ಹೊರಬಿತ್ತು ಆಪ್ ಪಕ್ಷದ ಭ್ರಷ್ಟಾಚಾರ- ಕೇಜ್ರಿವಾಲ್ ಅವರಿಗೆ ಭಾರಿ ಮುಖಭಂಗ

ಹೊರಬಿತ್ತು ಆಪ್ ಪಕ್ಷದ ಭ್ರಷ್ಟಾಚಾರ- ಕೇಜ್ರಿವಾಲ್ ಅವರಿಗೆ ಭಾರಿ ಮುಖಭಂಗ

ಕೆಲವು ವರ್ಷಗಳ ಹಿಂದೆ ಭಾರತದ ಹಿರಿಯ ಹೋರಾಟಗಾರ ಅಣ್ಣಾ ಹಜಾರೆ ಅವರ ಜೊತೆಗೆ ತಮ್ಮನ್ನು ತಾವು ಗುರುತಿಸಿಕೊಂಡು, ಅವರ ಹೆಸರನ್ನು ಬಳಸಿಕೊಂಡು ಯಾರೂ ಊಹಿಸದ ರೀತಿಯಲ್ಲಿ ಐಪಿಎಸ್ ಅಧಿಕಾರಿಯೊಬ್ಬರು ದೆಹಲಿಯ ಗದ್ದುಗೆ ಏರಿದರು. ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿ ಯಾರೂ ಊಹಿಸದಷ್ಟು ಮಟ್ಟದಲ್ಲಿ ಮೊದಲ ಚುನಾವಣೆಯಲ್ಲಿ ಗೆದ್ದು ದೆಹಲಿಯ ಮುಖ್ಯಮಂತ್ರಿಯಾಗಿ ಭ್ರಷ್ಟಾಚಾರವನ್ನು ತೊಲಗಿಸಲು ಎಂಬ ಧ್ಯೇಯವನ್ನು ಮುಂದಿಟ್ಟುಕೊಂಡು ಅಧಿಕಾರವೇರಿದ ಅರವಿಂದ ಕೇಜ್ರಿವಾಲ್ ರವರ ಕರ್ಮಕಾಂಡ ಇದೀಗ ಬಯಲಾಗಿದೆ.

ಭ್ರಷ್ಟಾಚಾರವನ್ನು ತೊಲಗಿಸಲು ತಮ್ಮ ಪಕ್ಷವನ್ನು ಕಟ್ಟುತ್ತಿದ್ದೇನೆ ಎಂಬ ಧ್ಯೇಯವಾಕ್ಯದೊಂದಿಗೆ ದೆಹಲಿಯಲ್ಲಿ ರಣಕಹಳೆಯನ್ನು ಮೊಳಗಿಸಿದ್ದ ಅರವಿಂದ ಕೇಜ್ರಿವಾಲ್ ರವರು ಇತ್ತೀಚೆಗೆ ನರೇಂದ್ರ ಮೋದಿ ರವರನ್ನು ಸುಖಾಸುಮ್ಮನೆ ಕೆಣಕಿ ಭ್ರಷ್ಟಾಚಾರದ ಹಲವು ಆರೋಪಗಳನ್ನು ಮಾಡಿದ್ದರು. ಇದುವರೆಗೂ ಯಾವ ಆರೋಪಗಳು ಸತ್ಯ ಎಂದು ಸಾಬೀತಾಗಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ಸಹ ದೇಶದಲ್ಲಿ ಯಾವುದೇ ಘಟನೆಯಾದರೂ ನರೇಂದ್ರ ಮೋದಿ ಅವರನ್ನು ಎಳೆದು ತರುವ ಅರವಿಂದ ಕೇಜ್ರಿವಾಲ್ ರವರ ನೈಜ ಮುಖ ಇದೀಗ ಹೊರಬಿದ್ದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಗೆ ಅರವಿಂದ ಕೇಜ್ರಿವಾಲ್ ಅವರು ಆಹಾರವಾಗಿದ್ದಾರೆ.

ತಮ್ಮದೇ ಆದ ಪಕ್ಷದ ಕಾರ್ಯಕರ್ತನ ಬಳಿ ಕಪಾಳಮೋಕ್ಷ ಮಾಡಿಸಿಕೊಂಡು ನರೇಂದ್ರ ಮೋದಿರವರು ಇದಕ್ಕೆ ಕಾರಣ ಕಾರಣ ಎಂದು ಹೇಳಿದ್ದ ಕೇಜ್ರಿವಾಲ್ ರವರು ಇದೀಗ ಮತ್ತೊಮ್ಮೆ ತಮ್ಮದೇ ಪಕ್ಷದ ನಾಯಕ ಹಾಗೂ ಪಕ್ಷಿಮ ದೆಹಲಿಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಲಬೀರ್ ಸಿಂಗ್ ಜಾಖಡ್ ಅವರ ಪುತ್ರ ಉದಯ್ ರವರು ತಮ್ಮ ತಂದೆ ಆಮ್ ಆದ್ಮಿ ಪಕ್ಷದಿಂದ ಟಿಕೆಟ್ ಪಡೆಯಲು ಬರೋಬ್ಬರಿ ಆರು ಕೋಟಿ ರೂ ಗಳನ್ನು ಅರವಿಂದ ಕೇಜ್ರಿವಾಲ್ ರವರಿಗೆ ನೀಡಿ ದ್ದಾರೆ ಎಂಬ ಶಾಕಿಂಗ್ ಮಾಹಿತಿಯನ್ನು ಹೊರಹಾಕಿದ್ದಾರೆ.

ಅಫ್ ನಾಯಕನ ಪುತ್ರ ಉನ್ನತ ಶಿಕ್ಷಣಕ್ಕಾಗಿ ತನ್ನ ತಂದೆಯ ಬಳಿ ಹಣ ಕೇಳಿದಾಗ ತಾನು ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಹಣ ಬೇಕಾಗಿದೆ ಆದ ಕಾರಣದಿಂದ ನಿನಗೆ ನೀಡಲು ಸಾಧ್ಯವಿಲ್ಲ, ಅದೇ ಹಣದಿಂದ ಸಿಕ್ ವಿರೋಧಿ ಹಿಂಸೆ ಕೇಸಿನ ಆರೋಪಿಗಳಾದ ಯಶ್ ಪಾಲ್ ಹಾಗೂ ಸಜ್ಜನ್ ಕುಮಾರ್ ಅವರನ್ನು ಬೇಲ್ ಮೇಲೆ ಹೊರತರಲು ಬಳಸುತ್ತೇನೆ ಎಂದು ಹೇಳಿದರು. ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ರವರು ಈ ರೀತಿಯ ನಾಯಕರನ್ನು ಬೆಳೆಸಿ ಬೇಜವಾಬ್ದಾರಿಯ ಕೃತ್ಯಗಳನ್ನು ಎಸಗುತ್ತಿರುವ ದುರದೃಷ್ಟಕರ ಎಂದು ಉದಯ್ ಅವರು ಅರವಿಂದ ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದು ಟಿಕೆಟ್ ಗಾಗಿ ಬರೋಬ್ಬರಿ ಆರು ಕೋಟಿ ಲಾಬಿಯನ್ನು ನಡೆಸಿರುವ ಅರವಿಂದ ಕೇಜ್ರಿವಾಲ್ ಅವರು ಯಾವುದೇ ಪ್ರಕರಣ ಸಾಬೀತಾಗದ ನರೇಂದ್ರ ಮೋದಿ ಅವರ ಮೇಲೆ ಸುಖಾಸುಮ್ಮನೆ ಬೊಬ್ಬೆ ಹೊಡೆಯುತ್ತಿರುವ ಹಲವಾರು ಸನ್ನಿವೇಶಗಳನ್ನು ನಾವು ಇಲ್ಲಿ ಸ್ಮರಿಸಬಹುದು.