ಕನ್ನಡಕ್ಕೆ ಎಂಟ್ರಿ ಕೊಟ್ಟ ಸಮಂತಾ-ರಾಮ್ ಚರಣ್ ಜೋಡಿ

ತೆಲುಗಿನಲ್ಲಿ ಈಗಾಗಲೇ ತಮ್ಮದೇ ಆದ ಛಾಪು ಮೂಡಿಸಿ ಬಾರಿ ಹಿಟ್ ಚಿತ್ರಗಳನ್ನು ನೀಡಿರುವ ತೆಲುಗು ಸ್ಟಾರ್ ರಾಮ್ ಚರಣ್ ತೇಜ ಹಾಗೂ ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ಸಮಂತರ್ ಅವರು ಇದೀಗ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ. ಸ್ಯಾಂಡಲ್ ವುಡ್ ಪ್ರವೇಶ ಎಂದಾಕ್ಷಣ ಇವರಿಬ್ಬರೂ ಕನ್ನಡ ಚಿತ್ರರಂಗದಲ್ಲಿ ಹೊಸ ಚಿತ್ರ ಮಾಡುತ್ತಾರೆ ಎಂದುಕೊಳ್ಳಬೇಡಿ, ಇದು ಹೊಸ ಸಿನಿಮಾ ಅಲ್ಲ ಆದರೆ ಇವರಿಬ್ಬರ ಅಭಿನಯದಲ್ಲಿ ತೆಲುಗಿನಲ್ಲಿ ದಾಖಲೆ ಪ್ರಮಾಣದಲ್ಲಿ ಕಲೆಕ್ಷನ್ ಮಾಡಿ, ದೊಡ್ಡ ಹಿಟ್ ನೀಡಿದ್ದ ತೆಲುಗು ಸಿನಿಮಾ ಇದೀಗ ಕನ್ನಡಕ್ಕೆ ಡಬ್ ಆಗಲಿದೆ. ಈ ವಿಷಯ ತಿಳಿದ ತಕ್ಷಣ ಹಲವಾರು ಅಭಿಮಾನಿಗಳು ಯೂಟ್ಯೂಬ್ ಸೇರಿದಂತೆ ಈ ಸಾಮಾಜಿಕ ಜಾಲತಾಣಗಳಲ್ಲಿ ಸಮಂತ ಹಾಗೂ ರಾಮ್ ಚರಣ್ ಜೋಡಿಗೆ ಕನ್ನಡ ಚಿತ್ರರಂಗಕ್ಕೆ ಸ್ವಾಗತ ಕೋರಿದ್ದಾರೆ.

ಹೌದು ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾ ರಂಗಸ್ಥಲಂ ಚಿತ್ರವು ಇದೀಗ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದೆ ಕಾರಣವಾಗಿ ಕನ್ನಡ ಭಾಷೆಯ ಮೊದಲ ಹಾಡನ್ನು ಈಗಾಗಲೇ ರಿಲೀಸ್ ಮಾಡಲಾಗಿದ್ದು, ಲಹರಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ರಂಗಸ್ಥಲಂ ಚಿತ್ರದ ಕನ್ನಡ ಭಾಷೆಯ ಮೊದಲ ಸಾಂಗ್ ಅಪ್ಲೋಡ್ ಆಗಿದೆ ಹಾಗೂ ಸಾಕಷ್ಟು ಜನರು ಈಗಾಗಲೇ ಅದನ್ನು ಮೆಚ್ಚಿಕೊಂಡಿದ್ದಾರೆ ಮತ್ತು ಈ ಹಾಡು ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ವಿಯೂಸ್ ಪಡೆದುಕೊಂಡಿದೆ. ಕನ್ನಡಕ್ಕೆ ಈ ಚಿತ್ರವನ್ನು ಡಬ್ ಮಾಡಿರುವುದನ್ನು ಅನೇಕ ಚಿತ್ರರಸಿಕರು ಸ್ವಾಗತ ಮಾಡಿದ್ದು ಸಿನಿಮಾ ರಿಲೀಸ್ ಗೆ ಕಾಯುತ್ತಿದ್ದೇವೆ ಎಂದು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಈ ಹಾಡು ಚಿತ್ರರಸಿಕರ ಮನ ಗೆದ್ದಿದ್ದು ಚಿತ್ರವು ಯಾವ ರೀತಿಯ ರೆಸ್ಪಾನ್ಸ್ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Facebook Comments

Post Author: Ravi Yadav