ಯೋಗಿ ಆಶ್ವಾಸನೆ ನೋಡಿ ಬೆಚ್ಚಿಬಿದ್ದ ದೇಶದ್ರೋಹಿಗಳು- ಮಮತಾಗೆ ತಿರುಗೇಟು

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳ ಆಗಿರುವ ಮಮತಾ ಬ್ಯಾನರ್ಜಿ ರವರ ಭದ್ರಕೋಟೆ ಎನಿಸಿಕೊಂಡಿದ್ದ ಬಿಜೆಪಿ ಪಕ್ಷವು ಚೂರು ಚೂರು ಮಾಡುವ ಎಲ್ಲಾ ಸಾಧ್ಯತೆಗಳು ಕಾಣುತ್ತಿವೆ. ಈ ಹಿಂದೆ ಬಿಜೆಪಿ ಪಕ್ಷದ ಅಸ್ತಿತ್ವವೇ ಇಲ್ಲದ ರಾಜ್ಯದಲ್ಲಿ ಒಮ್ಮೆಲೆ ನರೇಂದ್ರ ಮೋದಿ ಅವರ ಅಲೆ ಜೋರಾಗಿ ಅಬ್ಬರಿಸಿದ ನಂತರ ಇಡೀ ಪಶ್ಚಿಮ ಬಂಗಾಳ ಕೇಸರಿಮಯವಾಗುತ್ತಾ ಸಾಗುತ್ತಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಮತ್ತಷ್ಟು ಪೂರಕ ಎಂಬಂತೆ ಮಮತಾ ಬ್ಯಾನರ್ಜಿ ಅವರು ಸಹ ನರೇಂದ್ರ ಮೋದಿ ಅವರ ಅಲೆಯನ್ನು ತಡೆಯಲು ಇನ್ನಿಲ್ಲದ ಕುತಂತ್ರ ರೀತಿಯ ಪ್ರಯತ್ನ ಗಳನ್ನು ನಡೆಸಿ, ದೇಶದ ಮುಂದೆ ಹಲವಾರು ಬಾರಿ ಮುಜುಗರಕ್ಕೆ ಒಳಗಾಗಿದ್ದಾರೆ.

ಪಕ್ಷಿಮ ಬಂಗಾಳ ದಲ್ಲಿ ನಡೆಯುತ್ತಿರುವ ಗೂಂಡಾಗಿರಿ ತಡೆಯಲು ಮಮತಾ ಬ್ಯಾನರ್ಜಿ ರವರ ಭದ್ರ ಕೋಟೆಯನ್ನು ನುಚ್ಚುನೂರು ಮಾಡಲು ಬಿಜೆಪಿ ಪಕ್ಷವು ತನ್ನ ಪಕ್ಷದ ಎಲ್ಲಾ ಅಸ್ತ್ರಗಳನ್ನು ಬಳಸಿ ಕೊಳ್ಳುತ್ತಿದೆ. ಅದೇ ರೀತಿ ಇಡೀ ದೇಶದಲ್ಲಿ ಯಾವ ರಾಜ್ಯದ ಮುಖ್ಯಮಂತ್ರಿಯೂ ಮಾಡದಂತಹ ಕಾರ್ಯಗಳನ್ನು ಕೇವಲ ಅಧಿಕಾರಕ್ಕೆ ಬಂದ ಕೆಲವೇ ಕೆಲವು ದಿನಗಳಲ್ಲಿ ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಸಾಧಿಸಿ ತೋರಿಸಿ ದೇಶದಲ್ಲಿ ಅತ್ಯುತ್ತಮ ಮುಖ್ಯಮಂತ್ರಿ ಎಂದು ಹೆಸರು ಪಡೆದುಕೊಂಡಿರುವ ಯೋಗಿ ಆದಿತ್ಯನಾಥ ರವರು ಸಹ ಮಮತಾ ಬ್ಯಾನರ್ಜಿ ರವರ ಕೋಟೆಗೆ ಲಗ್ಗೆ ಇಟ್ಟಿದ್ದಾರೆ.

ಮೊದಲಿನಿಂದಲೂ ದೇಶ ಹಾಗೂ ಸಂಸ್ಕೃತಿಯ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ ಯೋಗಿ ಆದಿತ್ಯನಾಥ ರವರು ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿದ್ದಾರೆ ಎನ್ನಲಾಗುತ್ತಿರುವ ದೇಶದ್ರೋಹಿಗಳಿಗೆ ಖಡಕ್ ಎಚ್ಚರಿಕೆ ಸಮೇತ ದೇಶ ಅಭಿಮಾನಿಗಳಿಗೆ ಬಹುದೊಡ್ಡ ಆಶ್ವಾಸನೆ ನೀಡಿದ್ದಾರೆ. ಒಂದು ವೇಳೆ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಉತ್ತರ ಪ್ರದೇಶದಲ್ಲಿ ನಡೆಸುತ್ತಿರುವ ದೇಶದ್ರೋಹಿಗಳ ಹಾಗೂ ಅಪರಾಧಿಗಳ ಎನ್ಕೌಂಟರ್ ಗಳ ಸಂಖ್ಯೆಯನ್ನು ಮೀರಿಸುವಂತಹ ಎನ್ ಕೌಂಟರ್ ಗಳನ್ನು ಪಕ್ಷಿಮ ಬಂಗಾಳದ ದೇಶದ್ರೋಹಿಗಳ ಮೇಲೆ ನಡೆಸಲಾಗುತ್ತದೆ, ಈ ಮೂಲಕ ಉತ್ತರ ಪ್ರದೇಶದಲ್ಲಿನ ಎನ್ಕೌಂಟರ್ ಗಳ ರೆಕಾರ್ಡ್ ಅನ್ನು ಬ್ರೇಕ್ ಮಾಡಲಾಗುತ್ತದೆ ಎಂದು ಆಶ್ವಾಸನೆ ನೀಡಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಪ್ರಚಾರ ಸಭೆಗೆ ಹೋದ ಯೋಗಿ ಆದಿತ್ಯನಾಥ ಅವರ ಹೆಲಿಕ್ಯಾಪ್ಟರ್ ಅನ್ನು ತಡೆದು ಸಭೆ ನಿಲ್ಲಿಸಲು ಪ್ರಯತ್ನ ಪಟ್ಟಿದ್ದ ಮಮತಾ ಬ್ಯಾನರ್ಜಿ ರವರಿಗೆ ಕಾರಿನ ಮೂಲಕ ತೆರಳಿ ಸರಿಯಾದ ತಿರುಗೇಟು ನೀಡಿದ್ದ ಯೋಗಿ ಆದಿತ್ಯನಾಥ್ ರವರು ಇಂದು ಮತ್ತೊಮ್ಮೆ ಪಕ್ಷಿಮ ಬಂಗಾಳ ದಲ್ಲಿ ಗರ್ಜಿಸಿದ್ದಾರೆ. ಒಟ್ಟಿನಲ್ಲಿ ದಿನೇದಿನೇ ಬಿಜೆಪಿ ಪಕ್ಷ ಹಾಗೂ ಮಮತಾ ಬ್ಯಾನರ್ಜಿ ರವರ ಪಕ್ಷದ ನಡುವೆ ನೇರ ಹಣಾಹಣಿ ನಡೆಯುತ್ತಿದ್ದು ಮತದಾರರು ಯಾವ ಪಕ್ಷಕ್ಕೆ ಒಲವು ತೋರಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

Facebook Comments

Post Author: Ravi Yadav