ವಿಶ್ವ ಕಪ್ ಗೂ ಮುನ್ನ ಬಿಗ್ ಶಾಕ್, ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದ ಸ್ಟಾರ್ ಆಟಗಾರ

ಈಗಾಗಲೇ ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳ ಕಣ್ಣು ಭಾರತದ ಹೆಮ್ಮೆಯ ಕ್ರಿಕೆಟ್ ಲೀಗ್ ಆದ ಐಪಿಎಲ್ ಕ್ರಿಕೆಟ್ ಲೀಗ್ ನ ಮೇಲಿದೆ. ಈ ವರ್ಷದ ಐಪಿಎಲ್ ಹಾಗೂ ವಿಶ್ವ ಕಪ್ 2 ಇಲಿಗಳು ಒಂದರ ಹಿಂದೆ ಒಂದು ನಡೆಯುವುದರಿಂದ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದಂತೆ ಭಾಸವಾಗುತ್ತಿದೆ. ಇನ್ನು ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳು ಆಂಗ್ಲರ ನಾಡಿನಲ್ಲಿ ನಡೆಯುವ ವಿಶ್ವಕಪ್ ಕಾಗಿ ತುದಿಗಾಲಲ್ಲಿ ಕಾದು ಕುಳಿತಿದ್ದಾರೆ. ಇಂತಹ ಸಮಯದಲ್ಲಿ ವಿಶ್ವ ಕಪ್ ಆಯೋಜಿಸಿರುವ ಆಂಗ್ಲರಿಗೆ ಅತಿ ದೊಡ್ಡ ಶಾಕ್ ಎದುರಾಗಿದೆ. ಉದ್ದೀಪನಾ ಮದ್ದು ಸೇವಿಸಿದ ಪ್ರಕರಣದಡಿಯಲ್ಲಿ ಆಂಗ್ಲರ ಸ್ಟಾರ್ ಆಟಗಾರ ಸಿಕ್ಕಿಬಿದ್ದಿದ್ದಾರೆ ಹಾಗೂ ವಿಶ್ವಕಪ್ ತಂಡದಿಂದ ಹೊರಗುಳಿಯುವ ಸಾಧ್ಯತೆಗಳು ಹೆಚ್ಚಾಗಿವೆ.

ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಹೇಲ್ಸ್ ರವರು ಮುಂದಿನ ತಿಂಗಳ ಎರಡನೆಯ ವಾರದವರೆಗೂ ಕ್ರಿಕೆಟ್ ಚಟುವಟಿಕೆಗಳಿಂದ ದೂರ ಇರಬೇಕು ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಘೋಷಿಸಿದೆ. ಒಟ್ಟು 21ನೇ ದಿನಗಳ ಕಾಲ ನಿಷೇಧಕ್ಕೆ ಗುರಿಯಾಗಿರುವ ಆರಂಭಿಕ ಆಟಗಾರ ಹೇಲ್ಸ್ ಅವರು ದೊಡ್ಡ ಮೊತ್ತದ ದಂಡ ಪಾವತಿಸಬೇಕಾದ ಸಾಧ್ಯತೆ ಎದುರಾಗಿದೆ, ಇಷ್ಟು ಸಾಲದು ಎಂಬಂತೆ ಮುಂದಿನ ವಿಶ್ವಕಪ್ ತಂಡದಿಂದ ಹೇಲ್ಸ್ ಅವರನ್ನು ದೂರ ಇಡುವುದು ಇದೀಗ ಬಹುತೇಕ ಖಚಿತವಾಗಿದೆ. ಕೇವಲ ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Facebook Comments

Post Author: Ravi Yadav