ಉಪಚುನಾವಣೆ- ರಾಜಕೀಯ ನಿವೃತ್ತಿ ಘೋಷಿಸಿದ ಕಾಂಗ್ರೆಸ್ ನಾಯಕ

ಉಪಚುನಾವಣೆ- ರಾಜಕೀಯ ನಿವೃತ್ತಿ ಘೋಷಿಸಿದ ಕಾಂಗ್ರೆಸ್ ನಾಯಕ

ಮೈತ್ರಿ ಗಳ ಸಂಖ್ಯಾಬಲದ ಮೇಲೆ ಭಾರೀ ಪರಿಣಾಮವನ್ನು ಬೀರುವ 2 ಕ್ಷೇತ್ರಗಳ ಉಪಚುನಾವಣೆಯ ಮೇಲೆ ಇಡೀ ರಾಜ್ಯದ ಕಣ್ಣು ಇದೀಗ ಬಿದ್ದಿದೆ. ಕೇವಲ ಎರಡು ಕ್ಷೇತ್ರಗಳಿಂದ ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲವಾದರೂ ಸಹ ಒಂದು ವೇಳೆ ಬಿಜೆಪಿ ಪಕ್ಷವು 2 ಕ್ಷೇತ್ರಗಳನ್ನು ಗೆದ್ದು ಬೀಗಿದ್ದಲ್ಲಿ ಹಲವಾರು ಕಾಂಗ್ರೆಸ್ನ ಹಾಗೂ ಜೆಡಿಎಸ್ ಪಕ್ಷದ ಶಾಸಕರು ಬಿಜೆಪಿ ಪಕ್ಷದ ತೆಕ್ಕೆಗೆ ಜಾರಲಿದ್ದಾರೆ ಹಾಗೂ ಅಧಿಕಾರದಲ್ಲಿ ಇದ್ದರೂ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಮುಂದೆ ಸೋಲನ್ನು ಕಂಡ ಅಪಖ್ಯಾತಿಗೆ ಮೈತ್ರಿ ಸರ್ಕಾರ ಗುರಿಯಾಗುತ್ತದೆ. ಆದ ಕಾರಣದಿಂದ ಇತ್ತ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮತ್ತೊಂದೆಡೆ ಬಿಜೆಪಿ ಪಕ್ಷ ತಮ್ಮ ತಮ್ಮ ಪ್ರತಿಷ್ಠೆಗಳನ್ನು ಪಣಕ್ಕೆ ಇಟ್ಟು ಚುನಾವಣಾ ಕಣದಲ್ಲಿ ಹೋರಾಡುತ್ತಿವೆ.

ಈಗಾಗಲೇ ಚಿಂಚೋಳಿ ಕ್ಷೇತ್ರದ ಮಾಜಿ ಶಾಸಕ ಉಮೇಶ್ ಜಾದವ್ ರವರು ಬಿಜೆಪಿ ಪಕ್ಷ ಸೇರಿಕೊಂಡು ತಮ್ಮ ಪುತ್ರನಿಗೆ ಟಿಕೆಟ್ ದಕ್ಕಿಸಿಕೊಂಡು ತಮ್ಮ ವರ್ಚಸ್ಸಿನ ಮೂಲಕ ಚಿಂಚೋಳಿ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಲು ಸಿದ್ಧರಾಗಿದ್ದಾರೆ. ಮತ್ತೊಂದೆಡೆ ಮಾಜಿ ಶಾಸಕ ಶಿವಳ್ಳಿ ಅವರ ನಿಧನದಿಂದ ತೆರವಾದ ವಿಧಾನಸಭಾ ಕ್ಷೇತ್ರದಲ್ಲಿ ಶಿವಳ್ಳಿ ರವರ ಧರ್ಮಪತ್ನಿ ಯಾಗಿರುವ ಕುಸುಮ ಶಿವಳ್ಳಿ ರವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಕುಸುಮ ಶಿವಳ್ಳಿ ರವರಿಗೆ ಟಿಕೆಟ್ ಘೋಷಿಸಿದ ತಕ್ಷಣ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಭಿನ್ನಮತದ ಮಾತುಗಳು ಕೇಳಿಬಂದಿದ್ದವು. ಆದರೆ ಭಿನ್ನಮತ ಕೇಳಿಬಂದ ತಕ್ಷಣ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರು ದೌಡಾಯಿಸಿ ಭಿನ್ನಮತ ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದಾರೂ ಸಹ ಕಾಂಗ್ರೆಸ್ ಪಕ್ಷಕ್ಕೆ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಬಹು ದೊಡ್ಡ ಶಾಕ್ ಎದುರಾಗಿದೆ.

ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ಕಷ್ಟಪಟ್ಟು ದುಡಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಿವಾನಂದ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ವನ್ನು ಸಲ್ಲಿಸಿದ್ದು ನಿಮಗೆಲ್ಲರಿಗೂ ತಿಳಿದಿರುವ ವಿಷಯ.ಆದರೆ ಇಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಮಾತಿಗೆ ಬೆಲೆ ಕೊಟ್ಟು ತಮ್ಮ ನಾಮಪತ್ರವನ್ನು ಹಿಂತೆಗುಕೊಂಡರು. ತದ ನಂತರ ಇಷ್ಟಕ್ಕೆ ಮುಗಿಯದ ಕಥೆ ಮುಂದುವರೆದು ಸತೀಶ್ ಜಾರಕಿಹೊಳಿ ರವರ ಮುಂದೆ ತಮ್ಮ ಅಸಮಾಧಾನವನ್ನು ಶಿವಾನಂದ ರವರ ಪರ ಬೆಂಬಲಿಗರು ಹೊರಹಾಕಿ ಪಕ್ಷ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಬೇಸತ್ತು ನಾಮಪತ್ರ ವಾಪಸ್ಸು ತೆಗೆದುಕೊಂಡು ದಿಡೀರ್ ರಾಜಕೀಯ ನಿವೃತ್ತಿ ಘೋಷಿಸಿಕೊಂಡಿದ್ದಾರೆ.

ಮುಂಬರುವ ಉಪ ಚುನಾವಣೆಯಲ್ಲಿಯೂ ಸಹ ತಮ್ಮ ಪಾತ್ರ ಇರುವುದಿಲ್ಲ ನನಗೆ ಬೆಂಬಲ ನೀಡಿದ ಅಭ್ಯರ್ಥಿಗಳು ಕೊನೆ ಕ್ಷಣದಲ್ಲಿ ನನ್ನ ಕೈ ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷ ಮಾತ್ರವಲ್ಲ ಇಡೀ ರಾಜಕೀಯದಿಂದ ದೂರ ಉಳಿಯುತ್ತಿದ್ದೇನೆ, ಎರಡು ಬಾರಿ ಶಿವಳ್ಳಿ ಅವರಿಗಾಗಿ ಸ್ಥಾನ ಬಿಟ್ಟು ಕೊಟ್ಟಿದ್ದೆ, ಆದರೆ ಇಂದು ನನ್ನ ತಾಲೂಕಿನ ಹಲವಾರು ಕಾಂಗ್ರೆಸ್ ನಾಯಕರು ನನ್ನ ಕೈ ಬಿಟ್ಟಿದ್ದಾರೆ. ಇದರಿಂದ ಬೇಸತ್ತು ಇನ್ನು ಮುಂದೆ ರಾಜಕೀಯ ದಲ್ಲಿ ನನ್ನ ಪಾತ್ರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇನ್ನು ಇದಕ್ಕೆ ಕಾರ್ಯಕರ್ತರು ಬಾರಿ ಆಕ್ರೋಶವನ್ನು ಹೊರ ಹಾಕಿದ್ದು ಕಾಂಗ್ರೆಸ್ ಪಕ್ಷಕ್ಕೆ ಉಪ ಚುನಾವಣೆಯ ಹೊಸ್ತಿಲಲ್ಲಿ ನುಂಗಲಾರದ ತುತ್ತಾಗಿ ಪರಿಣಮಿಸಿದೆ.