ಬಡವರೇ ಮರೆತುಬಿಡಿ ವಿದ್ಯಾಭ್ಯಾಸವನ್ನು !!ಪೋಷಕರು, ವಿದ್ಯಾರ್ಥಿಗಳಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ-

ಬಡವರೇ ಮರೆತುಬಿಡಿ ವಿದ್ಯಾಭ್ಯಾಸವನ್ನು !!ಪೋಷಕರು, ವಿದ್ಯಾರ್ಥಿಗಳಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ-

ಕುಮಾರಸ್ವಾಮಿ ಅವರು ಇತ್ತೀಚೆಗೆ ಅಭಿವೃದ್ಧಿಯ ಕಾರ್ಯಗಳನ್ನು ಮರೆತಂತೆ ಕಾಣುತ್ತಿದೆ. ತಾನು ಬಡವರ ಪರವಾದ ಸರ್ಕಾರ ನಡೆಸುತ್ತಿದ್ದೇನೆ ಹಾಗೂ ರೈತರ ಬೆಂಬಲಕ್ಕೆ ನಮ್ಮ ಸರ್ಕಾರ ಸದಾ ಇದೆ ಎಂದು ಹೇಳಿಕೆ ನೀಡುವ ಕುಮಾರಸ್ವಾಮಿ ರವರು ಸಾಲ ಮನ್ನಾ ಯೋಜನೆ ಯನ್ನು ಇದುವರೆಗೂ ಸಂಪೂರ್ಣವಾಗಿ ಜಾರಿಗೆ ತಂದಿಲ್ಲ. ಇನ್ನು ಬಡವರ ಪರ ಸರ್ಕಾರ ಎನ್ನುವ ಕುಮಾರಸ್ವಾಮಿ ರವರು ಈಗಾಗಲೇ ಹಲವಾರು ಬಾರಿ ವಿವಿಧ ರೀತಿಯಲ್ಲಿ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಿ, ಬಡವರ ವಿರುದ್ಧದ ಸರ್ಕಾರ ಎಂದು ಸಾಬೀತು ಮಾಡಿದ್ದಾರೆ ಎಂಬ ಆರೋಪವಿದೆ. ಪರಿಸ್ಥಿತಿ ಹೀಗಿರುವಾಗ ಕುಮಾರಸ್ವಾಮಿ ಅವರು ಮತ್ತೊಮ್ಮೆ ಬೆಲೆ ಏರಿಕೆಯ ಮೋರೆ ಹೋಗಿದ್ದಾರೆ. ಈ ಬಾರಿ ವಿದ್ಯಾರ್ಥಿ ಹಾಗೂ ಪೋಷಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ಕೆಲವು ದಿನಗಳ ಹಿಂದೆ ಖಾಸಗಿ ಶಾಲೆಗಳಲ್ಲಿ ಬಡ ಮಕ್ಕಳಿಗೆ ಒಂದು ಲಕ್ಷಕ್ಕೂ ಹೆಚ್ಚು ಇದ್ದ ಮೀಸಲಾತಿ ಸೀಟುಗಳನ್ನು ಕೇವಲ ಇಡೀ ಕರ್ನಾಟಕ ರಾಜ್ಯದಲ್ಲಿ 500 ಸೀಟುಗಳಿಗೆ ಸೀಮಿತ ಮಾಡಿ ಬಡ ವಿದ್ಯಾರ್ಥಿಗಳಿಗೆ ಶಾಕ್ ನೀಡಿದ ಕುಮಾರಸ್ವಾಮಿ ಅವರು ಇದೀಗ ಶಾಲೆ ಆರಂಭಕ್ಕೂ ಮುನ್ನ ಶಾಲಾ ಪಠ್ಯಕ್ರಮಗಳ ಬೆಲೆಗಳನ್ನು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಶೇಕಡಾ 22ರಷ್ಟು ಬೆಲೆ ಹೆಚ್ಚಿಸಿದ್ದಾರೆ. ಪಠ್ಯ ಕ್ರಮಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಸರ್ಕಾರದ ಕ್ರಮವನ್ನು ಕ್ಯಾಮ್ ಕಾರ್ಯದರ್ಶಿಗಳು ವಿರೋಧ ವ್ಯಕ್ತಪಡಿಸಿದ್ದು, ಏಕಾಏಕಿ ಶೇಕಡಾ 22ರಷ್ಟು ಬೆಲೆ ಹೆಚ್ಚಳ ಮಾಡಿರುವುದರಿಂದ ಮತ್ತೊಮ್ಮೆ ಪೋಷಕರ ಬಳಿ ಹಣ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಬಡವರ ಪರ ಸರ್ಕಾರ ಎನ್ನುವ ಕುಮಾರಸ್ವಾಮಿ ಅವರು ಕೇವಲ ಎರಡು ನಿರ್ಧಾರಗಳ ಮೂಲಕ ಹಲವಾರು ಬಡ ವಿದ್ಯಾರ್ಥಿಗಳ ಕನಸನ್ನು ನುಚ್ಚುನೂರು ಮಾಡಿದ್ದಾರೆ ಎಂದು ಸಾಮಾನ್ಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.