ಶೋಭಕ್ಕ ಗೆ ಬಂಪರ್, ಮಧ್ವರಾಜ್ ಗೆ ಶಾಕ್- ರಾತ್ರೋ ರಾತ್ರಿ ನಡೆದಿದ್ದೇನು ಗೊತ್ತಾ??

  • 1.7K
    Shares

2019 ರ ಲೋಕಸಭಾ ಚುನಾವಣೆ ಪ್ರಕಟವಾದ ದಿನದಿಂದಲೂ ಪಕ್ಷಾಂತರ ಗಳ ಸಂಖ್ಯೆ ಹೆಚ್ಚಾಗಿದೆ, ಭಾರಿ ಕುತೂಹಲ ಮೂಡಿಸಿರುವ ಈ ಚುನಾವಣೆಯ ಎಷ್ಟರ ಮಟ್ಟಿಗೆ ಕಾವು ಎಬ್ಬಿಸುತ್ತಿದೆ ಎಂದರೆ ಚುನಾವಣೆಗೂ ಕೇವಲ 24 ಗಂಟೆಗಳು ಇರುವಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕೂಟಕ್ಕೆ ಭಾರೀ ದೊಡ್ಡ ಶಾಕ್ ಎದುರಾಗಿದೆ. ಟಿಕೆಟ್ ಸಿಕ್ಕಿದ ತಕ್ಷಣ ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ನೆಗೆದು ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಿಂದೂ ಫೈರ್ ಬ್ರಾಂಡ್ ಖ್ಯಾತಿಯ ಶೋಭಾ ಕರಂದ್ಲಾಜೆ ಅವರನ್ನು ಚುನಾವಣೆಯಲ್ಲಿ ಎದುರಿಸಲು ಸಿದ್ಧರಾಗಿದ್ದ ಪ್ರಮೋದ್ ಮಧ್ವರಾಜ್ ರವರಿಗೆ ಜೆಡಿಎಸ್ ಪಕ್ಷದ ಹಲವಾರು ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಕೈ ಕೊಟ್ಟಿದ್ದಾರೆ. ಚುನಾವಣೆಗೆ ಇನ್ನೂ 24 ಗಂಟೆಗಳು ಬಾಕಿ ಇರುವ ಸಮಯದಲ್ಲಿ ಮುಖಂಡರು ಈ ನಡೆ ದೋಸ್ತಿ ಗಳಲನ್ನು ಬಾರಿ ಚಿಂತೆಗೀಡು ಮಾಡಿದೆ.

ಕೇವಲ ಒಂದು ರಾತ್ರಿಯಲ್ಲಿ ಬಿಜೆಪಿ ಪಕ್ಷಕ್ಕೆ ಮತ್ತಷ್ಟು ಬೆಂಬಲ ಹೆಚ್ಚಾಗಿದ್ದು ಬರೋಬ್ಬರಿ ಚಿಕ್ಕಮಗಳೂರು ಕ್ಷೇತ್ರದ 80ಕ್ಕೂ ಹೆಚ್ಚು ಜೆಡಿಎಸ್ ಪಕ್ಷದ ನಾಯಕರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಕೇವಲ 24 ಗಂಟೆಗಳಲ್ಲಿ ತಮ್ಮ ನಿಲುವನ್ನು ಬದಲಿಸಿರುವ ಜೆಡಿಎಸ್ ಪಕ್ಷದ ನಾಯಕರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಪ್ರಮೋದ್ ಮಧ್ವರಾಜ್ ಅವರಿಗೆ ಬೆಂಬಲವನ್ನು ನೀಡಲಾರದೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಚುನಾವಣೆಗೂ ಮುನ್ನ ದೋಸ್ತಿ ಪಕ್ಷಗಳಿಗೆ ದೊಡ್ಡ ಶಾಕ್ ಎದುರಾಗಿದ್ದು ಮುಂದೇನು ಎಂಬ ಚಿಂತೆ ಕಾಡತೊಡಗಿದೆ. ಹಲವಾರು ಬೂತ್ ಮಟ್ಟದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ತಾಲೂಕು ಹೋಬಳಿ ಮಟ್ಟದ ಬಹುತೇಕ ದೋಸ್ತಿ ನಾಯಕರು ಇಂದು ಬೆಳಗ್ಗೆ ಸೇರ್ಪಡೆಗೊಂಡಿದ್ದಾರೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಶೃಂಗೇರಿಯ ಮಾಜಿ ಶಾಸಕ ಜೀವರಾಜ್ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿರುವ ನಾಯಕರು ಹೊಸ ತಲೆನೋವಾಗಿ ದೋಸ್ತಿ ಗಳಿಗೆ ತಯಾರಿಗಿದ್ದಾರೆ.

Facebook Comments

Post Author: RAVI