ಜಾದವ್ ಪುರ್ ಲೋಕಸಭಾ ಅಭ್ಯರ್ಥಿಗೆ ಎಲ್ಲರೂ ಫಿದಾ- ಅತ್ಯಂತ ಸುಂದರ ರಾಜಕಾರಿಣಿ ಎಂದ ನೆಟ್ಟಿಗರು

ಜಾದವ್ ಪುರ್ ಲೋಕಸಭಾ ಅಭ್ಯರ್ಥಿಗೆ ಎಲ್ಲರೂ ಫಿದಾ- ಅತ್ಯಂತ ಸುಂದರ ರಾಜಕಾರಿಣಿ ಎಂದ ನೆಟ್ಟಿಗರು

ದೇಶದ ಭವಿಷ್ಯದ ಚುನಾವಣೆ ಎಂದೇ ಖ್ಯಾತಿ ಪಡೆದು ಕೊಂಡಿರುವ 2019 ರ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಮಾತ್ರ ಬಾಕಿ ಉಳಿದಿದೆ. ಇಡೀ ವಿಶ್ವವೇ ಇಂದು ಭಾರತದ ಲೋಕಸಭಾ ಚುನಾವಣಾ ಫಲಿತಾಂಶಕ್ಕಾಗಿ ಕಾದು ನೋಡು ತ್ತಿದೆ. ಭಾರತದ ಹಲವಾರು ಮಿತ್ರರಾಷ್ಟ್ರಗಳು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಕಾದು ಕುಳಿತಿದ್ದಾರೆ. ಆದರೆ ಚೀನಾ ಹಾಗೂ ಪಾಕಿಸ್ತಾನ ದೇಶಗಳು ಮಾತ್ರ ನರೇಂದ್ರ ಮೋದಿ ಅವರನ್ನು ಬಿಟ್ಟು ಬೇರೊಬ್ಬರು ಪ್ರಧಾನಿಯಾಗಲಿ ಎಂದು ಆಶಿಸುತ್ತೀರುವ ವಿಷಯ ಪತ್ರಿಕಾ ಮಾಧ್ಯಮಗಳಿಂದ ತಿಳಿದುಬಂದಿದೆ. ಒಟ್ಟಿನಲ್ಲಿ ಅದೇನೇ ಆಗಲಿ ಇನ್ನು ಕೇವಲ ಕೆಲವೇ ಕೆಲವು ದಿನಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಕೊನೆಯ ಹಂತದ ಚುನಾವಣೆಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದ್ದು ಇದನ್ನೆಲ್ಲ ಬಿಟ್ಟು ಇದ್ದಕ್ಕಿದ್ದ ಹಾಗೆ ಮತ್ತೊಂದು ಸುದ್ದಿ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.

ಪಕ್ಷಿಮ ಬಂಗಾಳ ದಿಂದ ಟಿಎಂಸಿ ಪಕ್ಷದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಇದೀಗ ದೇಶದೆಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿರುವುದು ಈ ಕ್ಷೇತ್ರ ಹೈ ವೋಲ್ಟೇಜ್ ಕ್ಷೇತ್ರ ಎಂದಲ್ಲ ಬದಲಾಗಿ ಕೇವಲ ಸ್ಪರ್ಧಿಸುತ್ತಿರುವ ಅಭ್ಯರ್ಥಿಯ ಸೌಂದರ್ಯ ರಾಶಿಯನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಈ ಅಭ್ಯರ್ಥಿಗೆ ಸೌಂದರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆಗಳು ವ್ಯಕ್ತವಾಗಿದ್ದು, ದೇಶದಲ್ಲಿಯೇ ಅತ್ಯಂತ ಸುಂದರ ರಾಜಕಾರಿಣಿ ಎಂದು ಈಗಾಗಲೇ ಈ ಅಭ್ಯರ್ಥಿಗೆ ಪಟ್ಟ ನೀಡಿದ್ದಾರೆ. ಅಷ್ಟಕ್ಕೂ ಅಭ್ಯರ್ಥಿ ಯಾರು ಗೊತ್ತಾ ಹಾಗೂ ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಪಶ್ಚಿಮ ಬಂಗಾಳದ ಜಾದವ್ ಪುರ ಎಂಬ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಟಿಎಂಸಿ ಅಭ್ಯರ್ಥಿ ಮೂವತ್ತರ ಹರೆಯದ ಮಿಮಿ ಚಕ್ರಬಾರ್ತಿ ರವರು ಇದೀಗ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದ್ದಾರೆ. ಹೌದು ಇತ್ತೀಚೆಗಷ್ಟೇ ರಾಜಕೀಯ ಆರಂಭಿಸಿದ ಮಿಮಿ ಚಕ್ರಬಾರ್ತಿ ರವರನ್ನು ಕಳೆದ ಕೆಲವು ದಿನಗಳ ಹಿಂದೆ ಮಮತಾ ಬ್ಯಾನರ್ಜಿ ರವರು ಅಭ್ಯರ್ಥಿಯಾಗಿ ಘೋಷಿಸಿ ಎಲ್ಲರ ಹುಬ್ಬೇರಿಸಿದ್ದರು. ಹೆಸರು ಘೋಷಿಸಿದ ತಕ್ಷಣ ಬಂಗಾಳದಲ್ಲಿ ಕೊಂಚ ಸದ್ದು ಮಾಡಿದ್ದ ಈ ಅಭ್ಯರ್ಥಿ ಇದ್ದಕ್ಕಿದ್ದ ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಲು ಆರಂಭಿಸಿದ್ದಾರೆ ಅದಕ್ಕೆ ಕಾರಣ ಈಕೆಯ ಸೌಂದರ್ಯ ರಾಶಿ.

ಮೂಲತಹ ಸಿನಿಮಾ ರಂಗದಲ್ಲಿ ಪ್ರಸಿದ್ಧಿ ಪಡೆದು ಕೊಂಡಿರುವ ಈ ನಟಿ ಇದೀಗ ರಾಜಕೀಯದಲ್ಲೂ ಮಿಂಚಲು ಸಿದ್ಧರಾಗಿದ್ದು, ಕಳೆದ ಬಾರಿ ಟಿಎಂಸಿ ಪಕ್ಷ ಜಯ ಗಳಿಸಿದ್ದ ಜಾದವ್ ಪುರ ಕ್ಷೇತ್ರದ ಅಭ್ಯರ್ಥಿಯಾಗಿ ಈ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ಟಿಎಂಸಿ ಪಕ್ಷ ತೊರೆದು ಕೊಂಡು ಬಿಜೆಪಿ ಪಕ್ಷ ಸೇರಿ ಕೊಂಡಿದ್ದ ಅನುಪಮ್ ಹಜ್ರಾ ರವರು ಮಿಮಿ ಚಕ್ರಬಾರ್ತಿ ರವರಿಗೆ ಕಠಿಣ ಪೈಪೋಟಿಯನ್ನು ನೀಡಿ, ಜಾದವ್ ಪುರ ಕ್ಷೇತ್ರದಲ್ಲಿ ಕೇಸರಿ ಬಾವುಟವನ್ನು ಆರಿಸಲು ಸಿದ್ಧನಿದ್ದೇನೆ ಎಂದು ತೊಡೆ ತಟ್ಟಿದ್ದಾರೆ.