ಜೈ ಶ್ರೀ ರಾಮ್- ಮಮತಾ ಗೆ ಮತ್ತೊಂದು ಸವಾಲೆಸೆದ ಮೋದಿ

ಜೈ ಶ್ರೀ ರಾಮ್- ಮಮತಾ ಗೆ ಮತ್ತೊಂದು ಸವಾಲೆಸೆದ ಮೋದಿ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪಕ್ಷಿಮ ಬಂಗಾಳ ಇದೀಗ ಅಕ್ಷರ ಸಹ ರಣ ರಂಗವಾಗಿ ಮಾರ್ಪಟ್ಟಿದೆ. ತನ್ನ ಸ್ವಂತ ಪಕ್ಷ ಅಧಿಕಾರದಲ್ಲಿ ಇದ್ದರೂ ಸಹ ನರೇಂದ್ರ ಮೋದಿ ರವರ ಅಲೆಯಲ್ಲಿ ಕೊಚ್ಚಿಕೊಂಡು ಹೋಗುವಂತಹ ಭೀತಿಯನ್ನು ಮಮತಾ ಬ್ಯಾನರ್ಜಿ ಅವರು ಎದುರಿಸುತ್ತಿದ್ದಾರೆ. ದಿನೇ ದಿನೇ ಇಡೀ ಪಶ್ಚಿಮ ಬಂಗಾಳ ಕೇಸರಿ ಮಯವಾಗುತ್ತಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ಸಾಕ್ಷಿ ಎಂದರೆ ನರೇಂದ್ರ ಮೋದಿ ಹಾಗೂ ಇನ್ನುಳಿದ ನಾಯಕರ ರ್ಯಾಲಿಗಳಿಗೆ ಜನರು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು. ಸಾಮಾನ್ಯವಾಗಿ ಇದು ಮಮತಾ ಬ್ಯಾನರ್ಜಿ ರವರ ನಿದ್ದೆಗೆಡಿಸಿದೆ. ಆದ ಕಾರಣದಿಂದ ಎಲ್ಲಾ ರೀತಿಯಲ್ಲೂ ನರೇಂದ್ರ ಮೋದಿ ಅವರಿಗೆ ಸೆಡ್ಡು ಹೊಡೆಯಲು ಪ್ರಯತ್ನಪಡುತ್ತಿರುವ ಮಮತಾ ಬ್ಯಾನರ್ಜಿ ಅವರು ಇತ್ತೀಚೆಗಷ್ಟೆ ಮತ್ತೊಂದು ವಿವಾದ ಸೃಷ್ಟಿಸಿದ್ದರು.

ಕಳೆದ ರಾಮನವಮಿಯ ದಿನದಂದು ಯಾವುದೇ ಸಮಾರಂಭಗಳಿಗೆ ಅನುಮತಿ ನೀಡದ ಮಮತಾ ಬ್ಯಾನರ್ಜಿ ರವರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದ ಗ್ರಾಮಸ್ಥರ ವಿರುದ್ಧ ಹರಿಹಾಯ್ದಿದ್ದರು. ದೇವರ ಬಗ್ಗೆ ಬಾರಿ ಹತಾಶೆಯಿಂದ ಇರುವಂತೆ ಕಾಣುವ ಮಮತಾ ಬ್ಯಾನರ್ಜಿ ರವರು ಜೈ ಶ್ರೀ ರಾಮ್ ಎಂದು ಘೋಷಣೆಗಳನ್ನು ಕೂಗಿದ ಹತ್ತು ಹಲವಾರು ಗ್ರಾಮಸ್ಥರ ಗಳನ್ನು ಬಂಧಿಸಿದ್ದಾರೆ. ಇತ್ತೀಚಿಗೆ ಮಮತಾ ಬ್ಯಾನರ್ಜಿ ರವರ ರ್ಯಾಲಿಯಲ್ಲಿ ಜೈ ಶ್ರೀ ರಾಮ್ ಎಂದು ಘೋಷಣೆ ಮಾಡಿದ ಹಲವಾರು ಯುವಕರನ್ನು ಸಹ ಬಂಧಿಸಿರುವ ಮಮತಾ ಬ್ಯಾನರ್ಜಿ ರವರು ಅಕ್ಷರಸಹ ಸರ್ವಾಧಿಕಾರವನ್ನು ಮೆರೆಯುತ್ತಿದ್ದಾರೆ. ಆದ ಕಾರಣದಿಂದ ಇದೀಗ ನರೇಂದ್ರ ಮೋದಿರವರು ಬಹಿರಂಗವಾಗಿ ಮಮತಾ ರವರಿಗೆ ಸವಾಲೆಸೆದಿದ್ದಾರೆ.

ಪಕ್ಷಿಮ ಬಂಗಾಳದ ಪ್ರಚಾರ ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿರವರು ಮಮತಾ ಬ್ಯಾನರ್ಜಿ ಅವರು ಪ್ರತಿಯೊಂದು ರೀತಿಯಲ್ಲೂ ಲೆಕ್ಕಾಚಾರ ಮಾಡಿ ರಾಜಕೀಯ ಮಾಡುತ್ತಾರೆ. ಇದುವರೆಗೂ ಭಾರತ ದೇಶವನ್ನು ಒಮ್ಮೆಯೂ ಮಮತಾ ಬ್ಯಾನರ್ಜಿ ರವರು ಹೊಗಳಿಲ್ಲ, ಮಸೂರ್ ಅಜರ್ ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಿಸಿದ ಕ್ಷಣವೂ ಸಹ ಮಮತಾ ಬ್ಯಾನರ್ಜಿ ಅವರು ದೇಶವನ್ನು ಕುರಿತು ಒಂದೂ ಮಾತನಾಡಲಿಲ್ಲ. ಹಾಗೆ ಮಾಡಿದರೆ ನನ್ನ ಬ್ಯಾಂಕಿಗೆ ತೊಂದರೆಯಾಗುತ್ತದೆ ಎಂಬ ಭೀತಿ ಅವರಿಗೆ ಕಾಡುತ್ತಿದೆ.

ಇನ್ನು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದರೆ ಗ್ರಾಮಸ್ಥರನ್ನು ಮಮತಾ ಬ್ಯಾನರ್ಜಿ ರವರು ಬಂಧಿಸುರತ್ತಾರೆ. ನಾನು ಸಹ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತೇನೆ, ತಾಕತ್ತು ಇದ್ದರೆ ನನ್ನನ್ನು ಬಂಧಿಸಿ ಎಂದು ಸವಾಲೆಸೆದಿದ್ದಾರೆ. ಇದಕ್ಕೆ ಉದ್ಧಟತನ ಮೆರೆದಿರುವ ಮಮತಾ ಬ್ಯಾನರ್ಜಿ ರವರ ಪೋನಿ ಚಂಡಮಾರುತದ ಕುರಿತು ಚರ್ಚೆಗೆ ನರೇಂದ್ರ ಮೋದಿರವರು ಕರೆ ಮಾಡಿದಾಗ ದುರಹಂಕಾರದ ಪರಮಾವಧಿ ಎಂಬಂತೆ ಕರೆಗಳನ್ನು ಸ್ವೀಕರಿಸಿದೆ ನಾನು ಎಕ್ಸ್ ಪೈರಿ ಪಿಎಂ ಜೊತೆ ಮಾತನಾಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇದು ಹಲವಾರು ಜನರ ಕೆಂಗಣ್ಣಿಗೆ ಸಹ ಗುರಿಯಾಗಿದೆ.