ಮೋದಿ ಪ್ರಮಾಣವಚನಕ್ಕೆ ಡೇಟ್ ಮತ್ತು ಟೈಮ್ ಫಿಕ್ಸ್ ! ಮೋದಿ 2.0 ಕ್ಷಣಗಣನೆ ಆರಂಭ

ಮೋದಿ ಪ್ರಮಾಣವಚನಕ್ಕೆ ಡೇಟ್ ಮತ್ತು ಟೈಮ್ ಫಿಕ್ಸ್ ! ಮೋದಿ 2.0 ಕ್ಷಣಗಣನೆ ಆರಂಭ

ಈ ಬಾರಿ ನರೇಂದ್ರ ವರ್ಚಸ್ಸು ಚುನಾವಣೆಯಲ್ಲಿ ಭರ್ಜರಿಯಾಗಿ ಬಿಜೆಪಿ ಪಕ್ಷಕ್ಕೆ ಗೆಲುವು ತಂದುಕೊಟ್ಟಿದೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಕೋಟ್ಯಂತರ ಜನರು ಆಶೀರ್ವಾದ ಮಾಡಿದ್ದಾರೆ. ಇನ್ನು ಈ ಚೌಕಿದಾರ್ ಮತ್ತೊಮ್ಮೆ ದೇಶವನ್ನು ಕಾಯಲಿದ್ದಾನೆ ಎಂದು ಅಧಿಕಾರದ ಗದ್ದುಗೆ ಏರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ನರೇಂದ್ರ ಮೋದಿ ರವರ ಪ್ರಮಾಣವಚನಕ್ಕಾಗಿ ಇಡೀ ದೇಶದ ಜನರು ಕಾದು ಕುಳಿತಿದ್ದಾರೆ. ಬಲಾಢ್ಯ ರಾಷ್ಟ್ರಗಳ ನಾಯಕರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬರುವ ಸಾಧ್ಯತೆಗಳು ಹೆಚ್ಚಾಗಿದ್ದು, ಹಲವಾರು ಊಹಾಪೋಹಗಳ ಜೊತೆಗೆ ರಷ್ಯಾ ಅಧ್ಯಕ್ಷ ಹಾಗೂ ಇಸ್ರೇಲ್ ಅಧ್ಯಕ್ಷರು ಬರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಷ್ಟೇ ಅಲ್ಲದೆ ವಿಶ್ವದ ದೊಡ್ಡಣ್ಣ ಅಮೆರಿಕ ದೇಶದ ಅಧ್ಯಕ್ಷರ ಟ್ರಂಪ್ ರವರು ಸಹ ಬರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದೀಗ ದೇಶವೇ ಕಾಯುತ್ತಿರುವ ನರೇಂದ್ರ ಮೋದಿರವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಅಧಿಕೃತ ದಿನಾಂಕ ಹಾಗೂ ಸಮಯ ಹೊರಬಿದ್ದಿದ್ದು ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಬಾರಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವ ಎನ್ಡಿಎ ಮೈತ್ರಿಕೂಟದ ಸಂಸದೀಯ ನಾಯಕನಾಗಿ ಅವಿರೋಧವಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ಅವರು ಇದೇ ತಿಂಗಳ 30 ನೇ ತಾರೀಖಿನಂದು ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭ ನಡೆಯಲಿದ್ದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರಮಾಣವಚನ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಅದೇ ದಿನ ಸಂಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬರಲಿದೆ ಎಂಬ ಅಧಿಕೃತ ಮಾಹಿತಿ ಇದೀಗ ಹೊರಬಿದ್ದಿದೆ. ದೇಶ-ವಿದೇಶಗಳ ಗಣ್ಯರು ಭಾಗಿಯಾಗಲಿರುವ ಈ ಸಮಾರಂಭಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿವೆ.