ಧರ್ಮಸ್ಥಳ ಪ್ರವಾಸ ಮುಂದೂಡುವಂತೆ ಮನವಿ ಮಾಡಿದ ವೀರೇಂದ್ರ ಹೆಗಡೆ- ಯಾಕೆ ಗೊತ್ತಾ??

ಧರ್ಮಸ್ಥಳ ಪ್ರವಾಸ ಮುಂದೂಡುವಂತೆ ಮನವಿ ಮಾಡಿದ ವೀರೇಂದ್ರ ಹೆಗಡೆ- ಯಾಕೆ ಗೊತ್ತಾ??

ಇಡೀ ವಿಶ್ವದಲ್ಲಿಯೇ ಖ್ಯಾತಿಯನ್ನು ಪಡೆದುಕೊಂಡಿರುವ ಧರ್ಮಸ್ಥಳ ಮಂಜುನಾಥನ ಸನ್ನಿಧಿಯ ಪ್ರವಾಸವನ್ನು ನೀವು ಆಯೋಜನೆ ಮಾಡಿಕೊಂಡಿದ್ದರೆ ದಯವಿಟ್ಟು ಕೆಲವು ದಿನಗಳ ಕಾಲ ಅದನ್ನು ಮುಂದೂಡಿ, ಹೀಗೆ ಮನವಿ ಮಾಡಿಕೊಂಡವರು ಬೇರ್ಯಾರು ಅಲ್ಲ, ನಮ್ಮೆಲ್ಲರ ನೆಚ್ಚಿನ ಅನ್ನದಾತ ಹಾಗೂ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ರವರು. ಹೌದು ಈ ಬಗ್ಗೆ ಡಾಕ್ಟರ್ ವೀರೇಂದ್ರ ಹೆಗಡೆರವರು ಹೊಸ ಪ್ರಕಟಣೆಯನ್ನು ಹೊರಡಿಸಿ ಭಕ್ತಾದಿಗಳಿಗೆ ಕೆಲವು ದಿನಗಳ ಕಾಲ ತಮ್ಮ ಪ್ರವಾಸದ ಆಲೋಚನೆಯನ್ನು ಮುಂದೂಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಯಾಕೆ ಗೊತ್ತಾ ಸಂಪೂರ್ಣ ವಿವರಕ್ಕಾಗಿ ಕೆಳಗಡೆ ಓದಿ!

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ, ಯಾವ ರಾಜಕಾರಣಿಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಬದಲಾಗಿ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರ ದಿನೇದಿನೇ ಹೆಚ್ಚಾಗುತ್ತಿದೆ, ಇಡೀ ದಕ್ಷಿಣ ಕನ್ನಡ ಜಿಲ್ಲೆ ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ತಾಯಿ ನೇತ್ರಾವತಿ ನದಿಯ ನೀರಿನ ಹರಿವು ಸಹ ತೀವ್ರ ಕಡಿಮೆಯಾಗಿದೆ, ಇನ್ನು ಧರ್ಮಸ್ಥಳಕ್ಕೆ ಭಕ್ತಾದಿಗಳು ಹಾಗೂ ಪ್ರವಾಸಿಗರ ಆಗಮನದಿಂದ ಅವರ ಉಪಯೋಗಕ್ಕೆ ಹೆಚ್ಚಿನ ಪ್ರಮಾಣದ ನೀರು ಬೇಕಾಗುತ್ತದೆ. ಇದರಿಂದಾಗಿ ಧರ್ಮಸ್ಥಳದಲ್ಲಿ ದಿನದಿಂದ ದಿನಕ್ಕೆ ನೀರಿನ ಅಭಾವ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಹೊಸ ಪ್ರಕಟಣೆಯನ್ನು ಹೊರಡಿಸಿರುವ ವೀರೇಂದ್ರ ಹೆಗಡೆ ರವರು ದಯವಿಟ್ಟು ಭಕ್ತಾದಿಗಳು ಹಾಗೂ ಪ್ರವಾಸಿಗರು ತಮ್ಮ ಪ್ರವಾಸವನ್ನು ಕೆಲವು ದಿನಗಳ ಕಾಲ ಮುಂದೂಡುವಂತೆ ಮನವಿ ಮಾಡಿಕೊಂಡಿದ್ದಾರೆ. ದಯವಿಟ್ಟು ಈ ಮಾಹಿತಿಯನ್ನು ಈ ಕೂಡಲೇ ಎಲ್ಲರಿಗೂ ಶೇರ್ ಮಾಡಿ ತಲುಪಿಸಿ.