ಸವಾಲು ಹಾಕಿದ ಒಂದು ಗಂಟೆಯಲ್ಲಿ ಕೇಜ್ರಿವಾಲ್ ಗೆ ಶಾಕ್ ನೀಡಿದ ಬಿಜೆಪಿ- ಬಿಜೆಪಿಗೆ ಮತ್ತಷ್ಟು ಬಲ

ಸವಾಲು ಹಾಕಿದ ಒಂದು ಗಂಟೆಯಲ್ಲಿ ಕೇಜ್ರಿವಾಲ್ ಗೆ ಶಾಕ್ ನೀಡಿದ ಬಿಜೆಪಿ- ಬಿಜೆಪಿಗೆ ಮತ್ತಷ್ಟು ಬಲ

ಕಳೆದ ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ಆಡಳಿತವನ್ನು ವಿರೋಧ ಮಾಡುವ ನಿಟ್ಟಿನಲ್ಲಿ ದೆಹಲಿಯ ಇಂದಿನ ಮುಖ್ಯಮಂತ್ರಿ ಗಳಾಗಿರುವ ಅರವಿಂದ ಕೇಜ್ರಿವಾಲ್ ಅವರು ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿ ದೆಹಲಿಯಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆಲುವನ್ನು ಕಂಡು ಅಧಿಕಾರದ ಗದ್ದುಗೆ ಏರಿದರು. ಆದರೆ ಕೆಲವು ವರ್ಷಗಳ ವರೆಗೂ ಪಕ್ಷದಲ್ಲಿ ಎಲ್ಲವೂ ಚೆನ್ನಾಗಿ ನಡೆದಿತ್ತು, ತದನಂತರ ಪಕ್ಷಗಳಲ್ಲಿ ಹಲವಾರು ಭಿನ್ನಮತಗಳು ಕಾಣಿಸಿಕೊಂಡವು ಹಾಗೂ ಇಡೀ ದೇಶದಲ್ಲಿ ಬಿಜೆಪಿ ಪಕ್ಷದ ಅಲೆಯೇ ಜೋರಾಗಿತ್ತು. ನರೇಂದ್ರ ಮೋದಿ ರವರ ಅಲೆಯನ್ನು ದೆಹಲಿಯಲ್ಲಿ ತಮ್ಮದೇ ಸರ್ಕಾರ ಅಧಿಕಾರದಲ್ಲಿ ಇದ್ದರೂ ಸಹ ಅರವಿಂದ ಕೇಜ್ರಿವಾಲ್ ರವರಿಗೆ ತಡೆಯುತ್ತೇವೆ ಎಂಬ ಧೈರ್ಯ ಇರಲಿಲ್ಲ.

ಎಲ್ಲಿ ನೋಡಿದರೂ ನರೇಂದ್ರ ಮೋದಿ ರವರ ಹೆಸರು ಕೇಳಿ ಬರುತ್ತಿದ್ದ ಕಾರಣ ತಾವು ಹೋರಾಡಬೇಕು ಎಂದು ರಾಜಕೀಯಕ್ಕೆ ಬಂದು ಪಕ್ಷ ಕಟ್ಟಿದ್ದ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿಯನ್ನು ಮಾಡಿಕೊಳ್ಳಲು ಮುಂದಾದರು. ಆದರೆ ಕಾಂಗ್ರೆಸ್ ಪಕ್ಷವೂ ಸಹ ಅರವಿಂದ ಕೇಜ್ರಿವಾಲ್ ರವರ ತಂತ್ರಗಳನ್ನು ತಿಳಿದುಕೊಂಡು ಮೈತ್ರಿಯಿಂದ ದೂರವಿಟ್ಟಿತ್ತು. ಇದರಿಂದ ಆಮ್ ಆದ್ಮಿ ಪಕ್ಷದಲ್ಲಿ ಮತ್ತಷ್ಟು ಭಿನ್ನಮತಗಳು ಭುಗಿಲೆದ್ದಿದ್ದವು. ಯಾಕೆಂದರೆ ಹಲವಾರು ಶಾಸಕರಿಗೆ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದು ಇಷ್ಟವಿರಲಿಲ್ಲ. ಇನ್ನು ನರೇಂದ್ರ ಮೋದಿ ರವರ ಅಲೆಯನ್ನು ಕಂಡು ಹಲವಾರು ಶಾಸಕರು ಬಿಜೆಪಿ ಪಕ್ಷ ಸೇರಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದ್ದವು. ಕೇವಲ 24 ಗಂಟೆಗಳ ಹಿಂದಷ್ಟೇ ಬಿಜೆಪಿ ಪಕ್ಷದ ಹಿರಿಯ ನಾಯಕ ವಿಜಯ್ ಗೋಯಲ್ ರವರು ಆಮ್ ಆದ್ಮಿ ಪಕ್ಷದ ಹಲವಾರು ಶಾಸಕರು ಬಿಜೆಪಿ ಪಕ್ಷ ಸೇರಲಿದ್ದಾರೆ ಎಂಬ ಮಾತನ್ನು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರವರು ಆಮ್ ಆದ್ಮಿ ಪಾರ್ಟಿಯ ಯಾವೊಬ್ಬ ಶಾಸಕನೂ ಬಿಜೆಪಿ ಪಕ್ಷ ಸೇರಲು ಮುಂದೆ ಹೋಗುವುದಿಲ್ಲ, ನರೇಂದ್ರ ಮೋದಿ ಅವರು ಬಂದು ಕರೆದರೂ ಸಹ ಯಾವೊಬ್ಬ ಶಾಸಕನೂ ಬಿಜೆಪಿ ಪಕ್ಷ ಸೇರುವುದಿಲ್ಲ ಎಂಬ ಮಾತನ್ನು ಆಡಿದ್ದರು. ಆದರೆ ಈ ಹೇಳಿಕೆ ನೀಡಿದ ಕೇವಲ ಒಂದು ಗಂಟೆಯಲ್ಲಿ ಬಿಜೆಪಿ ಪಕ್ಷವು ಅರವಿಂದ ಕೇಜ್ರಿವಾಲ್ ರವರಿಗೆ ದೊಡ್ಡ ಶಾಕ್ ನೀಡಿದೆ. ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕ ಹಾಗೂ ದೆಹಲಿಯ ಗಾಂಧಿನಗರದ ಶಾಸಕರಾಗಿರುವ ಅನಿಲ್ ಭಾಜಪೇಯಿ ಆಮ್ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಪಕ್ಷದ ಆಂತರಿಕ ಕಲಹ ಗಳನ್ನು ಹೊರ ಹಾಕಿರುವ ಅನಿಲ್ ರವರು, ಏಳು ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತನಾಗಿ ನಾನು ಪಕ್ಷದಲ್ಲಿ ದುಡಿದೆ, ಆದರೆ ಇದುವರೆಗೂ ನನಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನಗಳು ದೊರೆತಿಲ್ಲ. ಪ್ರತಿಬಾರಿಯೂ ಪಕ್ಷಕ್ಕಾಗಿ ದೇಣಿಗೆ ನೀಡುವಂತೆ ಆಪ್ ನಾಯಕರು ಒತ್ತಾಯ ಮಾಡುತ್ತಿದ್ದಾರೆ. ಪಕ್ಷಕ್ಕಾಗಿ ದೇಣಿಗೆ ನೀಡಿ ನೀಡಿ ಹಣ ಹೊಂದಿಸಿ ಸಾಕಾಗಿದೆ ಇನ್ನು ಮುಂದೆ ಹಣ ಹೊಂದಿಸುವುದು ಬಹಳ ಕಷ್ಟವಾದ ಸಂಗತಿ ಆದ ಕಾರಣದಿಂದ ನಾನು ಪಕ್ಷದಿಂದ ಹೊರಬಂದಿದ್ದೇನೆ ಎಂದು ಆ ಪಕ್ಷದ ಕರಾಳ ಮುಖವನ್ನು ಹೊರಹಾಕಿದ್ದಾರೆ. ಈ ಮೂಲಕ ನರೇಂದ್ರ ಮೋದಿ ರವರ ಹೆಸರು ಎತ್ತಿದ್ದಕ್ಕಾಗಿ ಕೇವಲ ಒಂದು ಗಂಟೆಯಲ್ಲಿ ಉತ್ತರ ನೀಡಿದ್ದಾರೆ.