ತನ್ನ ನೆಚ್ಚಿನ ಐಪಿಎಲ್ 2019 ತಂಡ ಪ್ರಕಟಿಸಿದ ಡ್ಯಾಶಿಂಗ್ ಓಪನರ್- ಕೊಹ್ಲಿ ಧೋನಿಗೆ ಕೊಕ್

ವಿಶ್ವದಲ್ಲಿಯೇ ಅತಿ ಶ್ರೀಮಂತ ಲೀಗ್ ಹಾಗೂ ಅತಿ ಹೆಚ್ಚು ಫಾಲವರ್ಸ್ ಗಳನ್ನು ಹೊಂದಿರುವ ಐಪಿಎಲ್ 2019 ಇನ್ನೇನು ಮುಕ್ತಾಯಗೊಳ್ಳುವ ಅಂತಹ ಸಮಯ ಬಂದಿದೆ. ಪ್ರಶಸ್ತಿಗಾಗಿ ಚೆನ್ನೈ ಹಾಗೂ ಮುಂಬೈ ತಂಡಗಳು ಕಾದಾಟ ನಡೆಸಲು ಸಿದ್ಧವಾಗಿ ನಿಂತಿವೆ. ಎರಡು ತಂಡಗಳು ನಾಲ್ಕನೇ ಬಾರಿ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಳ್ಳಲು ಕಾತರದಿಂದ ಕಾಯುತ್ತಿವೆ. ಈ ಬಾರಿಯ ಐಪಿಎಲ್ ಅತ್ಯಂತ ರೋಚಕ ಕಾರಿ ಯಾಗಿ ಮುಕ್ತಾಯಗೊಳ್ಳುತ್ತಿದೆ. ಇದೀಗ ಭಾರತದ ಡ್ಯಾಶಿಂಗ್ ಓಪನರ್ ಎಂದೇ ಖ್ಯಾತಿ ಪಡೆದು ಕೊಂಡಿರುವ ವೀರೇಂದ್ರ ಸೆಹ್ವಾಗ್ ರವರು ಐಪಿಎಲ್ 2019 ರ ಕ್ವಾಲಿಫೈಯರ್ ನ ಎರಡನೇ ಪಂದ್ಯ ದವರೆಗಿನ ಪ್ರದರ್ಶನಗಳನ್ನು ಆಧರಿಸಿ ತಮ್ಮದೇ ಆದ ಅತ್ಯುತ್ತಮ ಹನ್ನೊಂದರ ಬಳಗವನ್ನು ಆಯ್ಕೆ ಮಾಡಿದ್ದಾರೆ. ನಿಯಮದಂತೆ 4 ವಿದೇಶಿ ಆಟಗಾರರನ್ನು ಆಯ್ಕೆ ಮಾಡಿ ತಮ್ಮ ತಂಡವನ್ನು ಪ್ರಕಟಣೆ ಗೊಳಿಸಿದ್ದಾರೆ. ವೀರೇಂದ್ರ ಸೆಹ್ವಾಗ್ ರವರ ತಂಡದ ವಿವರ ಹೀಗಿದೆ.

ತಂಡ: ಶಿಖರ್ ಧವನ್ (ಡಿಸಿಗೆ 521 ರನ್ಗಳು),ಜಾನಿ ಬೈರ್ಸ್ಟೊವ್ (ಎಸ್ಆರ್ಎಚ್ಗೆ 445 ರನ್ಗಳು),ಕೆಎಲ್ ರಾಹುಲ್ (ಕೆಎನ್ಐಪಿಗೆ 593 ರನ್ಗಳು),ಡೇವಿಡ್ ವಾರ್ನರ್ (ಕ್ಯಾಪ್ಟನ್) (ಎಸ್ಆರ್ಎಚ್ಗೆ 692 ರನ್ಗಳು),ರಿಷಬ್ ಪಂತ್ (ವಿಕೆಟ್ ಕೀಪರ್) (ಡಿಸಿಗೆ 488 ರನ್ಗಳು),ಆಂಡ್ರೆ ರಸ್ಸೆಲ್ (ಕೆಕೆಆರ್ಗಾಗಿ 510 ರನ್ಗಳು ಮತ್ತು 11 ವಿಕೆಟ್ಗಳು),ಹಾರ್ಡಿಕ್ ಪಾಂಡ್ಯ (ಎಂಐಗೆ 386 ರನ್ಗಳು ಮತ್ತು 14 ವಿಕೆಟ್ಗಳು),ಕಾಗಿಸೊ ರಬಾಡಾ (25 ವಿಕೆಟ್ಗೆ ವಿಕೆಟ್),ಜಾಸ್ಪ್ರಿತ್ ಬುಮ್ರಾಹ್ (17 ವಿಕೆಟ್ಗಳು MI ಗೆ ಇದೀಗ),ರಾಹುಲ್ ಚಹಾರ್ (12 ವಿಕೆಟ್ಗಳು MI),ಶ್ರೀಯಾಸ್ ಗೋಪಾಲ್ (ಆರ್ಆರ್ಗೆ 20 ವಿಕೆಟ್ಗಳು)

12 ನೇ ಆಟಗಾರ: ಇಮ್ರಾನ್ ತಾಹಿರ್ (24 ವಿಕೆಟ್ಗಳು CSK ಗಾಗಿ ಇಲ್ಲಿಯವರೆಗೆ)

Facebook Comments

Post Author: Ravi Yadav