ಮಧ್ಯಪ್ರದೇಶದಲ್ಲಿ ಆಟ ಆರಂಭಿಸಿದ ಚಾಣಕ್ಯ- ಮತ್ತೊಮ್ಮೆ ಬಿಜೆಪಿ ಸರ್ಕಾರ??

ಮಧ್ಯಪ್ರದೇಶದಲ್ಲಿ ಆಟ ಆರಂಭಿಸಿದ ಚಾಣಕ್ಯ- ಮತ್ತೊಮ್ಮೆ ಬಿಜೆಪಿ ಸರ್ಕಾರ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಧ್ಯಪ್ರದೇಶ ರಾಜ್ಯದಲ್ಲಿ ಶಿವರಾಜ್ ಸಿಂಗ್ ಚೌಹಾನ್ ರವರ ನೇತೃತ್ವದಲ್ಲಿ ಬಿಜೆಪಿ ಪಕ್ಷವು ಸತತ 15 ವರ್ಷಗಳ ಕಾಲ ಆಡಳಿತವನ್ನು ನಡೆಸಿತ್ತು. ಆಡಳಿತ ವಿರೋಧಿ ಅಲೆ ಹಾಗೂ ರೈತರಿಗೆ ಸಾಲ ಮನ್ನಾ ಎಂಬ 2 ಅಂಶಗಳಿಂದ ಬಿಜೆಪಿ ಪಕ್ಷವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರವನ್ನು ಕಳೆದುಕೊಂಡಿತ್ತು. ಅತಂತ್ರ ಸೃಷ್ಟಿಸಿದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಎಸ್ಪಿ ಹಾಗೂ ಬಿಎಸ್ಪಿ ಪಕ್ಷಗಳ ಜೊತೆ ಮೈತ್ರಿಯನ್ನು ಮಾಡಿಕೊಂಡು ಅಧಿಕಾರದ ಗದ್ದುಗೆ ಏರಿತ್ತು. ಹಲವಾರು ರಾಜಕೀಯ ಬೆಳವಣಿಗೆಗಳ ನಂತರ ಕಮಲ್ ನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತವನ್ನು ಆರಂಭಿಸಿತ್ತು.

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ಶಿವರಾಜ್ ಸಿಂಗ್ ಚೌಹಾನ್ ರವರ ನಿಜವಾದ ಜೀವನ ಹೊರಬಿದ್ದಿತ್ತು. ತನಗಾಗಿ ಒಂದು ಸ್ವಂತ ಮನೆಯನ್ನು ಮಾಡಿಕೊಳ್ಳದೆ ಈಗ 1bhk ಮನೆಯನ್ನು ಬಾಡಿಗೆ ತೆಗೆದುಕೊಂಡು ಜೀವನ ಸಾಗಿಸುತ್ತಿರುವ ಶಿವರಾಜ್ ಸಿಂಗ್ ಚೌಹಾನ್ ಅವರನ್ನು ಕಂಡು ಹಿಡಿದ ದೇಶ ಬೆರಗಾಗಿತ್ತು. ಯಾವುದೇ ಸರ್ಕಾರಿ ಸವಲತ್ತುಗಳು ಹಾಗೂ ಭದ್ರತೆ ಬೇಡ ಎಂದು ಶಿವರಾಜ್ ಸಿಂಗ್ ಚೌಹಾನ್ ರವರು ಪತ್ರ ಬರೆದು ಎಲ್ಲರ ಹುಬ್ಬೇರಿಸಿದ್ದರು. ಮನೆ ಖಾಲಿ ಮಾಡುವಾಗ ತಮ್ಮ ವಸ್ತುಗಳನ್ನು ತಾವೇ ತಮ್ಮ ಬಳಿ ಇದ್ದ ಸ್ಕೂಟರ್ ಒಂದರಲ್ಲಿ ಸಾಗಿಸಿ, ಹದಿನೈದು ವರ್ಷಗಳ ಅಧಿಕಾರಾವಧಿಯಲ್ಲಿ ಒಂದು ಕಾರನ್ನು ಸಹ ಕೊಂಡಿರದೆ ಸಾಮಾನ್ಯರಂತೆ ಬಾಡಿಗೆ ಮನೆಗೆ ತೆರಳಿ ಇಡೀ ದೇಶದಲ್ಲಿ ಮನೆಮಾತಾಗಿದ್ದರು. ಹಲವು ಬಾರಿ ಸಾಮಾನ್ಯರಂತೆ ರೈಲಿನಲ್ಲಿ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸಿ ಪತ್ರಕರ್ತರು ಪ್ರಶ್ನೆ ಮಾಡಿದಾಗ, ನಾನು ಕ್ರಮಿಸುವ ದೂರ ಕಡಿಮೆ ಆದ ಕಾರಣದಿಂದ ಸಾಮಾನ್ಯ ಭೋಗಿ ಸಾಕು ಇದರಿಂದ ಹಣವೂ ಸಹ ಉಳಿಸಬಹುದು ಎಂದು ಹೇಳಿಕೆ ನೀಡಿದ್ದರು.

ಈ ಎಲ್ಲಾ ವಿದ್ಯಮಾನಗಳಿಗೆ ಪ್ರತಿಕ್ರಿಯಿಸಿದ್ದ ನೆಟ್ಟಿಗರು ಇಂತಹ ಮುಖ್ಯಮಂತ್ರಿಯನ್ನು ಕಳೆದುಕೊಂಡ ಮಧ್ಯ ಪ್ರದೇಶದ ಜನರು ನಿಜವಾಗಿಯೂ ದುರಾದೃಷ್ಟವಂತರು ಎಂದು ಅಭಿಪ್ರಾಯಪಟ್ಟಿದ್ದರು. ಇತ್ತ ಕಾಂಗ್ರೆಸ್ ಪಕ್ಷವು ಸಾಲ ಮನ್ನಾ ಮಾಡುತ್ತೇನೆ ಎಂದು ಅಧಿಕಾರದ ಗದ್ದುಗೆ ಏರಿ, ಸಾಮಾಜಿಕ ಜಾಲತಾಣಗಳಲ್ಲಿ ಸಾಲ ಮನ್ನಾ ಮಾಡಿದ್ದೇವೆ ಎಂದು ರಾಹುಲ್ ಗಾಂಧಿ ಅವರು ಹೇಳಿಕೆ ನೀಡಿದರೂ ಸಹ ಯಾವೊಬ್ಬ ರೈತರ ಸಾಲ ಮನ್ನಾ ಆಗಿರಲಿಲ್ಲ. ಅಷ್ಟು ಸಾಲದು ಎಂಬಂತೆ ಇಲ್ಲದ ರೈತರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭಾರಿ ದೊಡ್ಡ ಹಗರಣವನ್ನು ಮಾಡಿ ದೇಶದೆಲ್ಲೆಡೆ ಸದ್ದು ಮಾಡಿದ್ದರು. ಇದರಿಂದ ಜನರಲ್ಲಿ ಮತ್ತಷ್ಟು ಆಕ್ರೋಶ ಭುಗಿಲೆದ್ದಿತು.

ಆದ ಕಾರಣದಿಂದಲೇ ಬಹುಶಹ ಕಾಂಗ್ರೆಸ್ ಪಕ್ಷವನ್ನು ಮಧ್ಯಪ್ರದೇಶದಲ್ಲಿ ಜನರು ದೂರ ಇಟ್ಟಂತೆ ಕಾಣುತ್ತಿದೆ. ಯಾಕೆಂದರೆ ಕಳೆದ ರಾತ್ರಿ ಹೊರಬಿದ್ದ ಮಹಾ ಚುನಾವಣೋತ್ತರ ಸಮೀಕ್ಷೆ ಯಲ್ಲಿ ಬಿಜೆಪಿ ಪಕ್ಷವು ಸರಿಸುಮಾರು 28ರಲ್ಲಿ 26 ಕ್ಷೇತ್ರಗಳಲ್ಲಿ ಗೆಲ್ಲುವುದು ಖಚಿತವಾಗಿದೆ. ಅಧಿಕಾರದಲ್ಲಿ ಇರುವ ಪಕ್ಷ ಕೇವಲ ಎರಡು ಸೀಟು ಗಳಿಸುವುದು ಅನುಮಾನವಾಗಿ ರುವ ಸಂದರ್ಭದಲ್ಲಿ , ಇದೀಗ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ. ಇದೀಗ ಮಧ್ಯಪ್ರದೇಶದಲ್ಲಿ ಅಮಿತ್ ಶಾ ರವರ ಆಟ ಆರಂಭವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ ಯಾಕೆ ಗೊತ್ತಾ?? ತಿಳಿಯಲು ಕೆಳಗಡೆ ಓದಿ.

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಮಧ್ಯಪ್ರದೇಶ ಬಿಜೆಪಿ ಪಕ್ಷವು ರಾಜ್ಯಪಾಲರಿಗೆ ಪತ್ರ ಬರೆದಿದೆ. ರಾಜ್ಯದಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ, ಈಗಾಗಲೇ ಹಲವಾರು ಸಮಸ್ಯೆಗಳು ಇವೆ. ಹೀಗಾಗಿ ವಿಧಾನಸಭಾ ವಿಶೇಷ ಅಧಿವೇಶನ ಕರೆಯುವಂತೆ ಮನವಿ ಮಾಡಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಹಾಗೂ ಈ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷವು ಬಹುಮತವನ್ನು ಸಾಬೀತು ಮಾಡಲಿ ಎಂದು ರಾಜ್ಯಪಾಲರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕೆಲವು ಮೂಲಗಳ ಪ್ರಕಾರ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಶಾಸಕರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ, ಹಾಗೂ ಬಿಜೆಪಿ ಅಥವಾ ಬೇರೊಂದು ಪಕ್ಷಕ್ಕೆ ವಲಸೆ ಹೋಗುವ ಸಾಧ್ಯತೆಗಳು ಹೆಚ್ಚಾಗಿದ್ದು ಆ ಕಾರಣ ಬಿಜೆಪಿ ಪಕ್ಷವು ಬಹುಮತ ಸಾಬೀತು ಪಡಿಸುವಂತೆ ಒತ್ತಾಯ ಮಾಡುತ್ತಿದೆ ಎಂದು ತಿಳಿದು ಬಂದಿದೆ.

ನಮಗೆ ಕುದುರೆ ವ್ಯಾಪಾರ ದಲ್ಲಿ ನಂಬಿಕೆ ಇಲ್ಲ ಎಂದು ಹೇಳಿಕೆ ನೀಡಿರುವ ಬಿಜೆಪಿ ಪಕ್ಷದ ಗೋಪಾಲ್ ಭಾರ್ಗವ ರವರು, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ತಾನಾಗಿಯೇ ಉರುಳಲಿದೆ. ಸರ್ಕಾರಕ್ಕೆ ಅದರ ಕಾಲ ಸನ್ನಿಹಿತವಾಗಿದೆ. ಹಾಗಾಗಿ ಸರ್ಕಾರ ಉರುಳುತ್ತದೆ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ, ನನ್ನ ವೈಯಯುಕ್ತ ಅಭಿಪ್ರಾಯವೂ ಸಹ ಅದೇ ಆಗಿದೆ. ಆದ ಕಾರಣದಿಂದ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಾಬೀತು ಪಡಿಸುವಂತೆ ತಾಕೀತು ಮಾಡಿ ಎಂದು ರಾಜ್ಯಪಾಲರಲ್ಲಿ ಮನವಿ ಮಾಡಿಕೊಂಡಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಈ ಎಲ್ಲ ಮಹತ್ವದ ಬೆಳವಣಿಗೆಗಳಿಂದ ಇದ್ದಕ್ಕಿದ್ದ ಹಾಗೆ ಬಿಜೆಪಿ ಪಕ್ಷವು ಯಾವ ಕಾರಣಕ್ಕೆ ಬಹುಮತ ಸಾಬೀತು ಮಾಡುವಂತೆ ಕೇಳಿಕೊಂಡಿದೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ರಾಜಕೀಯ ಪಂಡಿತರ ಪ್ರಕಾರ ಕಾಂಗ್ರೆಸ್ ಪಕ್ಷದ ಶಾಸಕರ ಬೆಂಬಲವಿಲ್ಲದೆ ಬಿಜೆಪಿ ಪಕ್ಷವು ಈ ನಡೆ ಇಡುವುದು ಬಹಳ ಕಷ್ಟ ಯಾಕೆಂದರೆ ಒಮ್ಮೆ ಬಹುಮತ ಸಾಬೀತು ಮಾಡಿದರೆ ಕನಿಷ್ಠ ಆರು ತಿಂಗಳವರೆಗೂ ವಿರೋಧ ಪಕ್ಷ ಮತ್ತೊಮ್ಮೆ ಬಹುಮತ ಸಾಬೀತು ಪಡಿಸುವಂತೆ ಕೇಳುವಂತಿಲ್ಲ. ಫಲಿತಾಂಶಕ್ಕೂ ಮುನ್ನ ವೇ ಈ ರೀತಿಯ ಬೆಳವಣಿಗೆ ನಡೆಸಲು ಖಚಿತ ಮಾಹಿತಿ ಇರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಒಂದು ವೇಳೆ ಕಾಂಗ್ರೆಸ್ ಪಕ್ಷವು ಬಹುಮತ ಸಾಬೀತು ಮಾಡಲು ವಿಫಲವಾದಲ್ಲಿ ಮತ್ತೊಮ್ಮೆ ಸಾಮಾನ್ಯರಲ್ಲಿ ಅಸಾಮಾನ್ಯ ರಾಗಿರುವ ಶಿವರಾಜ್ ಸಿಂಗ್ ಚೌಹಾನ್ ರವರು ಮಧ್ಯಪ್ರದೇಶ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ.