ಮಂಡ್ಯ ಚುನಾವಣೆ- ಹೊನ್ನಾದೇವಿ ಅಮ್ಮನವರ ಹೂ ಭವಿಷ್ಯ ಯಾರ ಪರವಾಗಿ ಗೊತ್ತಾ??

ರಾಜ್ಯದಲ್ಲಿ ಭಾರೀ ಕುತೂಹಲವನ್ನು ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರಬೀಳುವ ಮುನ್ನವೇ ಈಗಾಗಲೇ ಸೋಲು ಗೆಲುವಿನ ಲೆಕ್ಕಾಚಾರ ಗಳು ಆರಂಭವಾಗಿವೆ. ಗುಪ್ತಚರ ಇಲಾಖೆಯ ಮಾಹಿತಿಯ ಪ್ರಕಾರ ಸುಮಲತಾ ರವರು ಗೆಲುವು ದಾಖಲಿಸುತ್ತಾರೆ ಎನ್ನಲಾಗುತ್ತಿದ್ದು, ಆದರೆ ಮತ ಪ್ರಭು ಯಾರ ಪರವಾಗಿ ಇದ್ದಾನೆ ಎಂಬುದು ಖಚಿತವಾಗಿ ಯಾವ ಇಲಾಖೆಯ ಕೈಯಲ್ಲೂ ಹೇಳಲು ಸಾಧ್ಯವಾಗುತ್ತಿಲ್ಲ. ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ರವರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿರುವ ಕಾರಣ ದಿನೇದಿನೇ ಚುನಾವಣಾ ಫಲಿತಾಂಶದ ರಂಗು ಏರುತ್ತಿದೆ. ಹೀಗಿರುವಾಗ ಮಂಡ್ಯ ಜಿಲ್ಲೆಯ ಹೊನ್ನಾದೇವಿ ತಾಯಿಯ ಹೂವಿನ ಭವಿಷ್ಯದ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.

ಮಂಡ್ಯ ಜಿಲ್ಲೆಯ ಜನರ ಪ್ರಕಾರ ಇದುವರೆಗೂ ಹೊನ್ನಾದೇವಿ ತಾಯಿಯ ಹೂ ಭವಿಷ್ಯ ಸುಳ್ಳಾಗಿಲ್ಲ. ಇದೇ ಕಾರಣಕ್ಕಾಗಿ ಸುಮಲತಾ ಹಾಗೂ ನಿಖಿಲ್ ರವರ ನಡುವೆ ಯಾರು ಗೆಲ್ಲುತ್ತಾರೆ ಎಂದು ಸ್ಥಳೀಯ ಜನರು ತಿಳಿದುಕೊಳ್ಳಲು ನಿರ್ಧಾರ ಮಾಡಿ ದೇವಸ್ಥಾನದ ಮೊರೆ ಹೋದಾಗ, ಉನ್ನ ದೇವಿ ತಾಯಿಯ ದೇವಸ್ಥಾನದ ಅರ್ಚಕ ದೇವರ ಮುಂದೆ ಫಲಿತಾಂಶದ ಬಗ್ಗೆ ಕೋರಿ ಕೊಳ್ಳುತ್ತಿರುವ ವಿಡಿಯೋ ಹೊರಬಿದ್ದಿದೆ. ಒಂದು ವೇಳೆ ಸುಮಲತಾ ಅಂಬರೀಶ್ ರವರು ಗೆಲ್ಲುವುದಾದರೆ ಬಲಕ್ಕೆ ಹೂ ಕೊಡು ತಾಯಿ, ಎಂದು ಬೇಡಿಕೊಂಡಾಗ ದೇವರ ಮೂರ್ತಿಯ ಬಲಗೈ ಭಾಗದಲ್ಲಿದ್ದ ಕೆಳಗೆ ಬಿದ್ದಿದೆ. ಇದನ್ನು ಕಂಡ ಮಂಡ್ಯ ಜನರು ಗೆಲುವಿನ ಸೂಚನೆ ಇದಾಗಿದ್ದು ಸುಮಲತಾ ಅಂಬರೀಶ್ ರವರು ಗೆದ್ದು ಬೀಗಲಿದ್ದಾರೆ ಎಂದು ರಾಜಕೀಯ ಚರ್ಚೆಗಳನ್ನು ಆರಂಭಿಸಿದ್ದಾರೆ.

Facebook Comments

Post Author: Ravi Yadav