ಯೋಧ ಔರಂಗಜೇಬ್ ನ ಆತ್ಮಕ್ಕೆ ಕೊನೆಗೂ ಸಿಕ್ಕಿತು ಶಾಂತಿ

ಯೋಧ ಔರಂಗಜೇಬ್ ನ ಆತ್ಮಕ್ಕೆ ಕೊನೆಗೂ ಸಿಕ್ಕಿತು ಶಾಂತಿ

ಕಳೆದ ಕೆಲವು ತಿಂಗಳುಗಳ ಹಿಂದೆ ಭಾರತ ದೇಶವನ್ನು ಹಲವಾರು ವರ್ಷಗಳ ಕಾಲ ತನ್ನ ಪ್ರಾಣವನ್ನು ಪಣಕ್ಕಿಟ್ಟು ಗಡಿಯಲ್ಲಿ ರಕ್ಷಿಸಿದ  ಔರಂಗಜೇಬ್  ಎಂಬ ಯೋಧನನ್ನು ಉಗ್ರಗಾಮಿಗಳು ಕುತಂತ್ರ ನೀತಿಯನ್ನು ಅನುಸರಿಸಿ ಇಹಲೋಕ ತ್ಯಜಿಸು ವಂತೆ ಮಾಡಿದ್ದರು. ಯೋಧನು ರಜೆಗೆ ತೆರಳಿದ ಸಮಯವನ್ನು ಕಾದು ಕುಳಿತಿದ್ದ ಉಗ್ರಗಾಮಿಗಳು ಯೋಧನ ಕೈಯಲ್ಲಿ ಯಾವುದೇ ಆಯುಧ ಇಲ್ಲದ ಸಮಯದಲ್ಲಿ ಏಕಾಏಕಿ ದಾಳಿ ಮಾಡಿ ಔರಂಗಜೇಬ್  ರವರನ್ನು ಕೊಂದು ಹಾಕಿದ್ದರು. ಇಡೀ ದೇಶದೆಲ್ಲೇಡೇ ಉಗ್ರಗಾಮಿಗಳ ಈ ಕೃತ್ಯಕ್ಕೆ ಬಾರೀ ಆಕ್ರೋಶ ಕೇಳಿ ಬಂದಿತ್ತು. ಅದಾದ ನಂತರ ಭಾರತ ಸೇನೆಯು ಸಹ ಹಲವಾರು ಉಗ್ರರನ್ನು ಕೊಂದು ಸೇಡು ತೀರಿಸಿಕೊಂಡಿತ್ತು, ಆದರೆ ಅಂದು ಸಿಗದ ಶಾಂತಿ ಇಂದು ಔರಂಗಜೇಬ್ ರವರ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಯಾಕೆ ಗೊತ್ತಾ ತಿಳಿಯಲು ಕೆಳಗಡೆ ಓದಿ!

ಅಂದು ಭಾರತ ಸೇನೆ ಪ್ರತೀಕಾರ ತೀರಿಸಿಕೊಂಡಿದ್ದು ನಿಜ ಆದರೆ ಔರಂಗಜೇಬ್ ರವರನ್ನು ಹತ್ಯೆ ಮಾಡಿದ ಉಗ್ರಗಾಮಿಗಳನ್ನು ಅಂದು ನರಕಕ್ಕೆ ಕಳುಹಿಸಲು ಸಾಧ್ಯವಾಗಿರಲಿಲ್ಲ. ಮಹತ್ವದ ಬೆಳವಣಿಗೆಯಲ್ಲಿ ಇಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಪ್ರದೇಶದಲ್ಲಿ ಭದ್ರತಾಪಡೆಗಳು ಎನ್ ಕೌಂಟರ್ ನಡೆಸಿ ಔರಂಗಜೇಬ್ ರವರ ಹತ್ಯೆಯಲ್ಲಿ ಭಾಗಿಯಾಗಿದ್ದ ಓರ್ವ ಹಿಜ್ಬುಲ್ ಉಗ್ರ ಸೇರಿದಂತೆ ಮತ್ತಿಬ್ಬರು ಉಗ್ರರನ್ನು ನರಕಕ್ಕೆ ಕಳುಹಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ಹತರಾದವರನ್ನು ಶೌಕತ್ ದಾರ್, ಇರ್ಫಾನ್ ವಾರ್ ಮತ್ತು ಮುಜಾಫರ್ ಶೇಖ್ ಎಂದು ಗುರುತಿಸಲಾಗಿದ್ದು, ಇದರಲ್ಲಿ ಶೌಕತ್ ದಾರ್ ಎಂಬ ಉಗ್ರ ಔರಂಗಜೇಬ್ ಹತ್ಯೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.