ಡಿಕೆಶಿಗೆ ಮರ್ಮಾಘಾತ, ಸರ್ಜಿಕಲ್ ಸ್ಟ್ರೈಕ್ ನಡೆಸಿ ನೂರಾರು ಕೋಟಿ ವಶ ಪಡಿಸಿಕೊಂಡ ಐ ಟಿ

ಡಿಕೆಶಿಗೆ ಮರ್ಮಾಘಾತ, ಸರ್ಜಿಕಲ್ ಸ್ಟ್ರೈಕ್ ನಡೆಸಿ ನೂರಾರು ಕೋಟಿ ವಶ ಪಡಿಸಿಕೊಂಡ ಐ ಟಿ

ರಾಜ್ಯ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗುವ ಅಂತಹ ಘಟನೆ ನಡೆದಿದೆ. ಡಿಕೆ ಶಿವಕುಮಾರ್ ಅವರಿಗೆ ಸೇರಿದ 500 ಕೋಟಿ ಆಸ್ತಿಯನ್ನು ಐಟಿ ಇಲಾಖೆ ಜಪ್ತಿ ಮಾಡಿ ಆದೇಶ ಹೊರಡಿಸಿದೆ. ಇದಕ್ಕೆ ಪ್ರತಿಕ್ರಯಿಸಿರುವ ಡಿಕೆ ಶಿವಕುಮಾರ್ ಅವರ ಆಪ್ತ ಮೂಲಗಳು ರಾಜ್ಯದಲ್ಲಿ ಯಾವ ರಾಜಕಾರಣಿಗಳು ಬೇನಾಮಿ ಆಸ್ತಿ ಮಾಡಿಲ್ಲ ಎಂಬಂತೆ ಡಿಕೆ ಶಿವಕುಮಾರ್ ಅವರನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಕ್ರಯಿಸಿರುವ ವಿರೋಧ ಪಕ್ಷದ ನಾಯಕರು ತಪ್ಪು ಮಾಡಿದ್ದಾರೆ ಎಂದು ಒಪ್ಪಿಕೊಂಡಂತಾಗಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ವಿಷಯದ ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ಡಿಕೆ ಶಿವಕುಮಾರ್ ಅವರು ತಮ್ಮ ತಾಯಿ ಆಸ್ತಿಯನ್ನು ಅಭಿವೃದ್ಧಿಗೊಳಿಸಲು ಶೋಭಾ ಡೆವಲಪರ್ಸ್ ಸಂಸ್ಥೆಯ ಜೊತೆ ಡಿಕೆ ಶಿವಕುಮಾರ್ ಅವರ ತಾಯಿ ಗೌರಮ್ಮ ರವರ ಹೆಸರಿನಲ್ಲಿ ಜಂಟಿ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಒಪ್ಪಂದದ ಮೂಲಕ ಡಿಕೆ ಶಿವಕುಮಾರ್ ಅವರ ತಾಯಿ ಗೌರಮ್ಮ ರವರ ಒಟ್ಟು ಆಸ್ತಿ ಮೌಲ್ಯ 235 ಕೋಟಿ ಎಂದು ದಾಖಲೆಗಳಲ್ಲಿ ತೋರಿಸಲಾಗಿದೆ. ಆದರೆ ಮಾರುಕಟ್ಟೆಯ ಅತಿ ಕಡಿಮೆ ಯ ಬೆಲೆಯನ್ನು ವಿಚಾರಣೆ ನಡೆಸಿದಾಗ ಕನಿಷ್ಠ ಇದರ ಬೆಲೆ 500 ಕೋಟಿ ಎಂಬ ಶಾಕಿಂಗ್ ವರದಿ ಬಹಿರಂಗಗೊಂಡಿದ್ದು, ಡಿಕೆ ಶಿವಕುಮಾರ್ ಅವರು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ.

ಡಿಕೆ ಶಿವಕುಮಾರ್ ಅವರು ಹೊಂದಿದ್ದಾರೆ ಎನ್ನಲಾಗಿರುವ ಹಲವಾರು ಬೇನಾಮಿ ಆಸ್ತಿ ಗಳ ತನಿಖೆಯನ್ನು ಐಟಿ ಇಲಾಖೆಯು ನಡೆಸುತ್ತಿದ್ದು, ಡಿಕೆ ಶಿವಕುಮಾರ್ ಅವರ ತಾಯಿ ಗೌರಮ್ಮ ರವರಿಗೆ ಸೇರಲಾಗಿದೆ ಎನ್ನಲಾಗಿರುವ ಇನ್ನೂ 20 ಎಕರೆ ಭೂಮಿಯ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಇನ್ನು ಗೌರಮ್ಮ ರವರಿಗೆ ಇದು ಐಟಿ ಇಲಾಖೆಯಿಂದ ಎರಡನೇ ಬಾರಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಐಟಿ ಇಲಾಖೆಯು ಸ್ಪಷ್ಟಪಡಿಸಿದೆ.

ಇದರ ಬಗ್ಗೆ ಖುದ್ದು ಐಟಿ ಇಲಾಖೆಯ ಪ್ರಧಾನ ಮುಖ್ಯ ಕಮಿಷನರ್ ಬಾಲಕೃಷ್ಣರವರು ಮಾಹಿತಿಯನ್ನು ಹೊರ ಹಾಕಿದ್ದು ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಸಂಪುಟ ಸಚಿವ ದರ್ಜೆಗೆ ಸೇರಿದ ಒಬ್ಬ ನಾಯಕರ 75 ಕೋಟಿ ಆಸ್ತಿಯನ್ನು ಇದೀಗ ಜಪ್ತಿ ಮಾಡಲಾಗಿದ್ದು, ಒಟ್ಟು 395 ಕೋಟಿ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಒಟ್ಟು 36 ಫಲಾನುಭವಿಗಳ 92 ಆಸ್ತಿ ವಿವರಗಳನ್ನು ಬಾಲಕೃಷ್ಣರವರು ಬಿಡುಗಡೆಗೊಳಿಸಿ, ಇನ್ನು ಇಪ್ಪತ್ತು ಎಕರೆ ಜಮೀನಿನ ದಾಖಲಾತಿಗಳನ್ನು ಕೇಳಿದ್ದೇವೆ, ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ವಿಷಯವನ್ನು ಖುದ್ದು ಪ್ರಜಾವಾಣಿ ಪತ್ರಿಕೆ ಪ್ರಕಟಣೆ ಗೊಳಿಸಿದ್ದು ಬೇರೆ ಯಾವ ಮಾಧ್ಯಮಗಳಿಗೂ ಈ ಸುದ್ದಿ ಕಾಣಿಸುತ್ತಿಲ್ಲವೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.