ಮೋದಿಗೆ ಹೆದರಿ ದೇಶವನ್ನು ಹಾಳು ಮಾಡಿಯಾದರೂ ಗೆಲ್ಲಬೇಕು ಎಂದು ಮಮತಾ ಕೈಜೋಡಿಸಿದ್ದು ಯಾರ ಜೊತೆ ಗೊತ್ತಾ??

a

ಕೇವಲ ಕೆಲವೇ ಕೆಲವು ತಿಂಗಳುಗಳ ಹಿಂದೆ ಪಶ್ಚಿಮ ಬಂಗಾಳ ವೆಂದರೆ ಇಂದಿನ ಮುಖ್ಯಮಂತ್ರಿಗಳಾಗಿ ಇರುವ ಮಮತ ಬ್ಯಾನರ್ಜಿ ರವರ ಭದ್ರಕೋಟೆ ಎಂದು ಹೇಳಲಾಗುತ್ತಿತ್ತು ಆದರೆ ಆ ಮಾತುಗಳೆಲ್ಲವೂ ನರೇಂದ್ರ ಮೋದಿ ಹಾಗೂ ಅಮಿತ್ ಶಾ ರವರು ಪಶ್ಚಿಮ ಬಂಗಾಳಕ್ಕೆ ಕಾಲಿಡುವವರೆಗೂ ಮಾತ್ರ. ಕೆಲವೇ ಕೆಲವು ತಿಂಗಳುಗಳ ಹಿಂದೆ ಬಿಜೆಪಿ ಪಕ್ಷವನ್ನು ಪಶ್ಚಿಮ ಬಂಗಾಳದಲ್ಲಿ ಭದ್ರವಾಗಿ ನೆಲೆಯೂರುವಂತೆ ಮಾಡಲು ಬಿಜೆಪಿ ಪಕ್ಷದ ಚಾಣಕ್ಯ ಅಮಿತ್ ಶಾ ರವರು ಹಲವಾರು ತಂತ್ರಗಳನ್ನು ನಡೆದುಕೊಂಡು ಅಖಾಡಕ್ಕೆ ಧುಮುಕಿದರು. ತದನಂತರ ನಡೆದದ್ದೆಲ್ಲವೂ ನಿಮಗೆ ತಿಳಿದೇ ಇದೆ.

ನರೇಂದ್ರ ಮೋದಿ ಹಾಗೂ ಅಮಿತ್ ಶಾ ರವರು ಪಶ್ಚಿಮ ಬಂಗಾಳಕ್ಕೆ ಎಂಟ್ರಿ ಕೊಟ್ಟ ನಂತರ ಮಮತಾ ಬ್ಯಾನರ್ಜಿ ರವರ ಸರ್ಕಾರ ನಡುಗಿ ಹೋಗುತ್ತಿದೆ. ದಿನೇ ದಿನೇ ಹಲವಾರು ಶಾಸಕರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷದ ಕಡೆ ವಾಲುತ್ತಿದ್ದು ಪಕ್ಷಾಂತರ ಗಳು ಹೆಚ್ಚಾಗುತ್ತಿವೆ. ಪ್ರಧಾನಿ ಕುರ್ಚಿ ಆಮೇಲೆ ಕಣ್ಣುಬಿಟ್ಟು ಚುನಾವಣೆಯನ್ನು ಎದುರಿಸಬೇಕು ಎಂಬ ಆಸೆ ಇಟ್ಟುಕೊಂಡಿದ್ದ ಮಮತಾ ಬ್ಯಾನರ್ಜಿ ಅವರು ಇಂದು ತಮ್ಮದೇ ಆದ ಕ್ಷೇತ್ರಗಳನ್ನು ಉಳಿಸಿಕೊಂಡರೆ ಸಾಕು ಎಂಬ ಮಟ್ಟಕ್ಕೆ ಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿರವರ ಎತ್ತು ಮಮತಾ ಬ್ಯಾನರ್ಜಿ ರವರ ವರ್ಚಸ್ಸನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿದೆ.

ಪರಿಸ್ಥಿತಿ ಹೀಗಿರುವಾಗ ಮುಂದಿನ ಲೋಕಸಭಾ ಚುನಾವಣೆಯನ್ನು ಹೇಗಾದರೂ ಮಾಡಿ ಗೆಲ್ಲಬೇಕು ಎಂದು ಮಮತಾ ಬ್ಯಾನರ್ಜಿ ಅವರು ಇನ್ನಿಲ್ಲ ತಂತ್ರಗಳನ್ನು ರೂಪಿಸುವ ಸಮಯದಲ್ಲಿ, ಚುನಾವಣಾ ಗೆಲುವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ದೇಶದ ಭದ್ರತೆಗೆ ಅಪಾಯ ಕಾರಿ ಆಗುವಂತಹ ಹಲವಾರು ಹೆಜ್ಜೆಗಳನ್ನು ಇಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಪಶ್ಚಿಮ ಬಂಗಾಳವನ್ನು ಬಾಂಗ್ಲಾ ಎಂದು ಮರುನಾಮಕರಣ ಮಾಡಲು ಪ್ರಯತ್ನ ಪಟ್ಟಿದ್ದ ಮಮತಾ ಬ್ಯಾನರ್ಜಿ ಅವರು ಇದೀಗ ನೇರವಾಗಿ ದೇಶದ ಭದ್ರತೆಯ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳದೆ ಕೇವಲ ತಮ್ಮ ಗೆಲುವಿಗಾಗಿ ನಕ್ಸಲರ ಜೊತೆ ಕೈಜೋಡಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಜಾರ ಗ್ರಾಮ, ಜಿಲ್ಲೆಗಳಲ್ಲಿ ಮಾವೋವಾದಿಗಳು ಬಲಿಷ್ಠವಾಗಿ ನೆಲೆಯೂರಿದ್ದಾರೆ. ಇದೇ ಅಂಶವನ್ನು ಮುಂದಿಟ್ಟುಕೊಂಡು ಪೋಲೀಸ್ ದೌರ್ಜನ್ಯ ವಿರೋಧಿ ಸಾರ್ವಜನಿಕ ಸಮಿತಿ ಎಂಬ ಮಾವೋವಾದಿ ನಕ್ಸಲರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ವರನ್ನು ಹಾಗೂ ಮಾವೋವಾದಿಗಳ ವಿರುದ್ಧ ಹೋರಾಡಿದ ಕೆಲವು ನಾಯಕರನ್ನು ಪ್ರಚಾರ ನಡೆಸಲಾಗುತ್ತಿದೆ. ಬಿಜೆಪಿ ಪಕ್ಷ ಎಂಬುದು ಕಾರ್ಯಕರ್ತರ ಆದರಿತ ಪಕ್ಷ ಅವರ ಸಿದ್ಧಾಂತ ಧರ್ಮಾಧಾರಿತ, ಮಾಜಿ ಮಾವೋವಾದಿಗಳಿಗೆ ಈ ಜಿಲ್ಲೆಗಳಲ್ಲಿ ತಳಮಟ್ಟದ ಪರಿಸ್ಥಿತಿ ಚೆನ್ನಾಗಿ ತಿಳಿದಿದೆ ಆದ ಕಾರಣದಿಂದ ಜನರನ್ನು ಪಲು ಪಲು ಮಾವೋವಾದಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಪಶ್ಚಿಮ ಮಿಡ್ನಾಪುರ ದ ತೃಣಮೂಲ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಆಗಿರುವ ಅಜಿತ್ ಮೈಟಿ ರವರು ತಿಳಿಸಿದ್ದಾರೆ.