ಪ್ರತಾಪ್ ಸಿಂಹ ರವರಿಗೆ ಸಿಹಿ ಸುದ್ದಿ, ಜೆಡಿಎಸ್ ಮತಗಳು ಬಿಜೆಪಿಗೆ ಖಚಿತಪಡಿಸಿದ ಸಿದ್ದು

ಪ್ರತಾಪ್ ಸಿಂಹ ರವರಿಗೆ ಸಿಹಿ ಸುದ್ದಿ, ಜೆಡಿಎಸ್ ಮತಗಳು ಬಿಜೆಪಿಗೆ ಖಚಿತಪಡಿಸಿದ ಸಿದ್ದು

ಲೋಕಸಭಾ ಚುನಾವಣೆಯ ಅಖಾಡದಲ್ಲಿ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಕಣಕ್ಕೆ ಇಳಿದರೂ ಸಹ ಹಲವಾರು ಕ್ಷೇತ್ರಗಳಲ್ಲಿ ಮೈತ್ರಿ ಧರ್ಮ ಪಾಲನೆಯಾಗಿಲ್ಲ. ಇದಕ್ಕೆ ಬಾರಿ ಜಿದ್ದಾಜಿದ್ದಿಯಿಂದ ಕೂಡಿರುವ ಪ್ರತಾಪ್ ಸಿಂಹ ರವರ ಭದ್ರಕೋಟೆ ಎನಿಸಿಕೊಂಡಿರುವ ಮೈಸೂರು ಕ್ಷೇತ್ರವು ಸಹ ಹೊರತಲ್ಲ. ಚುನಾವಣೆ ಮುಗಿದ ಬಳಿಕ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕ ಹಾಗೂ ಸಚಿವ ಜಿ ಟಿ ದೇವೇಗೌಡ ರವರು ಮೈಸೂರು ಹಾಗೂ ಕೊಡಗಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಡುವಿನ ಮೈತ್ರಿ ಧರ್ಮ ಪಾಲನೆಯಾಗಿಲ್ಲ ಎಂಬರ್ಥದಲ್ಲಿ ಹಲವಾರು ಜೆಡಿಎಸ್ ನ ಮತಗಳು ಬಿಜೆಪಿ ಪಕ್ಷದ ತೆಕ್ಕೆಗೆ ಹೋಗಿವೆ ಎಂದು ಹೇಳಿಕೆ ನೀಡಿದ್ದರು.

ಜಿ ಟಿ ದೇವೇಗೌಡ ರವರು ಈ ಹೇಳಿಕೆ ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಕೋಪ ತರಿಸಿತು, ಅದರಲ್ಲಿಯೂ ಮೈಸೂರು ಹಾಗೂ ಕೊಡಗಿನ ಕ್ಷೇತ್ರವನ್ನು ತನ್ನ ಪ್ರತಿಷ್ಠೆಯ ಕಣ ವನ್ನಾಗಿ ತೆಗೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೆಂಗಣ್ಣಿಗೆ ಜಿ ಟಿ ದೇವೇಗೌಡ ರವರು ಗುರಿಯಾಗಿದ್ದರು. ಆದರೆ ಸಂಪೂರ್ಣ ದಾಖಲಾತಿಗಳ ಮೂಲಕ ಮತ್ತೊಮ್ಮೆ ಮಾತನಾಡಿದ ಸಿದ್ದರಾಮಯ್ಯ ರವರು ಪ್ರತಾಪ್ ಸಿಂಹ ರವರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಮೈಸೂರಿನಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಬಿಜೆಪಿ ಪಕ್ಷಕ್ಕೆ ಮತ ಹಾಕಿದ್ದಾರೆ ಎಂಬ ಹೇಳಿಕೆಯನ್ನು ಸಿದ್ದರಾಮಯ್ಯರವರು ಅನುಮೋದಿಸಿದ್ದಾರೆ.

ಹೌದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯರವರು ಜಿಟಿ ದೇವೇಗೌಡರು ಹೇಳಿದ ಹೇಳಿಕೆ ಸತ್ಯ. ಉದ್ಬೂರು ಸೇರಿದಂತೆ ಇನ್ನೂ ಹತ್ತು ಹಲವಾರು ಕಡೆ ಜೆಡಿಎಸ್ ಮತದಾರರು ಹಾಗೂ ಜೆಡಿಎಸ್ ಮುಖಂಡರು ಬಿಜೆಪಿ ಪಕ್ಷಕ್ಕೆ ಸಂಪೂರ್ಣವಾಗಿ ಮತ ಚಲಾಯಿಸಿದ್ದಾರೆ ಎಂದು ಹೇಳುವ ಮೂಲಕ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಈ ಹೇಳಿಕೆ ಹೊರ ಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಾಪ್ ಸಿಂಹ ರವರ ಗೆಲುವು ಮತ್ತಷ್ಟು ಹೆಚ್ಚಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಸಿದ್ದರಾಮಯ್ಯ ಅವರು ಮಾತ್ರ, ಉದ್ಬೂರುನಲ್ಲಿ ಜೆಡಿಎಸ್ ಮತದಾರರು ಮಾತ್ರವಿಲ್ಲ ಬದಲಾಗಿ ಕಾಂಗ್ರೆಸ್ ಬೆಂಬಲಿಗರು ಇದ್ದಾರೆ, ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿದ್ದಾರೆ ಗೆಲುವು ಮಾತ್ರ ನಮ್ಮದೆ ಎಂದು ತಮ್ಮ ಅಭ್ಯರ್ಥಿ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಇನ್ನು ಎಂದಿನಂತೆ ಮೋದಿ ರವರ ಮೇಲೆ ಮಾಧ್ಯಮಗಳ ಮುಂದೆ ಬಾರಿ ಆಕ್ರೋಶವನ್ನು ಹೊರಹಾಕಿದ ಸಿದ್ದರಾಮಯ್ಯರವರು ಮೋದಿ ಸುಳ್ಳನ್ನು ಮಾರ್ಕೆಟಿಂಗ್ ಮಾಡಿ ಕಳೆದ ಬಾರಿ ಪ್ರಧಾನಿ ಪಟ್ಟ ಏರಿದರು, ಈ ಬಾರಿಯೂ ಸಹ ನರೇಂದ್ರ ಮೋದಿ ಅವರು ಸುಳ್ಳನ್ನು ಮುಂದಿಟ್ಟುಕೊಂಡು ಪ್ರಧಾನಿಯಾಗಲು ಹೊರಟಿದ್ದಾರೆ, ಆದರೆ ಅದು ಸಾಧ್ಯವಿಲ್ಲ. ಸರ್ಜಿಕಲ್ ಸ್ಟ್ರೈಕ್ ನಿಜ ಎಂದು ನರೇಂದ್ರ ಮೋದಿ ಹೇಳುತ್ತಾರೆ ಆಗಿದ್ದರೆ ಮೋದಿ ಏನಾದರೂ ಗನ್ ಹಿಡಿದುಕೊಂಡು ತಾಳಿ ಮಾಡಲು ಹೋಗಿದ್ದರಾ?? ನಮ್ಮ ಸೈನಿಕರು ಯುದ್ಧ ಮಾಡಿರುವುದು ಅವರಿಗೆ ಗೌರವ ಕೊಡಬೇಕು ಎಂದು ಹೇಳಿಕೆ ನೀಡಿದ್ದಾರೆ.