ಹೊರಬಿದ್ದ ಗುಪ್ತಚರ ಇಲಾಖೆ ಮಾಹಿತಿ, ಶಾಕ್ ಆಗಿ ಸಿಡಿದೆದ್ದ ಕುಮಾರಸ್ವಾಮಿ

ಹೊರಬಿದ್ದ ಗುಪ್ತಚರ ಇಲಾಖೆ ಮಾಹಿತಿ, ಶಾಕ್ ಆಗಿ ಸಿಡಿದೆದ್ದ ಕುಮಾರಸ್ವಾಮಿ

ಇಡೀ ಕರ್ನಾಟಕದ ಲೋಕಸಭಾ ಚುನಾವಣೆಯ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದು ಮಂಡ್ಯ ಲೋಕಸಭಾ ಕ್ಷೇತ್ರ. ಯಾಕೆಂದರೆ ಇದೇ ಮೊಟ್ಟಮೊದಲ ಬಾರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಪುತ್ರ ನಿಖಿಲ್ ಕುಮಾರಸ್ವಾಮಿ ರವರು ದಿವಂಗತ ಕನ್ನಡಿಗರ ಹೆಮ್ಮೆಯ ಅಂಬರೀಶ್ ರವರ ಧರ್ಮಪತ್ನಿ ಸುಮಲತಾ ರವರ ನಡುವೆ ಚುನಾವಣೆಯಲ್ಲಿ ನೇರ ಹಣಾಹಣಿ ಎದುರಾಗಿದೆ. ಹಲವಾರು ತಂತ್ರಗಳ ಮೂಲಕ ಹೇಗಾದರೂ ಮಾಡಿ ಪುತ್ರನನ್ನು ಗೆಲ್ಲಿಸಬೇಕೆಂದು ಕುಮಾರಸ್ವಾಮಿ ರವರು ಪಣ ತೊಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇದೀಗ ಚುನಾವಣೆ ಮುಗಿದ ಬಳಿಕ ಮತ್ತೊಮ್ಮೆ ಕುಮಾರಸ್ವಾಮಿ ರವರು ಗುಪ್ತಚರ ಇಲಾಖೆಯ ಮಾಹಿತಿ ಯನ್ನು ಕಂಡು ಶಾಕ್ ಆಗಿದ್ದಾರೆ.

ಮೊದಲಿನಿಂದಲೂ ಮಂಡ್ಯ ಜಿಲ್ಲೆಯಲ್ಲಿ ಸುಮಲತಾ ರವರಿಗೆ ಭಾರಿ ಜನ ಬೆಂಬಲ ಕೇಳಿ ಬಂದಿತ್ತು ಆದರೆ ಆ ಜನಬೆಂಬಲ ಎಷ್ಟರಮಟ್ಟಿಗೆ ಮತಗಳಾಗಿ ಬದಲಾಗಿದೆ ಎಂಬುದು ಇಲ್ಲಿಯವರೆಗೂ ಯಾರಿಗೂ ತಿಳಿದಿಲ್ಲ ಇಂತಹ ಸಮಯದಲ್ಲಿ ಕುಮಾರಸ್ವಾಮಿ ರವರು ಗುಪ್ತಚರ ಇಲಾಖೆಯ ನ್ನು ಬಳಸಿಕೊಂಡು ನಡೆಸಿದ ಸಮೀಕ್ಷೆಯಲ್ಲಿ ನಿಖಿಲ್ ಕುಮಾರಸ್ವಾಮಿ ರವರಿಗೆ ಈ ಬಾರಿ ಹಿನ್ನಡೆಯಾಗುತ್ತದೆ ಎಂಬ ಮಾಹಿತಿ ಹೊರ ಬಿದ್ದಿದೆ. ಇದರಿಂದ ಸಾಮಾನ್ಯವಾಗಿ ಕುಮಾರಸ್ವಾಮಿ ರವರು ತಲೆ ಕೆಡಿಸಿಕೊಂಡಿದ್ದು ಶಾಸಕರ ವಿರುದ್ಧ ಗುಡುಗಿದ್ದಾರೆ. ವಿಷಯದ ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ಚುನಾವಣೆ ಮುಗಿದ ಬಳಿಕ ಒಂದು ವಾರದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಗುಪ್ತಚರ ಇಲಾಖೆಯನ್ನು ಬಳಸಿಕೊಂಡು ಚುನಾವಣಾ ಫಲಿತಾಂಶದ ಬಗ್ಗೆ ಸಮೀಕ್ಷೆಯನ್ನು ನಡೆಸಿದ್ದು ಮಂಡ್ಯ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರಗಳಲ್ಲಿ ನಿಖಿಲ್ ಕುಮಾರಸ್ವಾಮಿ ರವರಿಗೆ ಭಾರಿ ಹಿನ್ನಡೆ ಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಹೊರ ಬಿದ್ದಿದೆ. ಗುಪ್ತಚರ ಇಲಾಖೆ ಸಮೀಕ್ಷೆಯ ಪ್ರಕಾರ ಮಂಡ್ಯ ಲೋಕಸಭಾ ಕ್ಷೇತ್ರದ ಮಳವಳ್ಳಿ, ಮದ್ದೂರು ಮತ್ತು ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಭಾರೀ ಹಿನ್ನಡೆ ಆಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಅನ್ನದಾನಿ ಪ್ರತಿನಿಧಿಸುವ ಮಳವಳ್ಳಿ ಕ್ಷೇತ್ರ, ಸಾರಿಗೆ ಸಚಿವ ಡಿಸಿ ತಮ್ಮಣ್ಣ ಪ್ರತಿನಿಧಿಸುವ ಮದ್ದೂರು ಹಾಗೂ ಸಹಕಾರ ಸಚಿವರ ಸಂಸದೀಯ ಕಾರ್ಯದರ್ಶಿ ಎನ್ ಶ್ರೀನಿವಾಸ್ ಪ್ರತಿನಿಧಿಸುವ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್ ರವರು ಹಿನ್ನಡೆ ಅನುಭವಿಸುವುದು ಖಚಿತವಾಗಿದೆ. ಈ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಅವರು ಮೂರು ಮಂದಿಗೂ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ ಒಟ್ಟಾರೆ ಚುನಾವಣಾ ಫಲಿತಾಂಶ ಬರುವ ಮುನ್ನವೇ ಪುತ್ರನಿಗೆ ಹಿನ್ನಡೆಯಾಗಬಹುದಾದ ಕ್ಷೇತ್ರದ ಶಾಸಕರಿಗೆ ಕ್ಲಾಸ್ ತೆಗೆದುಕೊಂಡಿರುವ ಮುಖ್ಯಮಂತ್ರಿಗಳು ಒಂದು ವೇಳೆ ನಿಖಿಲ್ ಕುಮಾರಸ್ವಾಮಿ ಅವರು ಸೋತರೆ ಮುಖಂಡರಿಗೆ ಇನ್ ಯಾವ ರೀತಿ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.