ಕಾಂಗ್ರೆಸ್ ಗೆ ಬಿಗ್ ಶಾಕ್, ಡಿಕೆಶಿ ಮಾತಿಗೂ ಕ್ಯಾರೇ ಎನ್ನದ ಬಂಡಾಯ ನಾಯಕರು.

ಕಾಂಗ್ರೆಸ್ ಗೆ ಬಿಗ್ ಶಾಕ್, ಡಿಕೆಶಿ ಮಾತಿಗೂ ಕ್ಯಾರೇ ಎನ್ನದ ಬಂಡಾಯ ನಾಯಕರು.

ದೇಶದ ಭವಿಷ್ಯವನ್ನು ರೂಪಿಸುವ ಲೋಕಸಭಾ ಚುನಾವಣೆಗೆ ಈಗಾಗಲೇ ಕರ್ನಾಟಕದಲ್ಲಿ ಮುಗಿದಿದ್ದು, ದೇಶದ ಹಾಗೂ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕದ 2 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆ ಇನ್ನಿಲ್ಲದ ಕುತೂಹಲ ಕೆರಳಿಸುತ್ತಾ ಮುಂದೆ ಸಾಗುತ್ತಿದೆ. ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಭಿನ್ನಮತಗಳು ಕಾಣಿಸಿಕೊಂಡಿವೆ ಆದರೆ ಕೇವಲ ನಿನ್ನೆಯಷ್ಟೇ ಯಡಿಯೂರಪ್ಪನವರು ಕೇವಲ ಒಂದೇ ಒಂದು ಸಭೆಯಲ್ಲಿ ಭಿನ್ನಮತ ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಮತ್ತಷ್ಟು ಭಿನ್ನಮತ ಭುಗಿಲೆದ್ದಿದ್ದು, ಬಂಡಾಯ ಅಭ್ಯರ್ಥಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಕುಂದಗೋಳ ವಿಧಾನಸಭಾ ಉಪಚುನಾವಣೆಯಲ್ಲಿ ಮೊದಲಿನಿಂದಲೂ ದಿವಂಗತ ಸಚಿವ ಶಿವಳ್ಳಿ ರವರ ಧರ್ಮಪತ್ನಿ ಕುಸುಮ ಅವರಿಗೆ ಟಿಕೆಟ್ ನೀಡುವ ಬಗ್ಗೆ ಅಸಮಾಧಾನದ ಮಾತುಗಳು ಕೇಳಿಬರುತ್ತಿದ್ದವು. ಹಲವಾರು ವರ್ಷಗಳಿಂದ ಪಕ್ಷಕ್ಕೆ ದುಡಿದ ಕಾರ್ಯಕರ್ತರನ್ನು ಹಾಗೂ ನಾಯಕರನ್ನು ಪಕ್ಕಕ್ಕೆ ಇಟ್ಟು ಕುಟುಂಬ ರಾಜಕಾರಣವನ್ನು ಕಾಂಗ್ರೆಸ್ ಪಕ್ಷವು ಎತ್ತಿ ಹಿಡಿಯುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಬಿಜೆಪಿ ಪಕ್ಷವೂ ಸಹ ಇದೇ ರೀತಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿತ್ತು. ಆದರೂ ಸಹ ಬಿಜೆಪಿ ಪಕ್ಷದಲ್ಲಿ ಭಿನ್ನಮತ ಗಳು ಅಷ್ಟಾಗಿ ಕಾಣಸಿಗಲಿಲ್ಲ ಆದರೆ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಡಿಕೆ ಶಿವಕುಮಾರ್ ಅವರು ಉಸ್ತುವಾರಿ ಯಾಗಿ ನೇಮಕವಾದ ಮೇಲೂ ಸಹ ಭಿನ್ನಮತ ಶಮನ ಗೊಂಡಿಲ್ಲ.

ಹಲವಾರು ವರ್ಷಗಳಿಂದ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ನೆಲೆಯೂರುವಂತೆ ಮಾಡಿದ್ದ ಶಿವಾನಂದ ಬೆಂತೂರು ರವರು ಇದೀಗ ಕುಸುಮಾ ರವರಿಗೆ ಟಿಕೆಟ್ ನೀಡಿನ ಕಾರಣ ಅಸಮಾಧಾನಗೊಂಡಿದ್ದಾರೆ. ಡಿಕೆ ಶಿವಕುಮಾರ್ ಅವರ ಮಾತಿಗೂ ಕ್ಯಾರೇ ಎನ್ನದ ಶಿವಾನಂದ ಅವರು ಇದೀಗ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಶಿವಾನಂದ ರವರು ಇಂದು ತಮ್ಮ ಅಪಾರ ಬೆಂಬಲಿಗರೊಂದಿಗೆ ತಹಸಿಲ್ದಾರ ಕಚೇರಿಗೆ ತೆರಳಿ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಾರಿ ಜನ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿರುವ ಶಿವಾನಂದ ರವರು ಕಾಂಗ್ರೆಸ್ ಪಕ್ಷಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದ್ದಾರೆ.

ಒಟ್ಟಿನಲ್ಲಿ ಮೇ 19ರಂದು ಎರಡು ಕ್ಷೇತ್ರಗಳ ಉಪಚುನಾವಣೆ ನಡೆಯಲಿದ್ದು, ದಿನೇದಿನೇ ಚುನಾವಣಾ ಕಣ ರಂಗೇರುತ್ತಿದೆ. ದೋಸ್ತಿಗಳ ಸಂಖ್ಯಾ ಬಲವನ್ನು ಕುಗ್ಗಿಸಲು ಬಿಜೆಪಿ ಪಕ್ಷವು 2 ಕ್ಷೇತ್ರಗಳನ್ನು ಗೆದ್ದು ತೋರಿಸಬೇಕು ಎಂದು ಪಣತೊಟ್ಟಿದ್ದಾರೆ, ಕಾಂಗ್ರೆಸ್ ಪಕ್ಷವು ಜೆಡಿಎಸ್ ಪಕ್ಷದ ಜೊತೆ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ಈಗಾಗಲೇ ಹಲವಾರು ಬಂಡಾಯ ಶಾಸಕರು ಬಿಜೆಪಿ ಪಕ್ಷಕ್ಕೆ ವಲಸೆ ಹೋಗುವ ಸೂಚನೆ ನೀಡಿದ್ದಾರೆ, ಇಂತಹ ಸಂದಿಗ್ಧ ಸಮಯದಲ್ಲಿ ದೋಸ್ತಿ ಪಕ್ಷಗಳು ಈ ಎರಡೂ ಕ್ಷೇತ್ರಗಳನ್ನು ಗೆಲ್ಲಲೇ ಬೇಕಾದ ಪರಿಸ್ಥಿತಿ ಎದುರಾಗಿದೆ ಇತ್ತ ಬಿಜೆಪಿ ಪಕ್ಷವು 2 ಕ್ಷೇತ್ರಗಳನ್ನು ಗೆದ್ದು ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯಲು ಹವಣಿಸುತ್ತಿದೆ.