ಈ ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ, ಮೈತ್ರಿ ಸರ್ಕಾರ ಉರುಳುವುದು ಖಚಿತ

ಈ ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ, ಮೈತ್ರಿ ಸರ್ಕಾರ ಉರುಳುವುದು ಖಚಿತ

ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೂರಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದರೂ ಸಹ ಬಿಜೆಪಿ ಪಕ್ಷ ಅಧಿಕಾರದ ಗದ್ದುಗೆ ಏರುವಲ್ಲಿ ವಿಫಲವಾಗಿತ್ತು, ಯಾಕೆಂದರೆ ಇನ್ನು ಸಂಪೂರ್ಣ ಫಲಿತಾಂಶ ಹೊರಬೀಳುವ ಮುನ್ನವೇ ಕಾಂಗ್ರೆಸ್ ಪಕ್ಷವು ಜೆಡಿಎಸ್ ಪಕ್ಷದ ಬಾಗಿಲಿಗೆ ಹೋಗಿ ಮೈತ್ರಿ ಮಾಡಿಕೊಂಡು ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇಡುವಂತೆ ಮನವಿ ಮಾಡಿಕೊಂಡು ಮೈತ್ರಿ ಸರ್ಕಾರ ರಚಿಸಿಕೊಂಡಿತ್ತು. ಇದಾದ ನಂತರ ಮೈತ್ರಿ ಸರ್ಕಾರ ಹಲವಾರು ಗೊಂದಲಗಳು ಹಾಗೂ ಸವಾಲುಗಳನ್ನು ಎದುರಿಸಿದರೂ ಸಹ ಎಲ್ಲವನ್ನೂ ನಿಭಾಯಿಸಿ ಎರಡು ಪಕ್ಷಗಳು ಇಲ್ಲಿಯವರೆಗೂ ಅಧಿಕಾರವನ್ನು ನಡೆಸಿಕೊಂಡು ಬಂದು ಲೋಕಸಭಾ ಚುನಾವಣೆಯನ್ನು ಸಹ ಮೈತ್ರಿಯ ಮೂಲಕ ಎದುರಿಸಿದರು.

ಆದರೆ ಇದೀಗ ಮೈತ್ರಿ ಸರ್ಕಾರದ ಭವಿಷ್ಯ ಮುಂದಿನ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಆಧಾರವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ರಾಜ್ಯ ರಾಜಕಾರಣದಲ್ಲಿ ಬಾರಿ ಮಹತ್ವವನ್ನು ಸೃಷ್ಟಿಸಿರುವ ಸುದ್ದಿ ಇದೀಗ ಹೊರಬಿದ್ದಿದ್ದು ಒಂದು ವೇಳೆ ಕರ್ನಾಟಕದ ಈ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ಗೆದ್ದರೆ ಮೈತ್ರಿ ಸರ್ಕಾರ ಉರುಳುವುದು ಖಚಿತ. ಉಳಿದ 27 ಕ್ಷೇತ್ರಗಳನ್ನು ಮೈತ್ರಿ ಗೆದ್ದರೂ ಸಹ ಗೆಲುವುದು ಬಹಳ ಮುಖ್ಯ, ಯಾಕೆಂದರೆ ಈ ಕ್ಷೇತ್ರದಲ್ಲಿ ಮಾಜಿ ಮುಖ್ಯ ಮಂತ್ರಿಗಳ ಸಂಪೂರ್ಣ ವರ್ಚಸ್ಸು ಅಡಗಿದೆ. ವಿಷಯದ ಸಂಪೂರ್ಣ ಮಾಹಿತಿ ಗಾಗಿ ಕೆಳಗಡೆ ಓದಿ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯರವರು ಚಾಮುಂಡಿ ಕ್ಷೇತ್ರದಿಂದ ಸ್ಪರ್ಧಿಸಿ ಜೆಡಿಎಸ್ ಪಕ್ಷದ ಜಿ ಟಿ ದೇವೇಗೌಡರ ವಿರುದ್ಧ ಸೋಲನ್ನು ಕಂಡಿದ್ದರು. ಇದು ಸಿದ್ದರಾಮಯ್ಯರವರ ವರ್ಚಸ್ಸಿಗೆ ಬಾರಿ ಧಕ್ಕೆ ತಂದಿತ್ತು, ಇದನ್ನು ತಮ್ಮ ವರ್ಚಸ್ಸಿಗೆ ಬಂದ ಧಕ್ಕೆ ಎಂದುಕೊಂಡು ಸಿದ್ದರಾಮಯ್ಯ ಅವರು ಈ ಬಾರಿಯ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಏರಿಸಿಕೊಂಡು ವಿಜಯಶಂಕರ್ ಅವರ ಪರವಾಗಿ ಕೆಲಸ ಮಾಡಿದರು. ಆದರೆ ಮೊದಲಿನಿಂದಲೂ ಜೆಡಿಎಸ್ ಪಕ್ಷದ ನಾಯಕರಿಗೆ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಕೆಲಸ ಮಾಡಲು ಇಷ್ಟವಿರಲಿಲ್ಲ. ಹಲವಾರು ಸಂಧಾನ ಸಭೆಗಳು ನಡೆದ ನಂತರ ಕೆಲವು ಬಾರಿ ಮಾತ್ರ ಜೆಡಿಎಸ್ ಪಕ್ಷದ ನಾಯಕರು ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಇನ್ನುಳಿದಂತೆ ಕೇವಲ ನಿನ್ನೆಯಷ್ಟೇ ಜಿ ಟಿ ದೇವೇಗೌಡ ರವರು ಜೆಡಿಎಸ್ ಪಕ್ಷದ ಮತಗಳು ಬಿಜೆಪಿ ಪಕ್ಷಕ್ಕೆ ಹೋಗಿವೆ ಎಂದು ಹೇಳಿಕೆ ನೀಡುವ ಮೂಲಕ ಸಿದ್ದರಾಮಯ್ಯರವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಒಂದು ವೇಳೆ ಅದೇ ನಡೆದು ಜೆಡಿಎಸ್ ಪಕ್ಷದ ಬೆಂಬಲವಿಲ್ಲದೆ ಕಾಂಗ್ರೆಸ್ ಪಕ್ಷ ಸೋಲನ್ನು ಕಂಡಲ್ಲಿ ತಮ್ಮ ಸಂಪೂರ್ಣ ಪ್ರತಿಷ್ಠೆಯನ್ನು ಕಣದಲ್ಲಿ ಇಟ್ಟಿರುವ ಸಿದ್ದರಾಮಯ್ಯರವರ ವರ್ಚಸ್ಸಿಗೆ ಮತ್ತಷ್ಟು ಧಕ್ಕೆ ಉಂಟಾಗಲಿದೆ. ಆಗ ಸಾಮಾನ್ಯವಾಗಿ ಜೆಡಿಎಸ್ ಪಕ್ಷಕ್ಕೆ ನೀಡಿರುವ ಸಿದ್ದರಾಮಯ್ಯ ರವರ ಬೆಂಬಲದ ಮೇಲೆ ತೂಗುಗತ್ತಿದೆ ನೇತಾಡಲು ಆರಂಭಿಸುತ್ತದೆ, ಸಿದ್ದರಾಮಯ್ಯರವರ ಬಣದ ಬೆಂಬಲವಿಲ್ಲದೆ ಮೈತ್ರಿ ಸರ್ಕಾರ ಉಳಿಯುವ ಯಾವುದೇ ಸಾಧ್ಯತೆಗಳು ಇಲ್ಲ, ಆದ ಕಾರಣದಿಂದ ಒಂದು ವೇಳೆ ಪ್ರತಾಪ್ ಸಿಂಹರವರು ಗೆಲುವಿನ ನಗೆ ಬೀರಿದ್ದಲ್ಲಿ ಮೈತ್ರಿ ಸರ್ಕಾರ ಉರುಳುವುದು ಖಚಿತ ಎಂದು ರಾಜಕೀಯ ಪಂಡಿತರು ಈಗಾಗಲೇ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಇನ್ನು ಜಿ ಟಿ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯರವರು ಸಹ ಜಿ ಟಿ ದೇವೇಗೌಡರ ಮಾತು ಸುಳ್ಳಾಗಲಿ, ಫಲಿತಾಂಶದ ನಂತರ ಸುಳ್ಳೋ ನಿಜವೂ ತಿಳಿಯುತ್ತದೆ ಎಂದು ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ.