ಬಚ್ಚೇಗೌಡ ರಿಗೆ ಬಂಪರ್, ಸುಧಾಕರ್ ಬೆಂಬಲಿಗರಿಂದ ಬಿಜೆಪಿಗೆ ಮತ

ಬಚ್ಚೇಗೌಡ ರಿಗೆ ಬಂಪರ್, ಸುಧಾಕರ್ ಬೆಂಬಲಿಗರಿಂದ ಬಿಜೆಪಿಗೆ ಮತ

ದೇಶದ ಪ್ರಮುಖ ದಿಕ್ಸೂಚಿ ಎಂದೆನಿಸಿಕೊಂಡಿರುವ 2019 ರ ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಇಂದು ಕರ್ನಾಟಕದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಮತದಾನ ಈಗಾಗಲೇ ಮುಗಿದಿದೆ. ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಲ್ಲೂ ದಾಖಲೆಯ ಪ್ರಮಾಣದಲ್ಲಿ ಮತದಾನ ವಾಗಿದ್ದು ಹಲವಾರು ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರಗಳಲ್ಲಿ ಈಗಾಗಲೇ ದಾಖಲಾಗಿದೆ. ಮೇ 23ರಂದು ಈ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು ಸೋಲು ಗೆಲುವಿನ ಲೆಕ್ಕಾಚಾರ ಗಳು ಈಗಾಗಲೇ ಆರಂಭಗೊಂಡಿದೆ. ಈತನ್ಮಧ್ಯೆ ಇಂದು ಚಿಕ್ಕಬಳ್ಳಾ ಪುರದಲ್ಲಿ ನಡೆದ ಲೋಕಸಭಾ ಚುನಾವಣೆಯ ಮಹತ್ವದ ಸಂಗತಿಯೊಂದು ಹೊರ ಬಿದ್ದಿದೆ.

ದೋಸ್ತಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಾಲಿ ಸಂಸದ ವೀರಪ್ಪ ಮೊಯ್ಲಿ ರವರಿಗೆ ಕೊನೆಗೂ ಎಲ್ಲರೂ ಊಹಿಸಿದಂತೆ ಸುಧಾಕರ್ ಅವರ ಬೆಂಬಲಿಗರು ಕೈ ಕೊಟ್ಟಿದ್ದಾರೆ. ಕೇವಲ ಸುಧಾಕರ್ ಅವರ ಬೆಂಬಲಿಗರು ಮಾತ್ರವಲ್ಲದೆ  ಕಾಂಗ್ರೆಸ್ ಪಕ್ಷದಲ್ಲಿರುವ ಹಲವಾರು ಕಾಂಗ್ರೆಸ್ ನಾಯಕರು ವೀರಪ್ಪ ಮೊಯ್ಲಿ ರವರಿಗೆ ಕೈ ಕೊಟ್ಟು ಬಿಜೆಪಿ ಪಕ್ಷಕ್ಕೆ ಮತ ನೀಡಿ ದ್ದಾರೆ ಎಂಬ ಶಾಕಿಂಗ್ ಮಾಹಿತಿ ಇದೀಗ ಹೊರಬಿದ್ದಿದೆ. ಚುನಾವಣೆಗೂ ಮುನ್ನವೇ ತಿಳಿಸಿದರೆ ಸಂಧಾನ ಯತ್ನ ಗಳು ನಡೆಯುತ್ತವೆ ಎಂದು ಅನುಮಾನ ಪಟ್ಟು ಚುನಾವಣೆ ಮುಗಿದ ತಕ್ಷಣ ಕಾಂಗ್ರೆಸ್ ಬೆಂಬಲಿಗರು ಬಿಜೆಪಿಗೆ ಮತ ನೀಡಿರುವುದಾಗಿ ಗುರುತಿಸಿಕೊಂಡು ವೀರಪ್ಪ ಮೊಯ್ಲಿ ಅವರಿಗೆ ಶಾಕ್ ನೀಡಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮೊದಲಿನಿಂದಲೂ ಸುಧಾಕರ್ ಅವರ ಬೆಂಬಲಿಗರು ಹಾಗೂ ವೀರಪ್ಪ ಮೊಯಿಲಿ ರವರ ನಡುವೆ ಕಾಳಗ ನಡೆಯುತ್ತಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ವೀರಪ್ಪ ಮೊಯ್ಲಿ ರವರ ಮೇಲೆ ಸುಧಾಕರ್ ಬೆಂಬಲಿಗರು ಸಚಿವ ಸ್ಥಾನ ತಪ್ಪಿಸಿದ್ದು, ವಿಧಾನಸಭೆಯ ಚುನಾವಣೆಯಲ್ಲಿ ಸುಧಾಕರ್ ಅವರನ್ನು ಸೋಲಿಸುವ ಪ್ರಯತ್ನ ಪಟ್ಟಿದ್ದು, ಟಿಕೆಟ್ ತಪ್ಪಿಸಲು ಇನ್ನಿಲ್ಲದ ಸರ್ಕಸ್ಸು ಮಾಡಿದ್ದು ವೀರಪ್ಪ ಮೊಯಿಲಿ ರವರು ಎಂಬ ಆರೋಪಿಗಳನ್ನು ಮೊದಲಿನಿಂದಲೂ ಮಾಡುತ್ತಿದ್ದಾರೆ. ಇದೀಗ ಇದಕ್ಕೆ ತಕ್ಕ ಉತ್ತರವನ್ನು ನೀಡಿರುವ ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರು ಬಿಜೆಪಿ ಪಕ್ಷಕ್ಕೆ ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿ ದ್ದಾರೆ ಎಂಬ ಮಾಹಿತಿಯನ್ನು ಸ್ವತಹ ಕಾಂಗ್ರೆಸ್ ಪಕ್ಷದ ವಾಟ್ಸಪ್ ಗ್ರೂಪ್ ನಲ್ಲಿ ಹೊರಹಾಕಿದ್ದಾರೆ.

ಬಾರಿ ಜಿದ್ದಾಜಿದ್ದಿಯಿಂದ ಕೂಡಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಚ್ಚೇಗೌಡರಿಗೆ ಇದೀಗ ಹಲವಾರು ಕಾಂಗ್ರೆಸ್ ಪಕ್ಷಗಳ ಮತಗಳು ಬಿದ್ದಿದ್ದು, ಇದರಿಂದ ವೀರಪ್ಪ ಮೊಯ್ಲಿ ರವರ ಶೇಕಡವಾರು ಮತ ಪ್ರಮಾಣ ಭಾರಿ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ ಯಾಕೆಂದರೆ ಇಲ್ಲಿ ಹೊರಬಿದ್ದಿರುವುದು ಕೇವಲ ಕಾಂಗ್ರೆಸ್ ಮುಖಂಡರಾದ ಮತಗಳು ಮಾತ್ರ ಆದರೆ ಅವರ ಬೆಂಬಲಿಗರ ಮತಗಳ ಸಂಖ್ಯೆ ಯಾರಿಗೂ ತಿಳಿದಿಲ್ಲ ಆದ ಕಾರಣ ಇದೀಗ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಹೊಸ ಲೆಕ್ಕಾಚಾರ ಆರಂಭವಾಗಿದ್ದು, ಬಚ್ಚೇಗೌಡ ರಿಗೆ ಬೋನಸ್ ಮತಗಳು ಲಭಿಸಿದಂತಾಗಿದೆ.