ತನ್ನ ಬ್ಯಾಟಿಂಗ್ ಕ್ರಮಾಂಕ ದ ಬಗ್ಗೆ ತುಟಿ ಬಿಚ್ಚಿದ ರಾಹುಲ್

ತನ್ನ ಬ್ಯಾಟಿಂಗ್ ಕ್ರಮಾಂಕ ದ ಬಗ್ಗೆ ತುಟಿ ಬಿಚ್ಚಿದ ರಾಹುಲ್

ಐಸಿಸಿ ಏಕದಿನ ವಿಶ್ವಕಪ್ ಗೆ ಇಡೀ ವಿಶ್ವವೇ ಕಾದು ಕುಳಿತಿದೆ. ಈಗಾಗಲೇ ಪ್ರತಿಯೊಂದು ತಂಡಗಳು ತಮ್ಮದೇ ಆದ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಅದೇ ರೀತಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತ ತಂಡವೂ ಸಹ ತನ್ನದೇ ಆದ ಸಿದ್ಧತೆಗಳೊಂದಿಗೆ ಆಂಗ್ಲರ ನಾಡಲ್ಲಿ ಮಿಂಚಲು ಸಿದ್ಧವಾಗುತ್ತಿದೆ. ಭಾರತಕ್ಕೆ ಕಳೆದ ಕೆಲವು ವರ್ಷಗಳಿಂದ ತಲೆನೋವಾಗಿರುವ ನಾಲ್ಕನೇ ಕ್ರಮಾಂಕದ ಬಗ್ಗೆ ಇದೀಗ ವ್ಯಾಪಕ ಚರ್ಚೆ ನಡೆಯುತ್ತಿದೆ. ಹೀಗಿರುವಾಗ ಭಾರತ ತಂಡಕ್ಕೆ ಕೊನೆ ಕ್ಷಣದಲ್ಲಿ ಆಯ್ಕೆಯಾಗಿರುವ ಕೆ ಎಲ್ ರಾಹುಲ್ ರವರು ತಮ್ಮ ಬ್ಯಾಟಿಂಗ್ ಕ್ರಮಾಂಕದ ಕುರಿತು ಮಾತನಾಡಿದ್ದಾರೆ. ಮೀಸಲು ಆರಂಭಿಕನಾಗಿ ಆಯ್ಕೆಯಾಗಿರುವ ರಾಹುಲ್ ರವರು ಪ್ರತಿಯೊಂದು ಸವಾಲಿಗೂ ತಾವು ಸಿದ್ಧರಿರುವುದಾಗಿ ಹೇಳಿಕೊಂಡಿದ್ದಾರೆ.

ನಾವು ಭಾರತ ತಂಡದ ಭಾಗವಾಗಿದ್ದು ತಂಡ ಯಾವುದೇ ನಿರ್ಧಾರ ಕೈಗೊಂಡರು ಅದಕ್ಕೆ ನಾನು ಬದ್ಧವಾಗಿರುತ್ತದೆ. ಕಳೆದ ಕೆಲವು ತಿಂಗಳುಗಳಿಂದ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದೇನೆ, ಐಪಿಎಲ್ ಸಹ ವಿಶ್ವಕಪ್ ಗೆ ತಯಾರಿಗೆ ಉತ್ತಮ ವೇದಿಕೆಯಾಗಿತ್ತು. ಒಂದು ವೇಳೆ ತಂಡ ನಾಲ್ಕನೇ ಕ್ರಮಾಂಕದಲ್ಲಿ ಆಡಲು ವೇದಿಕೆಯನ್ನು ಕಲ್ಪಿಸಿದರೆ ಅಲ್ಲಿಯೂ ಸಹ ಮಿಂಚಲು ಸಿದ್ಧನಾಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ವಿರಾಟ್ ಕೊಹ್ಲಿ ರವರು ಯಾವ ರೂಪದ ರಣತಂತ್ರ ದೊಂದಿಗೆ ಆಂಗ್ಲರ ನಾಡಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಕನ್ನಡಿಗ ರಾಹುಲ್ ರವರ ಮೇಲೆ ವಿಶೇಷ ಕಾಳಜಿಯನ್ನು ಹೊಂದಿರುವ ವಿರಾಟ್ ಕೊಹ್ಲಿ ರವರು ನಾಲ್ಕನೇ ಕ್ರಮಾಂಕದಲ್ಲಿ ಆಡಲು ಅವಕಾಶ ನೀಡುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.