೂರು ಭಾಗವನ್ನು ಕೇಸರಿಮಯ ಮಾಡಲು ಚಾಣಕ್ಯ ರಣತಂತ್ರ ! ನಡುಗಿದ ಜೆಡಿಎಸ್- ಕಾಂಗ್ರೆಸ್ ಪಕ್ಷಗಳು

ಹಳೆ ಮೈಸೂರು ಭಾಗವನ್ನು ಕೇಸರಿಮಯ ಮಾಡಲು ಚಾಣಕ್ಯ ರಣತಂತ್ರ ! ನಡುಗಿದ ಜೆಡಿಎಸ್- ಕಾಂಗ್ರೆಸ್ ಪಕ್ಷಗಳು

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಈಗಾಗಲೇ ಬಹುತೇಕ ಕರ್ನಾಟಕ ರಾಜ್ಯ ಕೇಸರಿಮಯ ವಾಗಿದೆ. ಕರ್ನಾಟಕ ರಾಜ್ಯದಲ್ಲಿ ಇರುವ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ 25 ಸ್ಥಾನಗಳನ್ನು ಗೆದ್ದು ಬಿಜೆಪಿ ಪಕ್ಷವು ಬೀಗಿದೆ. ಅದರಲ್ಲಿಯೂ ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡಿನ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಪಕ್ಷವು ನರೇಂದ್ರ ಮೋದಿರವರ ಅಲೆಯಲ್ಲಿ ಬಹಳ ಸುಲಭವಾಗಿ ಗೆದ್ದು ಬೀಗಿದೆ. ಹೀಗಿರುವಾಗ ಬಿಜೆಪಿ ಪಕ್ಷಕ್ಕೆ ಕರ್ನಾಟಕದಲ್ಲಿ ಕಾಣ ಸಿಗುತ್ತಿರುವುದು ಕೇವಲ ಒಂದೇ ಒಂದು ಸವಾಲು, ಅದುವೇ ಹಳೆಯ ಮೈಸೂರು ಭಾಗ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಪ್ರಾಬಲ್ಯವಿರುವ ಈ ಭಾಗದಲ್ಲಿ ಬಿಜೆಪಿ ಪಕ್ಷವು ಕೊಂಚಮಟ್ಟಿಗೆ ಈಬಾರಿ ಮತಗಳನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದೆ.

ಅದರಲ್ಲಿಯೂ ಹಾಸನ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಅಲೆ ಅಷ್ಟಾಗಿ ಕಾಣುತ್ತಿಲ್ಲ. ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡಿದರೂ ಬಿಜೆಪಿ ಪಕ್ಷ ಗೆಲುವು ಕಾಣುವಲ್ಲಿ ವಿಫಲವಾಗಿದೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡಿದ ಮತದಾರ ಪ್ರಭುಗಳು ಪ್ರತಾಪ್ ಸಿಂಹ ರವರನ್ನು ಮೈಸೂರು ಕ್ಷೇತ್ರದಿಂದ ಗೆಲ್ಲಿಸಿದ್ದರೂ ಕೂಡ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಕಡೆ ಒಲವು ತೋರುತ್ತಿದ್ದಾರೆ.ಈ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಬಿಜೆಪಿ ಪಕ್ಷದ ಅಲೆ ಈ ಭಾಗದಲ್ಲಿ ಅಷ್ಟಾಗಿ ವರ್ಕೌಟ್ ಆಗುತ್ತಿಲ್ಲ. ಆದ ಕಾರಣ ಇದೀಗ ಹಳೆಯ ಮೈಸೂರು ಭಾಗವನ್ನು ಕೇಸರಿಮಯ ಮಾಡಲು ಬಿಜೆಪಿ ಪಕ್ಷದ ಚಾಣಕ್ಯ ಎಂದೇ ಖ್ಯಾತಿ ಪಡೆದುಕೊಂಡಿರುವ ಅಮಿತ್ ಶಾ ರವರು ಹೊಸ ಯೋಜನೆಯನ್ನು ರೂಪಿಸಿದ್ದಾರೆ.

ಇದೀಗ ಮಂಡ್ಯ ಜಿಲ್ಲೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳ ಮಗ ನಿಖಿಲ್ ಕುಮಾರಸ್ವಾಮಿ ರವರಿಗೆ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸಿರುವ ಸುಮಲತಾ ಅಂಬರೀಶ್ ರವರನ್ನು ಹಳೇ ಮೈಸೂರು ಭಾಗದಲ್ಲಿ ರಾಜ್ಯ ನಾಯಕಿಯಾಗಿ ಬೆಳೆಸುವ ಮಾಸ್ಟರ್ ಪ್ಲಾನ್ ಒಂದನ್ನು ಅಮಿತ್ ಶಾ ರವರು ರೂಪಿಸಿದ್ದಾರೆ. ಈ ಕ್ಷಣದ ಮಟ್ಟಿಗೆ ಸುಮಲತಾ ಅಂಬರೀಶ್ ರವರನ್ನು ಕೇಂದ್ರ ಸಂಪುಟದಲ್ಲಿ ಸಚಿವೆ ಸ್ಥಾನ ನೀಡಿ ತದನಂತರ ರಾಜ್ಯ ಘಟಕದಲ್ಲಿ ಪ್ರಮುಖ ಸ್ಥಾನವನ್ನು ನೀಡಿ ಸುಮಲತಾ ರವರಿಗೆ ಇರುವ ಪಂಚಭಾಷಾ ಐಡೆಂಟಿಟಿಯ ಮೂಲಕ ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಸಂಘಟನೆಯನ್ನು ಬಲಪಡಿಸುವ ದೂರದೃಷ್ಟಿಯನ್ನು ಅಮಿತ್ ಶಾ ರವರು ಹೊಂದಿದ್ದಾರೆ ಎನ್ನಲಾಗಿದೆ.

ಈ ಮೂಲಕ ಬಿಜೆಪಿ ಅಲೆ ಕಡಿಮೆ ಇರುವ ಸ್ಥಳಗಳಲ್ಲಿ ಸುಮಲತಾ ಅಂಬರೀಶ್ ರವರನ್ನು ಬಳಸಿಕೊಂಡು ಮತ್ತಷ್ಟು ವಿಧಾನಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಕರ್ನಾಟಕ ರಾಜ್ಯವನ್ನು ಮತ್ತಷ್ಟು ಕೇಸರಿಮಯ ಮಾಡಲು ಅಮಿತ್ ಶಾ ರವರು ಭಾರಿ ರಣತಂತ್ರ ದೊಂದಿಗೆ ಸಿದ್ಧರಾಗಿದ್ದಾರೆ ಎಂಬುದು ಇದೀಗ ಖಚಿತವಾಗಿದೆ. ಮೊದಲು ಸಚಿವೆಯಾಗಿ ಅನುಭವ ಪಡೆಯಲಿ ತದನಂತರ ಸಂಸತ್ತಿಗೆ ಹೊಂದಿಕೊಂಡ ಬಳಿಕ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಿ ರಾಜ್ಯದಲ್ಲಿಯೂ ಪ್ರಮುಖ ಸ್ಥಾನಮಾನ ನೀಡಲು ನಿರ್ಧರಿಸಿರುವ ಮಾಹಿತಿ ಅಧಿಕೃತವಾಗಿ ಹೊರಬಿದ್ದರೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗುವುದು ಎಂದು ರಾಜಕೀಯ ಪಂಡಿತರು ಸಹ ಅಭಿಪ್ರಾಯಪಟ್ಟಿದ್ದಾರೆ.