ಉಪಚುನಾವಣೆ- ದೋಸ್ತಿ ಗಳಲ್ಲಿ ಬುಗಿಲೆದ್ದ ಬಾರಿ ಭಿನ್ನಮತ, ಇಬ್ಬರ ಜಗಳ ಬಿಜೆಪಿಗೆ ಲಾಭ??

ಉಪಚುನಾವಣೆ- ದೋಸ್ತಿ ಗಳಲ್ಲಿ ಬುಗಿಲೆದ್ದ ಬಾರಿ ಭಿನ್ನಮತ, ಇಬ್ಬರ ಜಗಳ ಬಿಜೆಪಿಗೆ ಲಾಭ??

ಬಿಜೆಪಿ ಪಕ್ಷವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೂರಕ್ಕೂ ಹೆಚ್ಚು ಸೀಟುಗಳನ್ನು ಪಡೆದು ಕೊಂಡರು ಸಹ ಸರ್ಕಾರ ರಚಿಸುವಲ್ಲಿ ವಿಫಲವಾಗಿತ್ತು. ಇನ್ನು ಸಂಪೂರ್ಣ ಫಲಿತಾಂಶ ಹೊರಬೀಳುವ ಮುನ್ನವೇ ಕಾಂಗ್ರೆಸ್ ಪಕ್ಷವು ಜೆಡಿಎಸ್ ಪಕ್ಷದ ಬಾಗಿಲಿಗೆ ಹೋಗಿ ಮೈತ್ರಿ ಮಾಡಿಕೊಳ್ಳುವಂತೆ ಕೋರಿಕೊಂಡು, ಮುಖ್ಯಮಂತ್ರಿ ಸ್ಥಾನವನ್ನು ಕೇವಲ 37 ಸೀಟು ಗಳನ್ನು ಪಡೆದುಕೊಂಡ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲು ಒಪ್ಪಿಕೊಂಡು, ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇಟ್ಟಿತ್ತು. ಪಕ್ಷದ ಹೈಕಮಾಂಡ್ ದೋಸ್ತಿ ಮಾಡಿಕೊಂಡರು ಸಹ ಹಲವಾರು ಜಿಲ್ಲೆಗಳಲ್ಲಿ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರು ಇಂದಿಗೂ ಮೈತ್ರಿಯನ್ನು ಒಪ್ಪದೇ ಬದ್ಧ ವೈರಿಗಳಂತೆ ಕಾದಾಡುತ್ತಿದ್ದಾರೆ.

ಮೊದಲು ಎಲ್ಲವೂ ಚೆನ್ನಾಗಿದ್ದ ರೀತಿ ಕಾಣಸಿಗುತ್ತಿದ್ದ ದೋಸ್ತಿ ಸರ್ಕಾರ ತದನಂತರ ಭಾರಿ ಸವಾಲುಗಳನ್ನು ಎದುರಿಸಿ ಕೊನೆಗೂ ಸರಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಅದೇಗೋ ಕೊನೆಗೂ ಎರಡು ಸರ್ಕಾರಗಳು ಹಲವಾರು ಭಿನ್ನಮತಗಳ ನಡುವೆ ಲೋಕಸಭಾ ಚುನಾವಣೆಯನ್ನು ಈಗಾಗಲೇ ಮುಗಿಸಿ ಬಿಟ್ಟಿವೆ. ಇನ್ನು ಕೇವಲ ಪಲಿತಾಂಶಕ್ಕಾಗಿ ಎರಡು ಪಕ್ಷಗಳು ಕಾತರದಿಂದ ಕಾದು ಕುಳಿತಿವೆ, ಈ ಎಲ್ಲಾ ವಿದ್ಯಮಾನಗಳ ನಡುವೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ನಡೆಯುವ ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತೊಮ್ಮೆ ಭಿನ್ನಮತ ಭುಗಿಲೆದ್ದಿದೆ.

ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿಯುವುದು ಖಚಿತ ವಾಗಿತ್ತು. ಎರಡು ಪಕ್ಷದ ಹಿರಿಯ ನಾಯಕರು ಮಾತನಾಡಿಕೊಂಡು ಕುಂದಗೋಳ ವಿಧಾನಸಭಾ ಕ್ಷೇತ್ರವನ್ನು ಮೈತ್ರಿಯ ಧರ್ಮದಂತೆ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದರು. ಆದರೆ ಇದೀಗ ಜೆಡಿಎಸ್ ಪಕ್ಷದ ನಾಯಕರಾಗಿರುವ ಹಜರತ್ ಅಲಿ ಜೊಡಮನಿ ಅವರು ಭಿನ್ನಮತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇಂದು ಜೆಡಿಎಸ್ ಅಭ್ಯರ್ಥಿ ಹಜರತ್ ಅಲಿ ಜೋಡಮನಿ ರವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಣದಲ್ಲಿ ಇದ್ದರೂ ಸಹ ನಾಮಪತ್ರ ಸಲ್ಲಿಸಿ ಬಂಡಾಯದ ಬೃಹತ್ ಸೂಚನೆ ನೀಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದರೂ ಸಹ ಪ್ರಚಾರದಲ್ಲಿ ಎರಡು ಪಕ್ಷಗಳು ಒಂದಾಗಿರಲಿಲ್ಲ. ಇದೀಗ ಉಪ ಚುನಾವಣೆಯ ಮೇಲೂ ಸಹ ಲೋಕಸಭಾ ಚುನಾವಣೆಯ ಕರಿ ನೆರಳು ಬಿದ್ದಿದ್ದು, ಜೆಡಿಎಸ್ ಪಕ್ಷದ ನಾಯಕರು ಈ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಲು ಸಿದ್ಧರಿಲ್ಲ. ಆದರೆ ಜೆಡಿಎಸ್ ಪಕ್ಷದ ಹೈಕಮಾಂಡ್ ಈ ಕ್ಷೇತ್ರವನ್ನು ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಈ ಎಲ್ಲಾ ನಡುವಳಿಕೆ ಗಳಿಂದ ದೋಸ್ತಿ ಗಳಲ್ಲಿ ಮತ್ತೊಮ್ಮೆ ಭಿನ್ನಮತ ಹಾಗೂ ಗೊಂದಲ ಕಾಣಿಸಿಕೊಂಡಿದ್ದು ಇದರ ಸಂಪೂರ್ಣ ಲಾಭವನ್ನು ಬಿಜೆಪಿ ಪಕ್ಷ ಒಂದು ವೇಳೆ ಪಡೆದುಕೊಂಡಲ್ಲಿ ಮತ್ತೊಂದು ವಿಧಾನಸಭಾ ಕ್ಷೇತ್ರ ಬಿಜೆಪಿ ಪಕ್ಷದ ತೆಕ್ಕೆಗೆ ಸೇರಲಿದೆ.