ಬಿಗ್ ನ್ಯೂಸ್: ಸುಮಲತಾ ರವರಿಗೆ ಭರ್ಜರಿ ಗೆಲುವು ಖಚಿತ ! ಸಮೀಕ್ಷೆ ಹೇಳುವುದೇನು ಗೊತ್ತಾ??

ಬಿಗ್ ನ್ಯೂಸ್: ಸುಮಲತಾ ರವರಿಗೆ ಭರ್ಜರಿ ಗೆಲುವು ಖಚಿತ ! ಸಮೀಕ್ಷೆ ಹೇಳುವುದೇನು ಗೊತ್ತಾ??

ವಿಶೇಷ ಸೂಚನೆ: ಇದು ಬಕೆಟ್ ಮಾಧ್ಯಮಗಳು ನಡೆಸಿದ ಸಮೀಕ್ಷೆಯಲ್ಲ, ಬದಲಾಗಿ ದೇಶದ ಪ್ರತಿಷ್ಠಿತ ಸಂಸ್ಥೆಗಳು ನಡೆಸಿದ ಆಧಾರದ ಮೇಲೆ ಈ ಲೇಖನ ಬರೆಯಲಾಗಿದೆ. ದಯವಿಟ್ಟು ಬಕೆಟ್ ಮಾದ್ಯಮಗಳ ಫಲಿತಾಂಶವನ್ನು ಕಾಮೆಂಟ್ ಬಾಕ್ಸ್ ನಲ್ಲಿ ಅಥವಾ ಅದನ್ನು ಬಳಸಿಕೊಂಡು ನಮ್ಮ ಲೇಖನದ ಜೊತೆ ಹೋಲಿಕೆಮಾಡಬೇಡಿ. ನಾವು ಯಾವುದೇ ಸಮೀಕ್ಷೆ ನಡೆಸಿಲ್ಲ, ದೇಶದ ಪ್ರತಿಷ್ಠಿತ ಸಂಸ್ಥೆಯಾದ ಎಬಿಪಿ ನ್ಯೂಸ್ ಹಾಗೂ ಸಿ ವೋಟರ್ ಸಂಸ್ಥೆಗಳು ಜಂಟಿಯಾಗಿ ನಡೆಸಿರುವ ಸಮೀಕ್ಷೆಯ ಫಲಿತಾಂಶದ ವರದಿಯ ಆಧಾರದ ಮೇಲೆ ಈ ಲೇಖನ ಬರೆಯಲಾಗಿದೆ.

ಕರ್ನಾಟಕದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಮಂಡ್ಯ ಜಿಲ್ಲೆಯ ಲೋಕಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಇದೀಗ ಬಯಲಾಗಿದೆ. ಮುಖ್ಯಮಂತ್ರಿಗಳ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಅಂಬರೀಶ್ ರವರ ಧರ್ಮಪತ್ನಿ ಸುಮಲತಾ ಅಂಬರೀಶ್ ರವರ ನಡುವೆ ನೇರ ಹಣಾಹಣಿ ಯನ್ನು ನಿರೀಕ್ಷಿಸಿರುವ ಕ್ಷೇತ್ರ ಇಡೀ ದೇಶದಲ್ಲಿಯೇ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಇನ್ನು ಬಿಜೆಪಿ, ರೈತರ ಸಂಘ ಹಾಗೂ ಬಂಡಾಯ ಕಾಂಗ್ರೆಸ್ ಕಾರ್ಯಕರ್ತರ ಬೆಂಬಲದೊಂದಿಗೆ ಗೆಲುವಿನ ಮುನ್ಸೂಚನೆ ನೀಡಿದ್ದ ಸುಮಲತಾ ರವರು ನಿಖಿಲ್ ಕುಮಾರಸ್ವಾಮಿ ರವರನ್ನು ಮೊದಲ ಚುನಾವಣೆಯಲ್ಲಿಯೇ ಸೋಲಿಸುತ್ತಾರೆಯೇ ಎಂಬ ಪ್ರಶ್ನೆಗೆ ಎಬಿಪಿ ನ್ಯೂಸ್- ಸಿ ವೋಟರ್ ಚುನಾವಣೋತ್ತರ ಸಮೀಕ್ಷೆ ಉತ್ತರ ನೀಡಿದೆ.

ಹಲವಾರು ಬಾರಿ ಗುಪ್ತಚರ ಇಲಾಖೆಯನ್ನು ಬಳಸಿಕೊಂಡು ಕುಮಾರಸ್ವಾಮಿ ರವರು ನಡೆಸಿದ ಎಲ್ಲಾ ಸಮೀಕ್ಷೆಗಳು ಇದೀಗ ಸತ್ಯ ವಾಗುವಂತೆ ಎಬಿಪಿ ನ್ಯೂಸ್ – ಸಿ ವೋಟರ್ ಚುನಾವಣೋತ್ತರ ಸಮೀಕ್ಷೆ ಫಲಿತಾಂಶವನ್ನು ಹೊರಹಾಕಿವೆ. ಈ ಮೂಲಕ ಕುಮಾರಸ್ವಾಮಿ ರವರಿಗೆ ಹೊಸ ತಲೆ ನೋವು ಶುರುವಾಗಿದ್ದು ತಮ್ಮ ಪುತ್ರನ ಭವಿಷ್ಯದ ಚುನಾವಣೆ ಹಾಗೂ ಮೊದಲ ಚುನಾವಣೆಯಲ್ಲಿ ಸುಮಲತಾ ರವರ ವಿರುದ್ಧ ಸೋಲನ್ನು ಕಾಣುವ ಮುನ್ಸೂಚನೆಗಳು ಕಾಣಿಸುತ್ತಿವೆ. ಹೌದು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ರವರು ಗೆಲ್ಲುವುದು ಬಹುತೇಕ ಖಚಿತ ವಾದಂತೆ ಕಾಣುತ್ತಿದೆ.

ದೇಶದ ಪ್ರತಿಷ್ಠಿತ ಸಂಸ್ಥೆಗಳಾದ ಸಿ ವೋಟರ್- ಎಬಿಪಿ ನ್ಯೂಸ್ ನಡೆಸಿದ ಸಮೀಕ್ಷೆಗಳ ಪ್ರಕಾರ ನಿಖಿಲ್ ಕುಮಾರಸ್ವಾಮಿ ರವರ ಸೋಲು ಖಚಿತ. ಇನ್ನುಳಿದ ಸಂಸ್ಥೆಗಳ ಸಮೀಕ್ಷೆಗಳಲ್ಲಿ ಯೂ ಪಕ್ಷೇತರ ಅಭ್ಯರ್ಥಿಯೊಬ್ಬರು ಕರ್ನಾಟಕ ರಾಜ್ಯದಿಂದ ಗೆದ್ದು ಸಂಸತ್ ಗೆ ಆಯ್ಕೆಯಾಗುತ್ತಾರೆ ಎಂಬ ಫಲಿತಾಂಶ ಬಯಲಾಗಿದ್ದು, ಕರ್ನಾಟಕದಲ್ಲಿ ತೀವ್ರ ಪೈಪೋಟಿ ನೀಡಿರುವ ಏಕೈಕ ಪಕ್ಷೇತರ ಅಭ್ಯರ್ಥಿ ಎಂದರೆ ಅದು ಸುಮಲತಾ ಮಾತ್ರ ಆದ ಕಾರಣ ಎಲ್ಲಾ ಸಮೀಕ್ಷೆಗಳಲ್ಲಿಯೂ ಸುಮಲತಾ ರವರ ಗೆಲುವು ಹೊರ ಬಿದ್ದಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಈ ಫಲಿತಾಂಶ ಮಂಡ್ಯ ಜಿಲ್ಲೆಯ ಕಾವನ್ನು ಮತ್ತಷ್ಟು ಏರಿಸಿದ್ದು ಖಚಿತ ಫಲಿತಾಂಶಕ್ಕೆ ಇನ್ನು ಕೆಲವು ದಿನಗಳ ಕಾಲ ಕಾಯಲೇಬೇಕು. ಚುನಾವಣಾ ಫಲಿತಾಂಶ ಇದೇ ತಿಂಗಳ 23ನೇ ತಾರೀಖಿನಂದು ಪ್ರಕಟಣೆ ಗೊಳ್ಳಲಿದೆ, ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡುವ ಮೂಲಕ ಫಾಲೋ ಮಾಡಿ.