ಮೋದಿ ಚಿತ್ರದ ಪರ ನಿಂತಿದ್ದ ಕ್ಕಾಗಿ ಕಾಜಲ್ ಅಗರ್ವಲ್ ಬ್ಯಾನ್? ಹೆಚ್ಚಾದ ಪರ-ವಿರೋಧ

ಬಹುಭಾಷಾ ಖ್ಯಾತ ನಟಿ ಕಾಜಲ್ ಅಗರ್ವಾಲ್ ರವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ರಾಜಕೀಯ ಹಾಗೂ ಸಿನಿಮಾ ವಿಷಯದಲ್ಲಿ ಸುದ್ದಿ ಮಾಡಿರುವ ಕಾಜಲ್ ಅಗರ್ವಾಲ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಹಲವರಿಂದ ಟೀಕೆಗಳಿಗೆ ಹಾಗೂ ಹಲವರಿಂದ ಪ್ರಶಂಸೆ ಗಳಿಗೆ ಗುರಿಯಾಗಿದ್ದಾರೆ. ಬಹು ಭಾಷಾ ನಟಿಯಾಗಿ ಮಿಂಚುತ್ತಿರುವ ಕಾಜಲ್ ಅಗರ್ವಾಲ್ ರವರು ತೆಲುಗು ಹಾಗೂ ತಮಿಳಿನಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಈಗಾಗಲೇ ಹಲವಾರು ಟಾಪ್ ನಟರ ಜೊತೆ ನಟಿಸಿರುವ ಕಾಜಲ್ ಅಗರ್ವಾಲ್ ರವರು ತಮಿಳಿನಲ್ಲಿಯೂ ಸಹ ಬಾರಿ ಮೋಡಿ ಮಾಡಿದ್ದಾರೆ.

ಆದರೆ ಇದೀಗ ಭಾರಿ ಅಭಿಮಾನಿ ಬಳಗವನ್ನು ಹೊಂದಿರುವ ಕಾಜಲ್ ಅಗರ್ವಾಲ್ ಅವರನ್ನು ಬ್ಯಾನ್ ಮಾಡಬೇಕು ಎಂದು ಕೆಲವರು ಒತ್ತಾಯ ಮಾಡುತ್ತಿದ್ದಾರೆ, ಇನ್ನೂ ಕೆಲವರು ಕಾಜಲ್ ಅಗರ್ವಾಲ್ ರವರ ಪರ ನಿಂತಿದ್ದಾರೆ ಯಾಕೆಂದರೆ ಇತ್ತೀಚೆಗಷ್ಟೇ ತಮ್ಮ ಗೆಳೆಯ ವಿವೇಕ್ ಒಬಿರಾಯ್ ನಟಿಸಿದ ಮೋದಿ ಜೀವನಾಧಾರಿತ ಚಿತ್ರಕ್ಕೆ ಕಾಯುತ್ತಿದ್ದೇನೆ, ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹೊರಹಾಕಿದ್ದರು. ಇದರಿಂದ ಸಿಟ್ಟಿಗೆದ್ದ ಹಲವಾರು ವಿರೋಧ ಪಕ್ಷಗಳ ಬೆಂಬಲಿಗರು ಕಾಜಲ್ ಅಗರ್ವಾಲ್ ಅವರನ್ನು ಬ್ಯಾನ್ ಮಾಡಬೇಕು ಎಂದರೆ, ಇನ್ನುಳಿದ ನರೇಂದ್ರ ಮೋದಿ ಬೆಂಬಲಿಗರು ಹಾಗೂ ಚಿತ್ರರಸಿಕರು ಕಾಜಲ್ ಅಗರ್ವಾಲ್ ರವರ ಪರ ನಿಂತಿದ್ದಾರೆ. ಕೇವಲ ಒಂದು ಪೋಸ್ಟ್ ನಿಂದ ಸದ್ದು ಮಾಡುತ್ತಿರುವ ಕಾಜಲ್ ಅಗರ್ವಾಲ್ ರವರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ.

Facebook Comments

Post Author: RAVI