ಫಲಿತಾಂಶಕ್ಕೂ ಮುನ್ನವೇ ಸುಮಲತಾ ರವರಿಗೆ ಕಹಿ ಸುದ್ದಿ- ಮತ ಅಸಿಂಧು

ಫಲಿತಾಂಶಕ್ಕೂ ಮುನ್ನವೇ ಸುಮಲತಾ ರವರಿಗೆ ಕಹಿ ಸುದ್ದಿ- ಮತ ಅಸಿಂಧು

ರಾಜ್ಯದ ಮುಖ್ಯಮಂತ್ರಿಗಳ ಮಗನಾಗಿರುವ ನಿಖಿಲ್ ಕುಮಾರಸ್ವಾಮಿ ರವರಿಗೆ ಬಾರಿ ಪೈಪೋಟಿಯನ್ನು ನೀಡಿರುವ ಸುಮಲತಾ ಅಂಬರೀಶ್ ಅವರಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಇಡೀ ದೇಶದ ಗಮನ ಇದೀಗ ಮಂಡ್ಯ ಜಿಲ್ಲೆಯತ್ತ ನೆಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ನಿಖಿಲ್ ಕುಮಾರಸ್ವಾಮಿ ರವರ ಭವಿಷ್ಯದ ಚುನಾವಣೆ ಯಾಗಿರುವ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಂದು ಮತಗಳು ಮುಖ್ಯವಾಗಿರುತ್ತವೆ. ಪರಿಸ್ಥಿತಿ ಹೀಗಿರುವಾಗ ಸುಮಲತಾ ರವರಿಗೆ ನೀಡಿದ ಮೊದಲ ಮತ ಅಸಿಂಧು ಆಗಿದೆ. ಯಾಕೆ ಗೊತ್ತಾ ತಿಳಿಯಲು ಕೆಳಗಡೆ ಓದಿ !

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚುನಾವಣೆಗೂ ಮುನ್ನವೇ ಯೋಧರು ಮತ ಚಲಾಯಿಸಿದ ಕಾರಣ, ಸಾಮಾಜಿಕ ಜಾಲತಾಣಗಳಲ್ಲಿ ಮಂಡ್ಯ ಜಿಲ್ಲೆಯ ಸಿಆರ್ಪಿಎಫ್ ಯೋಧರೊಬ್ಬರು ನಾನು ಸುಮಲತಾ ರವರಿಗೆ ಮತ ಚಲಾಯಿಸುತ್ತಿದ್ದೇನೆ, ನೀವು ಸಹ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಿ ಎಂದು ತಾವು ಮತ ನೀಡಿದ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ತಾವೇ ಹರಿಬಿಟ್ಟಿದ್ದರು. ಈ ವಿಷಯ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಇದಲ್ಲದೆ ಮಂಡ್ಯ ಜಿಲ್ಲೆಯಲ್ಲಿ ಚಲಾವಣೆಯಾದ ಮೊದಲ ಮತವನ್ನು ಸುಮಲತಾ ಅಂಬರೀಶ್ ರವರು ಪಡೆದು ಯೋಧರ ಬೆಂಬಲದೊಂದಿಗೆ ಚುನಾವಣಾ ಯುದ್ಧವನ್ನು ಆರಂಭಿಸಿದ್ದರು. ಆದರೆ ಇದೀಗ ವಕೀಲರಾದ ಕಿರಣ್ ಕುಮಾರ್ ಎಂಬುವವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಕಾರಣ ದೂರನ್ನು ಪರಿಶೀಲನೆ ನಡೆಸಿದ ಕೇಂದ್ರ ಚುನಾವಣಾ ಆಯೋಗ ಸಿ ಆರ್ ಪಿ ಎಫ್ ಯೋಧ ಚಲಾಯಿಸಿದ ಮತವನ್ನು ಅಸಿಂಧುಗೊಳಿಸಿದೆ.