ಜೆಡಿಎಸ್ ಮುಖಂಡನ ಮೇಲೆ ಎಫ್ ಐಆರ್ ದಾಖಲು- ರೈತರ ಪಕ್ಷದ ನಾಯಕ ಸಿಕ್ಕಿಬಿದ್ದಿದ್ದು ಯಾಕೆ ಗೊತ್ತಾ??

ಜೆಡಿಎಸ್ ಪಕ್ಷದ ಹಲವಾರು ನಾಯಕರು ನಮ್ಮದು ರೈತರ ಪಕ್ಷ ಸದಾ ರೈತರ ಪರವಾಗಿ ನಿಲ್ಲುತ್ತೇವೆ ಎಂದು ಹಲವಾರು ಭಾಷಣಗಳಲ್ಲಿ ಹೇಳಿದ್ದನ್ನು ನಾವು ಕೇಳಿದ್ದೇವೆ. ಇಡೀ ರಾಜ್ಯದ ಸಂಪೂರ್ಣ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಸಾಲ ಮನ್ನಾ ಇದುವರೆಗೂ ನಡೆದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹಂತಹಂತವಾಗಿ ಸಾಲಮನ್ನಾ ಮಾಡಲಾಗುತ್ತಿದೆ ಎಂಬ ಸುದ್ದಿಗಳು ಆಗಾಗ ಕೇಳಿಬರುತ್ತವೆ ಆದರೆ ಇದುವರೆಗೂ ಅದ್ಯಾವುದಕ್ಕೂ ಯಾವುದೇ ರಾಜಕೀಯ ನಾಯಕರಾಗಲಿ ಅಥವಾ ರೈತರಾಗಲಿ ಸ್ಪಷ್ಟ ಮಾಹಿತಿಯನ್ನು ಹೊರಹಾಕಿಲ್ಲ. ಪರಿಸ್ಥಿತಿ ಹೀಗಿರುವಾಗ ಇಲ್ಲಿ ರೈತರ ಪಕ್ಷದ ಮುಖಂಡ ಸಿಕ್ಕಿಬಿದ್ದಿದ್ದು ರೈತನಿಗೆ ಬಾರಿ ವಂಚನೆ ನಡೆಸಿದ ಆರೋಪದ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.

ಅಕ್ರಮವಾಗಿ ಆಸ್ತಿ ಲಪಟಾಯಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರಾಗಿರುವ ಸತೀಶ್ ರವರ ವಿರುದ್ಧ ಎಫ್ ಐಆರ್ ದಾಖಲಿಸಲು ಬೆಂಗಳೂರಿನ ನ್ಯಾಯಾಲಯ ಆದೇಶ ನೀಡಿದೆ. ರೈತರ ಭೂಮಿಯನ್ನು ಕಬಳಿಸಿದ ಆರೋಪದ ಮೇಲೆ ಪ್ರಕರಣ  ದಾಖಲಾಗಿದ್ದು, ಅಪ್ಪಣ್ಣ ಎಂಬ ರೈತರ ಹೆಸರಲ್ಲಿ ನಿವೇಶನವನ್ನು ಅವರಿಗೆ ತಿಳಿಯದ ಹಾಗೆ ಸಹಿ ಪಡೆದು ಮೋಹನ್ ಡೆವೆಲಪರ್ಸ್  ಎಂಬ ಸಂಸ್ಥೆಗೆ ಮಾರಿದ್ದಾರೆ. ಅಷ್ಟೇ ಅಲ್ಲದೆ ಅಪ್ಪಣ್ಣರವರ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು ಹಣವನ್ನು ಗುಳುಂ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬ್ಯಾಂಕ್ ಆಫ್ ಬರೋಡಾದಲ್ಲಿ ಅಕೌಂಟ್ ತೆರೆದ ಸತೀಶ್ 1.7 ಕೋಟಿ ಹಣಕ್ಕೆ ಪಂಗನಾಮ ಹಾಕಿದ್ದಾರೆ, ಈ ಬಗ್ಗೆ ಆವಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಖಾಸಗಿ ವಕೀಲರ ಮೂಲಕ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಸತೀಶ್ ವಿರುದ್ಧ FIR ದಾಖಲಿಸಲು ಆದೇಶ ನೀಡಿದೆ

Facebook Comments

Post Author: Ravi Yadav