ಒಂದು ವೇಳೆ ಹೀಗೆ ನಡೆದಲ್ಲಿ ಇನ್ನೂ 25 ವರ್ಷ ಮೋದಿಯೇ ಪ್ರಧಾನಿ !!

ಒಂದು ವೇಳೆ ಹೀಗೆ ನಡೆದಲ್ಲಿ ಇನ್ನೂ 25 ವರ್ಷ ಮೋದಿಯೇ ಪ್ರಧಾನಿ !!

ಇದೀಗ ಭಾರತ ದೇಶದಲ್ಲಿ ಬಿಜೆಪಿ ಪಕ್ಷವು ಐತಿಹಾಸಿಕ ಗೆಲುವನ್ನು ದಾಖಲಿಸಿದೆ. ಕನಿಷ್ಠ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಬೇಕಾದ ಸೀಟುಗಳ ಸಂಖ್ಯೆಯನ್ನು ಸಹ ಯಾವುದೇ ಪಕ್ಷಕ್ಕೂ ಬಿಟ್ಟುಕೊಡದೆ ಬಿಜೆಪಿ ಪಕ್ಷವು 300ರ ಗಡಿ ದಾಟಿ, ತನ್ನ ಮೈತ್ರಿಕೂಟದ ಬೆಂಬಲದೊಂದಿಗೆ 349 ಸೀಟುಗಳನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡು ಉಳಿದ ನೂರಾರು ಪಕ್ಷಗಳಿಗೆ ಖಡಕ್ ಸಂದೇಶವನ್ನು ರವಾನೆ ಮಾಡಿದ್ದಾಗಿದೆ. ಎಷ್ಟೋ ಪ್ರಾದೇಶಿಕ ಪಕ್ಷಗಳು ನರೇಂದ್ರ ಮೋದಿರವರ ಅಲೆಯಲ್ಲಿ ಕೊಚ್ಚಿಕೊಂಡು ಹೋಗಿವೆ, ಇನ್ನು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ 13 ರಾಜ್ಯಗಳಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಖಾತೆ ತೆರೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.

ಪರಿಸ್ಥಿತಿ ಹೀಗಿರುವಾಗ ಕಳೆದ 5 ವರ್ಷಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವ ನರೇಂದ್ರಮೋದಿ ರವರು, ಅಕ್ಕಪಕ್ಕದ ಬದ್ಧ ಶತ್ರು ರಾಷ್ಟ್ರಗಳಾಗಿರುವ ಪಾಕಿಸ್ತಾನ ಹಾಗೂ ಚೀನಾ ದೇಶಗಳಿಗೆ ತಕ್ಕ ಉತ್ತರವನ್ನು ಎಲ್ಲಾ ವಿಚಾರಗಳಲ್ಲೂ ನೀಡಿದ್ದಾರೆ. ಅದರಲ್ಲಿಯೂ ಪುಲ್ವಾಮಾ ದಾಳಿಯಾದಾಗ ಇಡೀ ವಿಶ್ವವೇ ಭಾರತದ ಬೆಂಬಲಕ್ಕೆ ನಿಂತಿತ್ತು. ಚೀನಾ ದೇಶವನ್ನು ಹೊರತುಪಡಿಸಿ ಉಳಿದೆಲ್ಲ ಬಲಾಢ್ಯ ರಾಷ್ಟ್ರಗಳು ಭಾರತದ ಬೆಂಬಲಕ್ಕೆ ನಿಂತು ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದ್ದರು. ಭಾರತ ಪ್ರತಿಕಾರ ತೀರಿಸಿಕೊಂಡ ರೀತಿ ನೋಡಿ ಶತ್ರು ರಾಷ್ಟ್ರಗಳು ನಡುಗಿದ್ದವು. ಇನ್ನೂ ಡೋಕ್ಲಾಮ್ ವಿವಾದದಲ್ಲಿ ಚೀನಾ ದೇಶಕ್ಕೂ ಸಹ ಖಡಕ್ ಸಂದೇಶ ರವಾನಿಸಿ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ ನರೇಂದ್ರ ಮೋದಿ ರವರು ದೇಶದ ಭದ್ರತೆಯ ಹಾಗೂ ಗೌರವದ ವಿಷಯದಲ್ಲಿ ಇಲ್ಲಿಯವರೆಗೂ ರಾಜಿಯಾಗಿಲ್ಲ.

ಇನ್ನು ಎಲ್ಲಾ ಜಾತಿಯ ಹಾಗೂ ಧರ್ಮದ ಬಡವರಿಗೆ ಹಲವಾರು ಯೋಜನೆಗಳನ್ನು ಘೋಷಿಸಿ, ಮಧ್ಯಮ ವರ್ಗದವರಿಗೂ ಸಹ ನೆರವಾಗುವಂತಹ ಹಲವಾರು ರೀತಿಯ ದಿಟ್ಟ ಕ್ರಮಗಳನ್ನು ತೆಗೆದುಕೊಂಡು, ಬಡತನ ನಿರ್ಮೂಲನೆ ಮಾಡುವತ್ತಾ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಈಗಾಗಲೇ ವೈದ್ಯಕೀಯ ಕ್ಷೇತ್ರದಲ್ಲಿಯೂ ಸಹ ಕೇವಲ ಎರಡು ರೂಪಾಯಿಗೆ ಇನ್ಶೂರೆನ್ಸ್, ಉಚಿತವಾಗಿ 5 ಲಕ್ಷದವರೆಗೂ ಚಿಕಿತ್ಸೆ ಹಾಗೂ ಶುಗರ್, ಕ್ಯಾನ್ಸರ್ ಇತ್ಯಾದಿ ಮಾರಕ ರೋಗಗಳ ಔಷಧಿಗಳನ್ನು ಕಡಿಮೆ ದರದಲ್ಲಿ ಜನೌಷದ ಕೇಂದ್ರದ ಮೂಲಕ ಜನರಿಗೆ ತಲುಪಿಸುವಂತಹ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.

ಇನ್ನು ಸೇನೆಯ ವಿಚಾರಕ್ಕೆ ಬಂದರೆ ಈಗಾಗಲೇ ಹಲವಾರು ರಕ್ಷಣಾ ಒಪ್ಪಂದಗಳ ಮೂಲಕ ಸೇನೆಗೆ ಅತ್ಯಾಧುನಿಕ ಆಯುಧ ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ಕೇಂದ್ರ ಸರ್ಕಾರವು, ಬಿಸಿಲಲ್ಲಿ ಕಾಯುವ ಸಾಮಾನ್ಯ ಯೋಧನಿಗೂ ಸಹ ಶುದ್ಧ ಕುಡಿಯುವ ನೀರು, ಎಸಿ, ಫ್ರಿಡ್ಜ್ ನಂತಹ ಅತ್ಯಾಧುನಿಕ ಸವಲತ್ತುಗಳನ್ನು ಒದಗಿಸುತ್ತಿದೆ. ಹೀಗಿರುವಾಗ ನರೇಂದ್ರ ಮೋದಿ ಅವರನ್ನು ಕಳೆದು ಕೊಳ್ಳಲು ಯಾವ ಜನತೆಯು ತಯಾರಾಗುವುದಿಲ್ಲ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ನರೇಂದ್ರ ಮೋದಿ ಅವರು ಇದೇ ರೀತಿಯ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡು ತಮ್ಮ ಕಾರ್ಯ ಯೋಜನೆಗಳನ್ನು ಜನರಿಗೆ ತಲುಪಿಸಿದ್ದಲ್ಲಿ ನರೇಂದ್ರ ಮೋದಿ ರವರಿಗೆ ಇನ್ನು ಇಪ್ಪತ್ತೈದು ವರ್ಷಗಳ ಕಾಲ ಸೋಲು ಕಾಣಲು ಸಾಧ್ಯವೇ ಇಲ್ಲ ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಿಸುತ್ತಿದ್ದಾರೆ. ಈ ರಾಜಕೀಯ ಪಂಡಿತರ ಲೆಕ್ಕಾಚಾರ ಗಳಿಗೆ ಹಾಗೂ ಅಭಿಪ್ರಾಯಗಳಿಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.