ಬಿಗ್ ಬ್ರೇಕಿಂಗ್- ಕುಮಾರಸ್ವಾಮಿ ರಾಜೀನಾಮೆ ಗೆ ಮುಹೂರ್ತ ಫಿಕ್ಸ್ ಮಾಡಿದ ಸಿದ್ದು

ಬಿಗ್ ಬ್ರೇಕಿಂಗ್- ಕುಮಾರಸ್ವಾಮಿ ರಾಜೀನಾಮೆ ಗೆ ಮುಹೂರ್ತ ಫಿಕ್ಸ್ ಮಾಡಿದ ಸಿದ್ದು

ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ ಕ್ಷಣದಿಂದಲೂ ಹಲವಾರು ರಾಜಕೀಯ ಪಂಡಿತರು ಹಾಗೂ ವಿರೋಧ ಪಕ್ಷದ ನಾಯಕರು ಲೋಕಸಭಾ ಚುನಾವಣೆ ಮುಗಿಯುವವರೆಗೆ ಮಾತ್ರ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ಗಟ್ಟಿಯಾಗಿರುತ್ತದೆ ಎಂಬ ಭವಿಷ್ಯ ನಿಜ ವಾಗುವಂತಹ ಕಾಲ ಇದೀಗ ಎದುರಾಗಿದೆ. ಯಾಕೆಂದರೆ ಮೈತ್ರಿ ಸರ್ಕಾರ ಇಲ್ಲಿಯವರೆಗೂ ಉಳಿಯಲು ಕಾರಣರಾದ ಮಾಜಿ ಮುಖ್ಯಮಂತ್ರಿ ಗಳಾಗಿರುವ ಸಿದ್ದರಾಮಯ್ಯರವರು ಇದೀಗ ಕುಮಾರಸ್ವಾಮಿ ಅವರ ರಾಜೀನಾಮೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಈ ಮೂಲಕ ಕುಮಾರಸ್ವಾಮಿ ರವರಿಗೆ ದೊಡ್ಡ ಶಾಕ್ ನೀಡಿದ್ದಾರೆ. ವಿಷಯದ ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ನಿಮಗೆಲ್ಲರಿಗೂ ತಿಳಿದಿರುವ ಕಳೆದ 10 ತಿಂಗಳಿನಿಂದ ಸರ್ಕಾರ ನಡೆಸುತ್ತಿರುವ ಕುಮಾರಸ್ವಾಮಿ ರವರಿಗೆ ಹಲವಾರು ಸವಾಲುಗಳು ಈಗಾಗಲೇ ಎದುರಾಗಿದ್ದವು. ಆದರೆ ಹೇಗೋ ಕುಮಾರಸ್ವಾಮಿ ರವರು ಎಲ್ಲವನ್ನು ನಿಭಾಯಿಸಿ ಸರ್ಕಾರವನ್ನು ಉಳಿಸಿಕೊಂಡಿದ್ದರು. ಮುಂದಿನ ಲೋಕಸಭಾ ಚುನಾವಣೆ ನಡೆದ ನಂತರ ಸರ್ಕಾರದ ಪರಿಸ್ಥಿತಿ ಏನಾಗಬಹುದು ಎಂದು ಮುಂದಾಲೋಚನೆ ನಡೆಸುವ ಸಲುವಾಗಿ ಹಲವಾರು ಗೌಪ್ಯ ಸಭೆಗಳನ್ನು ನಡೆಸುತ್ತಿರುವ ಕುಮಾರಸ್ವಾಮಿರವರ ತಂತ್ರಗಳಿಗೆ ಪ್ರತಿ ತಂತ್ರವನ್ನು ಸಿದ್ದರಾಮಯ್ಯರವರು ನಿನ್ನೆ ತಮ್ಮ ಆಪ್ತರ ಜೊತೆ ರಾತ್ರಿಯ ಡಿನ್ನರ್ ಪಾರ್ಟಿ ಯಲ್ಲಿ ಅತಿ ದೊಡ್ಡ ಸುದ್ದಿಯನ್ನು ಹೊರಹಾಕಿದ್ದಾರೆ.

ಕೆಲವು ಮೂಲಗಳ ಪ್ರಕಾರ ಕುಮಾರಸ್ವಾಮಿ ರವರು ಒಂದು ವೇಳೆ ಸರ್ಕಾರ ಬೀಳಿಸುವಂತಹ ಪರಿಸ್ಥಿತಿ ಎದುರಾದರೆ ರಾಜ್ಯದ ಉಪಮುಖ್ಯಮಂತ್ರಿ ಗಳಾಗಿರುವ ಪರಮೇಶ್ವರ್ ಅವರಿಗೆ ತಮ್ಮ ಕುರ್ಚಿಯನ್ನು ಬಿಟ್ಟುಕೊಟ್ಟು, ಉಪಮುಖ್ಯಮಂತ್ರಿಗಳ ಸ್ಥಾನವನ್ನು ಕುಮಾರಸ್ವಾಮಿ ಅವರ ಸಹೋದರ ರೇವಣ್ಣ ರವರಿಗೆ ನೀಡಲು ಶಿಫಾರಸು ಮಾಡಿ ರಾಜೀನಾಮೆ ಕೊಟ್ಟು ಸರ್ಕಾರವನ್ನು ಉಳಿಸುವ ಎಲ್ಲಾ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈ ಮೂಲಕ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರನ್ನು ಸೈಡ್ ಲೈನ್ ಮಾಡಲು ಕುಮಾರಸ್ವಾಮಿ ಅವರು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು.

ಈ ಸುದ್ದಿ ಹೊರಬೀಳುತ್ತಿದ್ದಂತೆ ಎಚ್ಚೆತ್ತುಕೊಂಡ ಸಿದ್ದರಾಮಯ್ಯರವರು, ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇವಲ 37 ಸೀಟು ಗಳನ್ನು ಪಡೆದುಕೊಂಡಿದ್ದ ಕುಮಾರಸ್ವಾಮಿ ರವರಿಗೆ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿದ್ದ ಸಿದ್ದರಾಮಯ್ಯರವರು ಇದೀಗ ನಾನೇ ಮುಂದಿನ ಸಿಎಂ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಆದರೆ ಈ ಬಾರಿ ಕಳೆದ ಬಾರಿಯಂತೆ ಐದು ವರ್ಷಗಳ ನಂತರ ಸಿಎಂ ಅಲ್ಲ ಬದಲಾಗಿ ಇದೇ ವರ್ಷದ ಜೂನ್ ತಿಂಗಳ ಆರಂಭದಲ್ಲಿ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.

ಪಕ್ಷಗಳಲ್ಲಿರುವ ಭಿನ್ನಮತಗಳನ್ನು ಹತ್ತಿಕ್ಕಲು ನಾನು ಮುಖ್ಯಮಂತ್ರಿಯಾಗಬೇಕು, ರಮೇಶ್ ಜಾರಕಿಹೊಳಿ ರವರ ಬಂಡಾಯವನ್ನು ಶಮನಗೊಳಿಸಿ ಬೇಕಾದರೆ ಬೇರೆ ವಿಧಿಯಿಲ್ಲದೆ ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ಅಷ್ಟೇ ಅಲ್ಲದೆ ರೆಬಲ್ ಕಾಂಗ್ರೆಸ್ ನಾಯಕರಾಗಿರುವ ಚೆಲುವರಾಯಸ್ವಾಮಿ ಹಾಗೂ ಟೀಮ್ ತಂಡದ ಬೆನ್ನೆಲುಬಾಗಿ ನಿಂತಿರುವ ಸಿದ್ದರಾಮಯ್ಯರವರು ಅವರ ವಿರುದ್ಧ ಯಾವುದೇ ಕಠಿಣ ಕ್ರಮವನ್ನು ಕೈಗೊಳ್ಳದೆ ಇರಲು ನಿರ್ಧಾರ ಮಾಡಿದ್ದೇವೆ ಹಾಗೂ ಇನ್ನೂ ಹತ್ತು ಹಲವಾರು ಕಾಂಗ್ರೆಸ್ ನಾಯಕರು ಕುಮಾರಸ್ವಾಮಿರವರ ನಾಯಕತ್ವದಲ್ಲಿ ಕೆಲಸ ಮಾಡಲು ತಯಾರಿಲ್ಲ ಆದ ಕಾರಣ ನಾನು ಸಿಎಂ ಆಗಬೇಕು ಎಂದು ಘೋಷಣೆ ಮಾಡಿಕೊಂಡಿದ್ದಾರೆ.

ಈ ಎಲ್ಲಾ ಪರಿಸ್ಥಿತಿಗಳನ್ನು ಮೊದಲೇ ಅರಿತುಕೊಂಡಿದ್ದ ಕುಮಾರಸ್ವಾಮಿ ರವರು ಅದೇಗೋ ಪರಮೇಶ್ವರ್ ಅವರನ್ನು ಸಿಎಂ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳುವ ಆಲೋಚನೆ ಮಾಡಿದ್ರು ಆದರೆ ಇದಕ್ಕೆ ಪ್ರತಿ ತಂತ್ರವನ್ನು ಹೆಣೆದಿರುವ ಸಿದ್ದರಾಮಯ್ಯ ರವರು ಒಂದು ವೇಳೆ ನನ್ನನ್ನು ಬಿಟ್ಟು ಉಳಿದವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ಮೈತ್ರಿ ಸರ್ಕಾರ ಕೊನೆಗೊಳ್ಳುತ್ತದೆ ಎಂದು ತಮ್ಮ ಆಪ್ತ ಬಳಗದೊಂದಿಗೆ ಡಿನ್ನರ್ ಪಾರ್ಟಿ ಯಲ್ಲಿ ಬಹಿರಂಗವಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಈ ವಿಷಯ ಈಗಾಗಲೇ ಹಲವಾರು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ.

ಒಂದು ವೇಳೆ ದೋಸ್ತಿಗಳ ಕಿತ್ತಾಟ ಇದೇ ರೀತಿ ಮುಂದುವರೆದಲ್ಲಿ ಕರ್ನಾಟಕ ರಾಜ್ಯವು ಇನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ಮತ್ತೊಂದು ವಿಧಾನಸಭಾ ಚುನಾವಣೆಯನ್ನು ಎದುರಿಸುವ ಎಲ್ಲಾ ಸಾಧ್ಯತೆಗಳು ಇವೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಒಂದು ವೇಳೆ ಕೆಲವೊಂದು ಶಾಸಕರು ಬಿಜೆಪಿ ಪಕ್ಷದ ಕಡೆ ವಾಲಿದ್ದ ಲ್ಲಿ ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎಂಬಂತೆ ಬಿಜೆಪಿ ಪಕ್ಷವು ಬಹಳ ಸುಲಭವಾಗಿ ಅಧಿಕಾರದ ಗದ್ದುಗೆ ಏರಲಿದೆ ಎಂದು ಸಹ ಕೆಲವು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.